ಮಧ್ಯಪ್ರದೇಶ : ಗಂಡನಿಲ್ಲದ ವೇಳೆ ಮನೆಗೆ ನುಗ್ಗಿ ಮಹಿಳೆಯೋರ್ವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ಮಧ್ಯಪ್ರದೇಶದ ಸಿಂಧಿ ಜಿಲ್ಲೆಯಲ್ಲಿ ನಡೆದಿದೆ.

ಕೆಲಸಕ್ಕೆಂದು ಗಂಡ ಮನೆಯಿಂದ ಹೊರ ಹೋಗಿದ್ದಾನೆ. 13 ವರ್ಷದ ಮಗನ ಜೊತೆಗೆ ಮಹಿಳೆ ಮನೆಯಲ್ಲಿಯೇ ಇದ್ದಳು. ಈ ವೇಳೆಯಲ್ಲಿ ಸುಮಾರು 45 ವರ್ಷ ಪ್ರಾಯದ ವ್ಯಕ್ತಿ ಮನೆಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಭಯಗೊಂಡ ಮಗ ರಕ್ಷಣೆಗಾಗಿ ಮನೆಯಿಂದ ಹೊರಗೆ ಓಡಿ ಹೋಗಿದ್ದಾನೆ.
ವ್ಯಕ್ತಿಯಿಂದ ಬಿಡಿಸಿಕೊಳ್ಳಲು ಮಹಿಳೆ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಯತ್ನಿಸಿದ್ದಾಳೆ. ಕೊನೆಗೆ ಮನೆಯಲ್ಲಿದ್ದ ಚಾಕು ಕೈಗೆ ಸಿಕ್ಕಿದೆ. ಕೂಡಲೇ ಮಹಿಳೆ ಚಾಕುವಿನಿಂದ ವ್ಯಕ್ತಿಯ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ. ನಂತರ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ವ್ಯಕ್ತಿಯ ವಿರುದ್ದ ದೂರು ನೀಡಿದ್ದಾಳೆ. ಸಿಂಧಿ ಪೊಲೀಸರು ಇದೀಗ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿ ಹಾಗೂ ಮಹಿಳೆಯ ವಿರುದ್ದ ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.