IPL 2021 : ಗಾಯಕ್ವಾಡ್‌ ಅಬ್ಬರಕ್ಕೆ ಮಂಕಾದ ಮುಂಬೈ : ಅಗ್ರಸ್ಥಾನಕ್ಕೇರಿದ ಚೆನ್ನೈ

ದುಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಶುಭಾರಂಭ ಮಾಡಿದೆ. ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಅವರ ಅಬ್ಬರ ಧೋನಿ ಚಾಣಾಕ್ಷತೆ ಯಿಂದ ಮುಂಬೈ ಸೋಲನ್ನು ಕಂಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ತಂಡಕ್ಕೇ ಆರಂಭದಲ್ಲಿಯೇ ಟ್ರೆಂಟ್‌ ಬೋಲ್ಟ್‌ ಹಾಗೂ ಅಡಮ್‌ ಮೀಲ್ನೆ ಆಘಾತ ನೀಡಿದ್ರು. ತಂಡ ಮೂರು 7 ರನ್‌ ಗಳಿಸುವ ಹೊತ್ತಿಗೆ 3 ಆಟಗಾರರು ಶೂನ್ಯಕ್ಕೆ ಔಟಾಗಿ ಫೆವಿಲಿಯನ್‌ ಸೇರಿದ್ದರು. ಆದರೆ ಯುವ ಆಟಗಾರ ಋತುರಾಜ್‌ ಗಾಯಕ್ವಾಡ್‌ ತನ್ನಷ್ಟಕ್ಕೆ ರನ್‌ ಗಳಿಸುತ್ತಲೇ ಸಾಗಿದ್ದಾರೆ. ನಾಲ್ಕು ವಿಕೆಟ್‌ ಕಳೆದುಕೊಂಡಿದ್ದ ಚೆನ್ನೈ ತಂಡಕ್ಕೆ ರವೀಂದ್ರ ಜಡೇಜಾ ಹಾಗೂ ಗಾಯಕ್ವಾಡ್‌ ಒಂದಿಷ್ಟು ಹೊತ್ತು ತಂಡವನ್ನು ಆಧರಿಸುವ ಕಾರ್ಯವನ್ನು ಮಾಡಿದ್ದರು.

ಆದರೆ ರವೀಂದ್ರ ಜಡೇಜಾ 26ರನ್‌ ಗಳಿಗೆ ವಿಕೆಟ್‌ ಒಪ್ಪಿಸುತ್ತಿದ್ದಂತೆಯೇ ಡ್ವೇನ್‌ ಬ್ರಾವೋ ಜೊತೆಯಾದ ಋತುರಾಜ್‌ ಉತ್ತಮ ಜೊತೆಯಾಟ ನೀಡಿದ್ರು. ಅಂತಿಮವಾಗಿ ಋತುರಾಜ್‌ ಗಾಯಕ್ವಾಡ್‌ 88 ರನ್‌ ಹಾಗೂ ಬ್ರಾವೋ 23 ರನ್‌ ಆಟದ ನೆರವಿನಿಂದ ಚೆನ್ನೈ ಸೂಪರ್‌ ಕಿಂಕ್ಸ್‌ ತಂಡ 20 ಓವರ್‌ಗಳಲ್ಲಿ 156 ರನ್‌ ಗಳಿಸಿದೆ.

ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಬ್ಯಾಟಿಂಗ್‌ಗೆ ಇಳಿದ ಮುಂಬೈ ತಂಡಕ್ಕೆ ಆರಂಭಿಕರಾದ ಅನ್ಮೋಲ್‌ ಪ್ರಿತ್‌ ಸಿಂಗ್‌ ಹಾಗೂ ಕ್ವಿಂಟನ್‌ ಡಿಕಾಕ್‌ ಉತ್ತಮ ಆರಂಭ ಒದಗಿಸಿದ್ರು. ಡಿಕಾಕ್‌ 17 ರನ್‌ ಗಳಿಸಿದ್ರೆ ಎ.ಸಿಂಗ್‌ 16 ರನ್‌ ಗಳಿಸಿ ಔಟಾದ್ರು. ಭರವಸೆಯ ಆಟಗಾರ ಸೂರ್ಯ ಕುಮಾರ್‌ ಯಾದವ್‌ ನಿರಾಸೆಯನ್ನು ಅನುಭವಿಸಿದ್ರು. ಆದರೆ ಸೌರಬ್‌ ತಿವಾರ್‌ ಆಕರ್ಷಕ ಅರ್ಧ ಶತಕ ಗಳಿಸಿದ್ರು. ಸೌರಬ್‌ ತಿವಾರಿ 40 ಎಸೆತಗಳಲ್ಲಿ 50 ರನ್‌ ಗಳಿಸುತ್ತಲೇ ಮುಂಬೈ ಗೆಲ್ಲುವ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಚೆನ್ನೈ ಬೌಲರ್‌ಗಳ ದಾಳಿಗೆ ತತ್ತರಿಸಿದ ಮುಂಬೈ ತಂಡ ಕೇವಲ 20ಓವರ್‌ಗಳಲ್ಲಿ 136 ರನ್‌ ಗಳಿಸಲು ಮಾತ್ರವೇ ಸಾಧ್ಯವಾಗಿಲ್ಲ.

ಇದನ್ನೂ ಓದಿ : Virat Kohli – RCB : IPL ಬೆನ್ನಲ್ಲೇ ಆರ್‌ಸಿಬಿ ನಾಯಕತ್ವಕ್ಕೆ ಕೊಯ್ಲಿ ರಾಜೀನಾಮೆ

ಇದನ್ನೂ ಓದಿ : Anil Kumble : ಟೀಂ ಇಂಡಿಯಾಕ್ಕೆ ಕನ್ನಡಿಗ ಅನಿಲ್‌ ಕುಂಬ್ಳೆ ಕೋಚ್‌

( CSK vs MI IPL 2021 : Chennai Super Kings beat Mumbai Indians 20 runs )

Comments are closed.