Kantara Box Office Collection: ಬಾಕ್ಸಾಫೀಸ್​ ಕಲೆಕ್ಷನ್​ನಲ್ಲಿ ಕೆಜಿಎಫ್​ 2 ಸಿನಿಮಾವನ್ನೇ ಹಿಂದಿಕ್ಕಿದ ಕಾಂತಾರ

Kantara Box Office Collection: ಕಾಂತಾರ ಸಿನಿಮಾವು ಸ್ಯಾಂಡಲ್​ವುಡ್​ನ ಕೀರ್ತಿಯನ್ನು ಇನ್ನೊಂದು ಹಂತಕ್ಕೆ ಏರಿಸಿದೆ. ಕೆಜಿಎಫ್​ 2 ಸಿನಿಮಾದ ಬಳಿಕ ಸಿನಿಮಾ ಪ್ರಿಯರಿಗೆ ಚಂದನವನದ ಹೆಸರನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿತ್ತು. ಇದೀಗ ಕಾಂತಾರ ಸಿನಿಮಾದ ಬಳಿಕ ಸ್ಯಾಂಡಲ್​ವುಡ್​ನ ಸಿನಿಮಾಗಳ ಮೇಲಿನ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗುವಂತಾಗಿದೆ. ಹೊಂಬಾಳೆ ಫಿಲ್ಮ್ಸ್​​ ಬ್ಯಾನರ್​ನ ಅಡಿಯಲ್ಲಿ ವಿಜಯ್​ ಕಿರಂಗದೂರು ನಿರ್ಮಿಸಿ ರಿಷಬ್​ ಶೆಟ್ಟಿ ನಿರ್ದೇಶಿಸಿ ನಟಿಸಿದ ಆ್ಯಕ್ಷನ್​ -ಥ್ರಿಲ್ಲರ್​ ಸಿನಿಮಾದಲ್ಲಿ ರಿಷಭ್​ ಶೆಟ್ಟಿ ಕಂಬಳ ಗದ್ದೆಯ ಚಾಂಪಿಯನ್​ ಆಗಿ ಹಾಗೂ ಭೂತಕೊಲ ಕಟ್ಟುವ ಕುಟುಂಬದ ಪುತ್ರನಾಗಿ ನಟಿಸಿದ್ದಾರೆ. ತಮ್ಮ ಊರನ್ನು ಉಳಿಸಿಕೊಳ್ಳಲು ಮೊದಲು ಅರಣ್ಯಾಧಿಕಾರಿ ವಿರೋಧವನ್ನು ಕಟ್ಟಿಕೊಳ್ಳುವ ಶಿವ(ರಿಷಭ್​) ಬಳಿಕ ಊರಿನ ಮುಖಂಡನನ್ನೇ ಎದುರಿಸುವ ಕತೆಯನ್ನು ಈ ಸಿನಿಮಾ ಹೊಂದಿದೆ. ಈ ಸಿನಿಮಾದಲ್ಲಿ ಸಪ್ತಮಿ ಗೌಡ, ಕಿಶೋರ್​ ಕುಮಾರ್​, ಅಚ್ಯುತ್​ ಕುಮಾರ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಕಾಂತಾರ- ಒಂದು ದಂತಕತೆಯೆಂದ ರಿಷಭ್​ ಶೆಟ್ಟಿಯವರ ಈ ಸಿನಿಮಾ ಇದೀಗ ಕರ್ನಾಟಕದಲ್ಲಿ ಮತ್ತೊಂದು ಹೊಸ ದಾಖಲೆಯನ್ನು ಬರೆದಿದೆ. ರಾಕಿಂಗ್​ ಸ್ಟಾರ್​ ಯಶ್​ ಅಭಿನಯಲದ ಬ್ಲಾಕ್​ ಬಸ್ಟರ್​ ಸಿನಿಮಾ ಕೆಜಿಎಫ್​ ಹಾಗೂ ಕೆಜಿಎಫ್​ 2 ಸಿನಿಮಾ ಕಲೆಕ್ಷನ್​ನ್ನು ಕರ್ನಾಟಕದಲ್ಲಿ ಹಿಂದಿಕ್ಕುವ ಮೂಲಕ ಕಾಂತಾರ ತನ್ನ ಮುಡಿಗೆ ಮತ್ತೊಂದು ಗರಿಯನ್ನು ಸೇರಿಸಿದೆ.


ಕಾಂತಾರ ಸಿನಿಮಾವು ಕರ್ನಾಟಕದಲ್ಲಿ ಇಲ್ಲಿಯವರೆಗೆ ಸರಿ ಸುಮಾರು 111 ಕೋಟಿ ರೂಪಾಯಿಗಳನ್ನು ಗಳಿಸಿದೆ.ಕಾಂತಾರ ತೆರೆಕಂಡು ನಾಲ್ಕನೇ ವಾರಾಂತ್ಯದಲ್ಲಿ 14 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇದು ಕೆಜಿಎಫ್​ 2 ಸಿನಿಮಾ ತನ್ನ ನಾಲ್ಕನೇ ವಾರದಲ್ಲಿ ಗಳಿಸಿದ ಕಲೆಕ್ಷನ್​​ನ ದುಪ್ಪಟ್ಟು ಹಣವಾಗಿದೆ. ವೀಕೆಂಡ್​ ಹಾಗೂ ದೀಪಾವಳಿ ಹಬ್ಬ ಒಟ್ಟೊಟ್ಟಾಗಿ ಬಂದ ಹಿನ್ನೆಲೆಯಲ್ಲಿ ಕಾಂತಾರ ಸಿನಿಮಾ ನಾಲ್ಕನೇ ವಾರದಲ್ಲಿಯೂ ದಾಖಲೆಯ ಕಲೆಕ್ಷನ್​ ಮಾಡಿದೆ. ಬಾಕ್ಸಾಫೀಸಿನಲ್ಲಿ ಈ ಸಿನಿಮಾ ಒಟ್ಟು 170 ಕೋಟಿ ರೂಪಾಯಿಗಳನ್ನು ತಲುಪಿದೆ. ನಾಲ್ಕನೇ ವಾರದ ಅಂತ್ಯದ ವೇಳೆಗೆ ಕಾಂತಾರ ಸಿನಿಮಾ 200 ಕೋಟಿ ರೂಪಾಯಿಗಳನ್ನು ಗಳಿಸುವ ಸಾಧ್ಯತೆಯಿದೆ.
ಈ ಎಲ್ಲದರ ನಡುವೆ ಕಾಂತಾರ ಸಿನಿಮಾ ವಿದೇಶದಲ್ಲಿ 18 ಕೋಟಿ ರೂಪಾಯಿಗಳನ್ನು ಗಳಿಸಿದೆ. ವಿಶ್ವಾದ್ಯಂತ 188 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇದು ಯಶ್​ ಅಭಿನಯದ ಕೆಜಿಎಫ್​ ಸಿನಿಮಾವನ್ನು ಹಿಂದಿಕ್ಕಿ ಸಾರ್ವಕಾಲಿಕ ಅತೀ ಹೆಚ್ಚು ಗಳಿಕೆ ಮಾಡಿದ ಕನ್ನಡ ಸಿನಿಮಾ ಎಂಬ ಖ್ಯಾತಿಯನ್ನು ಗಳಿಸಿದೆ.


ವಿಶ್ವಾದ್ಯಂತ ತಮ್ಮ ಸಿನಿಮಾಗೆ ಸಿಗುತ್ತಿರುವ ವ್ಯಾಪಕ ಬೆಂಬಲದ ಕುರಿತು ಮಾತನಾಡಿದ ನಿರ್ದೇಶಕ ಹಾಗೂ ನಟ ರಿಷಭ್​ ಶೆಟ್ಟಿ, ಭಾರತದ ಜನತೆ ಭಾವುಕ ಜೀವಿಗಳಾಗಿದ್ದಾರೆ. ಅವರು ನಮ್ಮ ಸಂಸ್ಕೃತಿಯಲ್ಲಿ ಬೇರೂರಿರುವ ಕತೆಗಳನ್ನು ಗೌರವಿಸುತ್ತಾರೆ ಎಂದು ಹೇಳಿದ್ದಾರೆ .

ಇದನ್ನು ಓದಿ : World’s dirtiest man: ವಿಶ್ವದ ಅತ್ಯಂತ ಕೊಳಕು ವ್ಯಕ್ತಿ 94ನೇ ವಯಸ್ಸಿಗೆ ನಿಧನ

ಇದನ್ನೂ ಓದಿ : Covid-19 Could Accelerate Ageing:ಕೋವಿಡ್​ 19ನಿಂದಾಗಿ ಮನುಷ್ಯರಲ್ಲಿ ವಯಸ್ಸಾಗುವಿಕೆ ವೇಗ ಹೆಚ್ಚಾಗಿದೆ : ಅಧ್ಯಯನ

Kantara Box Office Collection: Rishabh Shetty’s Magnum Opus Surpasses Yash’s KGF in Karnataka

Comments are closed.