PM Security Lapse : ಪ್ರಧಾನಿ ಭದ್ರತಾ ಲೋಪ: ವಿರಳಾತಿವಿರಳ ಪ್ರಕರಣವೆಂದ ಸುಪ್ರೀಂಕೋರ್ಟ್

ನವದೆಹಲಿ: ಪಂಜಾಬ್‌(Punjab)ನ ಭಂಟಿಡಾದಿಂದ ಫಿರೋಜ್‌ಪುರ್‌ಗೆ ರಸ್ತೆ ಮಾರ್ಗದಲ್ಲಿ ಹೊರಟಿದ್ದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಕಾರು ಮತ್ತು ಬೆಂಗಾವಲು ವಾಹನಗಳು ರೈತರ ಪ್ರತಿಭಟನೆ ಕಾರಣ ಸಂಚರಿಸಲು ಆಗದೆ ಫ್ಲೈ ಓವರ್‌ನಲ್ಲಿ 20 ನಿಮಿಷ ನಿಂತು ಎದುರಾದ ಭದ್ರತಾ ಲೋಪವನ್ನು (PM Narendra Modi Security Lapse in Punjab) ವಿರಳಾತಿವಿರಳ (Rarest of the Rare) ಪ್ರಕರಣ ಎಂದು ಸುಪ್ರೀಂಕೋರ್ಟ್‌ (Supreme Court) ಹೇಳಿದೆ.

ಪ್ರಧಾನಿಗೆ ಎದುರಾದ ಭದ್ರತಾ ಲೋಪದ ಪ್ರಕರಣ ಸಮಗ್ರ ತನಿಖೆ ನಡೆಯಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಆಗಬೇಕು. ಮುಂದೆ ಈ ರೀತಿ ಲೋಪಗಳು ಉಂಟಾಗದಂತೆ ಸರ್ಕಾರಗಳು ಎಚ್ಚರಿಕೆ ವಹಿಸಬೇಕು ಎಂದು ಕೋರಿ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು. ಇದರ ತುರ್ತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಪೀಠ, ಸಾಂವಿಧಾನಿಕ ಹುದ್ದೆಯಲ್ಲಿರುವ ದೇಶದ ಮುಖ್ಯಸ್ಥರ ಭದ್ರತೆಯಲ್ಲಿ ಆಗಿರುವ ಲೋಪವು ವಿರಳಾತಿವರಳ ಪ್ರಕರಣ ಎಂದು ಹೇಳಿದೆ. ಈ ಮಧ್ಯೆ, ಪಂಜಾಬ್ ಸರ್ಕಾರ ಭದ್ರತಾ ಲೋಪ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದ್ದು; ತನಿಖೆ ನೇಮಿಸಿರುವ ತಂಡವು ಮೂರು ದಿನಗಳಲ್ಲಿ ವರದಿ ಸಲ್ಲಿಸಲಿದೆ ಎಂದು ಪಂಜಾಬ್ ಸರ್ಕಾರ ಕೇಂದ್ರಕ್ಕೆ ತಿಳಿಸಿದೆ.

ಪಂಜಾಬ್‌ ಪೊಲೀಸರು ಭದ್ರತಾ ಲೋಪ ಎಸಗಿದ್ದಾರೆಂಬ ಆರೋಪವನ್ನು ಸಿಎಂ ಚರಣಜಿತ್ ಸಿಂಗ್‌ ಚನ್ನಿ ತಳ್ಳಿಹಾಕಿದ್ದರು. ಕಡೆ ಕ್ಷಣದಲ್ಲಿ ಪ್ರಧಾನಿಯವರು ರಸ್ತೆ ಮೂಲಕ ಪಯಣ ಬೆಳೆಸುವ ನಿರ್ಧಾರ ಕೈಗೊಂಡಿದ್ದರಿಂದ್ದ ಗೊಂದಲ ಕಾರಣ ರೀತಿ ಆಗಿದೆ. ಇದು ಉದ್ದೇಶ ಪೂರ್ವಕ ಅಲ್ಲ ಎಂದಿದ್ದರು. ಈ ಮಧ್ಯೆ, ಈ ಪ್ರಕರಣ ಸಂಬಂಧ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆಗೂ ಚನ್ನಿ ದೂರವಾಣಿ ಮೂಲಕ ಮಾತನಾಡಿದ್ದಾರೆ.

ಇದನ್ನೂ ಓದಿ : ಪದ್ಮಶ್ರೀ ಪುರಸ್ಕೃತ ಉದ್ಧಬ್​ ಭಾರಾಲಿ ವಿರುದ್ಧ ಅತ್ಯಾಚಾರ ಆರೋಪ

ಇದನ್ನೂ ಓದಿ: PM Modi rally cancelled : ಪಂಜಾಬ್​ನಲ್ಲಿ ಭದ್ರತಾ ಲೋಪ: ಪ್ರಧಾನಿ ರ್ಯಾಲಿ ರದ್ದು

ಇದನ್ನೂ ಓದಿ : ಕೋವಿಶೀಲ್ಡ್ ಅಥವಾ ಕೋವಾಕ್ಸಿನ್ : ಮಿಕ್ಸ್ ಬೂಸ್ಟರ್ ಡೋಸ್ ಅವಕಾಶವಿಲ್ಲಎಂದ ಕೇಂದ್ರ ಸರಕಾರ

(PM Security Lapse “Rarest Of The Rare”: Centre Tells Supreme Court)

Comments are closed.