ಹುಟ್ಟಿದ ಕೂಸಿಗೆ ಕುಲಾವಿ ಬದಲು ಇನ್ ಸ್ಟಾಗ್ರಾಂ ಅಕೌಂಟ್…! ಇದೆಂತಾ ಕಾಲ ಅಂದ್ರುನೆಟ್ಟಿಗರು…!!

ನಟ-ನಟಿಯರು ಮಗು ಹುಟ್ಟಿದಾಗ ಸಾಮಾನ್ಯವಾಗಿ ತಮ್ಮ ಮಕ್ಕಳ ಪೋಟೋ, ವಿಡಿಯೋವನ್ನು ಮುಚ್ಚಿಟ್ಟು, ಒಂದಿಷ್ಟು ಸಮಯದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ವಾಡಿಕೆ. ಆದರೆ ಸ್ಯಾಂಡಲ್ ವುಡ್ ನಟಿಮಣಿ ಮಾತ್ರ ಹುಟ್ಟಿದ ಮಗು ಕಣ್ಬಿಡೋಕೆ ಮುಂಚೇ ಇನ್ ಸ್ಟಾಗ್ರಾಂನಲ್ಲಿ ಮಗನ ಖಾತೆ ತೆರೆದು ಅಚ್ಚರಿ ಮೂಡಿಸಿದ್ದಾರೆ.

ಇತ್ತೀಚಿಗಷ್ಟೇ ತಾಯಿಯಾದ ಸ್ಯಾಂಡಲ್ವುಡ್ ಸುಂದರಿ ಮಯೂರಿ ಇಂತಹದೊಂದು ವಿಭಿನ್ನ ಕೆಲಸ ಮಾಡಿ ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾರೆ.  ಬೇಬಿ ಬಂಪ್ ಜೊತೆ ಮೈಚಳಿ ಬಿಟ್ಟು ಅದ್ದೂರಿ ಪೋಟೋಶೂಟ್ ಮಾಡಿಸಿದ್ದ ಮಯೂರಿ,  ಪ್ರಗ್ನೆನ್ಸಿಯಲ್ಲೂ ಹಲವು ಶೋಗಳಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದರು.

ಮೊನ್ನೆ ಮೊನ್ನೆಯಷ್ಟೇ ತಮಗೆ ಮಗು ಜನಿಸಿರೋ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಇಟ್ಸ್ ಬಾಯ್ ಬೇಬಿ ಎಂದು ಪೋಸ್ಟ್ ಮಾಡುವ ಹಂಚಿಕೊಂಡಿದ್ದ ಮಯೂರಿ ತಕ್ಷಣವೇ ಮಗನಿಗಾಗಿ ಸ್ಟಾರ್ ಬಾಯ್ ಹೆಸರಿನಲ್ಲಿ  ಇನ್ ಸ್ಟಾ ಖಾತೆ ತೆರೆದಿದ್ದಾರೆ. ಅಷ್ಟೇ ಅಲ್ಲ ಈಗಾಗಲೇ ಈ ಅಕೌಂಟ್ ಬರೋಬ್ಬರಿ 2 ಸಾವಿರ ಫಾಲೋವರ್ಸ್ ಕೂಡ ಸಿಕ್ಕಿದ್ದಾರೆ.

ಸ್ಯಾಂಡಲ್ ವುಡ್ ಸ್ಟಾರ್ ಗಳು ಮಕ್ಕಳ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಇದೇ ಮೊದಲೇನಲ್ಲ. ಶ್ವೇತಾ ಶ್ರೀವಾಸ್ತವ್, ಅನುಪ್ರಭಾಕರ್,ಲೂಸ್ ಮಾದ,ರಾಧಿಕಾ ಪಂಡಿತ್ ಹೀಗೆ ಎಲ್ಲರೂ ತಮ್ಮ ಮಕ್ಕಳ ಪೋಟೋ ವಿಡಿಯೋವನ್ನು ತಮ್ಮ ಅಕೌಂಟ್ ನಲ್ಲೇ ಹಂಚಿಕೊಂಡು ಅಭಿಮಾನಿಗಳಿಗೆ ಸಪ್ರೈಸ್ ನೀಡ್ತಿದ್ದರು.

https://instagram.com/starboii_1111?igshid=1nyfwwqiwg6t

ಇನ್ನು ಮೇಘನಾ ಸರ್ಜಾ ಕೂಡ ಜ್ಯೂನಿಯರ್ ಚಿರು ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ನೀಡುತ್ತಿದ್ದಾರೆ. ಆದರೆ ಮಗು ಹುಟ್ಟುತ್ತಿದ್ದಂತೆ ಮಗುವಿಗಾಗಿ ಸೋಷಿಯಲ್ ಮೀಡಿಯಾದ ಅಕೌಂಟ್ ತೆರೆದ ಮೊದಲ ನಟಿ ಮಯೂರಿ ಇರಬೇಕು ಅಂತಿದ್ದಾರೆ ನೆಟ್ಟಿಗರು.

ಹಲವರು ಈ ಅಕೌಂಟ್ ಹಾಗೂ ಮಯೂರಿ ಶೇರ್ ಮಾಡಿದ ಮಗುವಿನೊಂದಿಗೆ ಸೂರ್ಯನ ಬೆಳಕಿನ ಪೋಟೋಗಳನ್ನು ನೋಡಿ ಖುಷಿ ವ್ಯಕ್ತಪಡಿಸಿದ್ದರೇ, ಇನ್ನು ಕೆಲವರು ಕೂಸಿಗೆ ಕುಲಾವಿ ಹೊಲಸೋ ಬದಲು ಇದೇನು ಹೊಸ ಅವತಾರ ಅಂತ ಕಾಲೆಳೇಯುತ್ತಿದ್ದಾರೆ.ಇನ್ನು ಕೆಲವರು ಇದೆಂತಾ ಕಾಲ ಬಂತು ಅಂತ ಮೂಗು ಮುರಿಯುತ್ತಿದ್ದಾರೆ.

Comments are closed.