granting divorce to couple : ಭಾವನೆಗಳೇ ಇಲ್ಲದ ವೈವಾಹಿಕ ಸಂಬಂಧದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ದೆಹಲಿ ಹೈಕೋರ್ಟ್​

granting divorce to couple : ಮದುವೆ ಎಂಬ ಸಂಬಂಧವನ್ನು ತಾತ್ಕಾಲಿಕವಾಗಿ ಬಳಸಿಕೊಂಡರೆ ಅದು ಕೇವಲ ಒಂದು ಕಾನೂನು ಒಪ್ಪಂದವಾಗಿ ಮಾತ್ರ ಉಳಿದುಬಿಡುತ್ತದೆ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ ಮಹಿಳೆಯ ಮನವಿಯನ್ನು ಪುರಸ್ಕರಿಸಿದ ದೆಹಲಿ ಹೈಕೋರ್ಟ್​, ಪತಿ ಪತ್ನಿಯ ನಡುವೆ ಕೇವಲ ಕಾನೂನು ರೀತಿಯಲ್ಲಿ ಮಾತ್ರ ದಂಪತಿ ಎಂಬ ಸಂಬಂಧ ಉಳಿದಿದ್ದರೆ ಅದು ಇಬ್ಬರ ಜೀವನವನ್ನೂ ಹಾಳು ಮಾಡುತ್ತದೆ. ಮದುವೆಯ ಸಂಬಂಧದಲ್ಲಿ ಭಾವನೆಗಳು ಇಲ್ಲವಾದರೆ ಅದು ಮಾನಸಿಕವಾಗಿ ಹಿಂಸೆ ಎನಿಸುತ್ತದೆ ಎಂದು ಹೇಳುವ ಮೂಲಕ ದೆಹಲಿ ಹೈಕೋರ್ಟ್ ದಂಪತಿಗೆ ವಿಚ್ಚೇದನವನ್ನು ನೀಡಿದೆ.


ಈ ಹಿಂದೆ ಇವರಿಬ್ಬರ ನಡುವಿನ ವಿಚ್ಚೇದನ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ತಿರಸ್ಕರಿಸಿತ್ತು. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಿಳೆಯು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್​ ವಿಚ್ಚೇದನ ಆದೇಶ ನೀಡಿದೆ. ವಿಚ್ಚೇದನದ ಬಳಿಕ ನಿಮ್ಮಿಷ್ಟದ ಜೀವನ ನಡೆಸಿ ಎಂದು ದಂಪತಿಗೆ ಕೋರ್ಟ್ ಹೇಳಿದೆ.


ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​ನ ನ್ಯಾಯಮೂರ್ತಿ ವಿಪಿನ್​ ಸಿಂಘಿ ಹಾಗೂ ಜಸ್ಮಿತ್​ ಸಿಂಗ್​ ನೇತೃತ್ವದ ನ್ಯಾಯಪೀಠವು ಮದುವೆ ಎನ್ನುವುದು ಪತಿ ಪತ್ನಿಯ ನಡುವಿನ ಭಾವನಾತ್ಮಕ ಸಂಬಂಧವಾಗಿದೆ. ಇದು ಕೇವಲ ಕಾನೂನು ಒಪ್ಪಂದಕ್ಕೆ ಸೀಮಿತವಾಗಬಾರದು ಎಂದು ಹೇಳಿದೆ.


ವೈವಾಹಿಕ ಸಂಬಂಧವು ಎರಡು ಜೀವಗಳನ್ನು ಒಂದುಗೂಡಿಸುತ್ತದೆ. ದಂಪತಿ ಸುಖ – ದುಃಖ, ಸಂತೋಷ, ಕಷ್ಟ ಕಾರ್ಪಣ್ಯ ಹೀಗೆ ಎಲ್ಲವನ್ನು ಸಮಾನಾಗಿ ಹಂಚಿಕೊಳ್ಳಬೇಕು. ಇಬ್ಬರೂ ಸೇರಿ ಶಾಶ್ವತವಾದ ನೆನಪುಗಳನ್ನು ಕಲೆ ಹಾಕಬೇಕು. ಹಾಗೂ ಉತ್ತಮ ಭವಿಷ್ಯಕ್ಕಾಗಿ ಇಬ್ಬರೂ ಶ್ರಮಿಸುವಂತಿರಬೇಕು ಎಂದು ಕೋರ್ಟ್ ಹೇಳಿದೆ.


ಆದರೆ ಈ ಪ್ರಕರಣದಲ್ಲಿ ದಂಪತಿ ನಡುವಿನ ಕಾನೂನಿನ ಪ್ರಕಾರ ಪತಿ – ಪತ್ನಿ ಎಂಬ ಸಂಬಂಧ ಇದೆ ಹೊರತು ಇನ್ಯಾವುದೇ ಸಂಬಂಧಗಳು ಗೋಚರವಾಗುತ್ತಿಲ್ಲ. ಪತಿಯು ತನ್ನ ಪತ್ನಿಯನ್ನು ತಾತ್ಕಾಲಿಕ ಸಮಯದವರೆಗೆ ಮಾತ್ರ ಸಂಗಾತಿಯಂತೆ ಕಂಡಿದ್ದಾನೆ. ಪತ್ನಿಯು ವಿದ್ಯಾವಂತೆಯಾಗಿದ್ದಾಳೆ. ಆಕೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇಬ್ಬರಿಗೆ ಮದುವೆಯಾಗಿ 11 ವರ್ಷಗಳೇ ಕಳೆದಿದ್ದರೂ ಸಹ ಇವರು ಒಟ್ಟಾಗಿ ಜೀವನ ನಡೆಸಿಲ್ಲ. ಪತಿಯ ನಡವಳಿಕೆಯಿಂದ ಆತನಿಗೆ ವೈವಾಹಿಕ ಸಂಬಂಧದಲ್ಲಿ ಯಾವುದೇ ಆಸಕ್ತಿ ಇಲ್ಲ ಎಂಬುದು ಸ್ಪಷ್ಟವಾಗಿ ಗೋಚರವಾಗಿದೆ. ಇದು ಪತ್ನಿಯ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಬಹುದು.


ಇದು ಮಾತ್ರವಲ್ಲದೇ ಪತಿಯು ತನ್ನ ಪತ್ನಿಯ ತಂದೆಯ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಈ ವ್ಯಕ್ತಿಯು ತನ್ನ ಮಾವನ ಚಾರಿತ್ರ್ಯವಧೆ ಮಾಡಲು ಯತ್ನಿಸಿದ್ದಾರೆ. ತನ್ನ ತಂದೆಯ ಚಾರಿತ್ರ್ಯವಧೆ ಮಾಡುವ ಪತಿಯ ಜೊತೆಯಲ್ಲಿ ಯಾವ ಪುತ್ರಿಯೂ ಜೀವನ ನಡೆಸಲು ಇಚ್ಛಿಸುವುದಿಲ್ಲ. ಪತಿಯ ವರ್ತನೆ ಕೂಡ ಪತ್ನಿಯ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಕೋರ್ಟ್ ಹೇಳಿದೆ.

Marriage without feelings is just a legal bond, says Delhi HC while granting divorce to couple

ಇದನ್ನು ಓದಿ : cop steal Goats : ಭರ್ಜರಿ ಬಾಡೂಟಕ್ಕೆ ಎರಡು ಮೇಕೆಕದ್ದು ಸಿಕ್ಕಿಬಿದ್ದ ಎಎಸ್‌ಐ ಸಸ್ಪೆಂಡ್‌

ಇದನ್ನೂ ಓದಿ : Uddhab Bharali : ಪದ್ಮಶ್ರೀ ಪುರಸ್ಕೃತ ಉದ್ಧಬ್​ ಭಾರಾಲಿ ವಿರುದ್ಧ ಅತ್ಯಾಚಾರ ಆರೋಪ

Comments are closed.