Black box : ತಮಿಳುನಾಡಿನಲ್ಲಿ ಪತನಗೊಂಡ ಸೇನಾ ಹೆಲಿಕಾಪ್ಟರ್​ನ ಬ್ಲ್ಯಾಕ್​ ಬಾಕ್ಸ್​ ಪತ್ತೆ

ಸಿಡಿಎಸ್​​​ ಜನರಲ್​​ ಬಿಪಿನ್​ ರಾವತ್​ ( CDS Gen Bipin Rawat ) ಹಾಗೂ ಅವರ ಪತ್ನಿ ಮತ್ತು ಅವರ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್​ ( IAF chopper ) ಪತನಗೊಂಡ ಬಳಿಕ ಬ್ಲಾಕ್​ ಬ್ಯಾಕ್ಸ್ (Black box)​ ಪತ್ತೆ ಹಚ್ಚುವಲ್ಲಿ ಕೊನೆಗೂ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ಬ್ಲ್ಯಾಕ್​ ಬಾಕ್ಸ್​ನ್ನು ಹೆಚ್ಚಿನ ತನಿಖೆಗೆ ಬಳಕೆ ಮಾಡಿಕೊಳ್ಳಲಾಗುತ್ತೆ.

ದುರಂತ ನಡೆದ ಸ್ಥಳದಿಂದ 300 ಮೀಟರ್​ನಿಂದ 1 ಕಿಲೋಮೀಟರ್​​ ದೂರದವರೆಗೆ ಬ್ಲ್ಯಾಕ್​ ಬಾಕ್ಸ್​ಗಾಗಿ ಅಧಿಕಾರಿಗಳು ನಿನ್ನೆಯಿಂದಲೇ ಶೋಧ ಕಾರ್ಯ ನಡೆಸಿದ್ದರು. ಕೊನೆಗೂ ಬ್ಲ್ಯಾಕ್​ ಬಾಕ್ಸ್​ ಪತ್ತೆಯಾಗಿದ್ದು ಇದರಲ್ಲಿ ಹೆಲಿಕಾಪ್ಟರ್​ ಪತನಕ್ಕೆ ಕಾರಣ ತಿಳಿಯಬಹುದು ಎಂದು ನಿರೀಕ್ಷಿಸಲಾಗಿದೆ.

ಬ್ಲ್ಯಾಕ್​ ಬಾಕ್ಸ್​ ಎಂಬುದು ಹೆಲಿಕಾಪ್ಟರ್​ ಹಾಗೂ ವಿಮಾನಗಳಲ್ಲಿ ಅಳವಡಿಸಲಾಗುವ ಒಂದು ಎಲೆಕ್ಟ್ರಾನಿಕ್​ ಸಾಧನವಾಗಿದೆ. ಈ ಬ್ಲ್ಯಾಕ್​ ಬಾಕ್ಸ್​ನ ಸಹಾಯದಿಂದ ಯಾವ ಕಾರಣದಿಂದ ಹೆಲಿಕಾಪ್ಟರ್​ ಅಥವಾ ವಿಮಾನ ಪತನಗೊಂಡಿದೆ ಎಂಬುದನ್ನು ಪತ್ತೆ ಮಾಡಬಹುದಾಗಿದೆ. ಪತನಕ್ಕೆ ಕಾರಣ ತಿಳಿದುಕೊಳ್ಳಬೇಕೆಂದೇ ಬ್ಲ್ಯಾಕ್​​ ಬಾಕ್ಸ್​ನ್ನು ಅಳವಡಿಸಲಾಗುತ್ತದೆ.

ತಮಿಳುನಾಡಿನ ಕುನೂರ್​​​ ಬಳಿಯ ನೀಲಗಿರಿ ಅರಣ್ಯದಲ್ಲಿ ನಿನ್ನೆ ಸೇನಾ ಹೆಲಿಕಾಪ್ಟರ್​ ಪತನವಾಗಿತ್ತು. ಈ ಹೆಲಿಕಾಪ್ಟರ್​ನಲ್ಲಿದ್ದ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​, ಅವರ ಪತ್ನಿ ಮಧುಲಿಕಾ ರಾವತ್​ ಸೇರಿದಂತೆ ಸೇನೆಯಲ್ಲಿದ್ದ 13 ಅಧಿಕಾರಿಗಳು ನಿನ್ನೆ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಗ್ರೂಪ್​ ಕ್ಯಾಪ್ಟನ್​​ ವರುಣ್​ ಸಿಂಗ್​ ಮಾತ್ರ ಬದುಕುಳಿದಿದ್ದು ವೆಲ್ಲಿಂಗ್ಟನ್​ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರುಣ್​ ಸಿಂಗ್​ ದೇಹ 80 ಪ್ರತಿಶತ ಸುಟ್ಟು ಹೋಗಿದೆ ಎನ್ನಲಾಗಿದ್ದು ಅವರನ್ನು ಲೈಫ್​ ಸಪೋರ್ಟ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಕ್ಯಾಪ್ಟನ್​ ವರುಣ್​ ಸಿಂಗ್​ ಜೀವನ್ಮರಣ ಹೋರಾಟ : ಸಂಸತ್ತಿಗೆ ರಾಜನಾಥ್​ ಸಿಂಗ್​ ಮಾಹಿತಿ

ತಮಿಳುನಾಡಿನ ಕುನೂರ್​ ಬಳಿಯ ನೀಲಗಿರಿ ಅರಣ್ಯದಲ್ಲಿ ನಿನ್ನೆ ಸಂಭವಿಸಿದ ಸೇನಾ ಹೆಲಿಕಾಪ್ಟರ್​ ದುರಂತದ ವಿಸ್ತೃತ ವರದಿಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಸಂಸತ್ತಿಗೆ ನೀಡಿದ್ದಾರೆ. ಅತಿಯಾದ ದುಃಖ ಹಾಗೂ ಭಾರವಾದ ಹೃದಯದಿಂದ 2021ರ ಡಿಸೆಂಬರ್​ 8ರಂದು ಮಧ್ಯಾಹ್ನದ ವೇಳೆಗೆ ಮಿಲಿಟರಿ ಹೆಲಿಕಾಪ್ಟರ್​ ಪತನವಾದ ಬಗ್ಗೆ ದುರದೃದಷ್ಟಕರ ವರದಿಯನ್ನು ನೀಡಲು ನಾನಿಲ್ಲಿ ನಂತಿದ್ದೇನೆ. ಈ ಹೆಲಿಕಾಪ್ಟರ್​ನಲ್ಲಿ ದೇಶದ ಮೊದಲ ಸೇನಾ ಮುಖ್ಯಸ್ಥ ಬಿಪಿನ್​​ ರಾವತ್​ ಕೂಡ ಇದ್ದರು.

ಸಿಡಿಎಸ್​ ಜನರಲ್​ ಬಿಪಿನ್​ ರಾವತ್​​​ ವೆಲ್ಲಿಂಗ್ಟನ್​​ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿಗೆ ಕಾಲೇಜಿಗೆ ನಿಗದಿತ ಭೇಟಿಗೆ ತೆರಳುತ್ತಿದ್ದರು. ವಾಯುಪಡೆಯ ಎಂಐ 17 ವಿ5 ಹೆಲಿಕಾಪ್ಟರ್​ ನಿನ್ನೆ ಬೆಳಗ್ಗೆ 11.48ರ ಸುಮಾರಿಗೆ ಸೂಲೂರು ಏರ್​ಬೇಸ್​ನಿಂದ ಟೇಕಾಫ್​ ಆಗಿತ್ತು. ಮಧ್ಯಾಗ್ನ 12:15ರ ಸುಮಾರಿಗೆ ವೆಲ್ಲಿಂಗ್ಟನ್​ನಲ್ಲಿ ಲ್ಯಾಂಡ್​ ಆಗಬೇಕಿತ್ತು.

ಆದರೆ ಸುಮಾರು 12:08ರ ಸುಮಾರಿಗೆ ಸುಲೂರು ವಾಯುನೆಲೆಯಲ್ಲಿದ್ದ ಹೆಲಿಕಾಪ್ಟರ್​​​ ಏರ್​ ಟ್ರಾಫಿಕ್​ ಕಂಟ್ರೋಲ್​ನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು. ಕುನೂರ್​ ಎಂಬಲ್ಲಿ ಹೆಲಿಕಾಪ್ಟರ್​ ಪತನಗೊಂಡಿತ್ತು. ಕಾಡಿನಲ್ಲಿ ಬೆಂಕಿಯನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ ಹಾಗೂ ಅಲ್ಲಿ ಮಿಲಿಟರಿ ಹೆಲಿಕಾಪ್ಟರ್​ನ ಅವಶೇಷಗಳನ್ನು ಗಮನಿಸಿದ್ದಾರೆ. ಕೂಡಲೇ ಹೆಲಿಕಾಪ್ಟರ್​ನಲ್ಲಿದ್ದವರನ್ನು ರಕ್ಷಿಸಲು ಕಾರ್ಯಾಚರಣೆ ಆರಂಭವಾಗಿತ್ತು. ಬದುಕುಳಿದವರನ್ನು ಕೂಡಲೇ ಆಸ್ಪತ್ರೆಗೂ ದಾಖಲಿಸಲಾಗಿತ್ತು

ದುರಂತದಲ್ಲಿ ಗಾಯಗೊಂಡಿದ್ದವರನ್ನು ವೆಲ್ಲಿಂಗ್ಟನ್​ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಪ್ರಸ್ತುತ ಮಾಹಿತಿಯ ಪ್ರಕಾರ ಹೆಲಿಕಾಪ್ಟರ್​ನಲ್ಲಿದ್ದ 14 ಮಂದಿಯಲ್ಲಿ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ಸಿಡಿಎಸ್​ ಬಿಪಿನ್​ ರಾವತ್​, ಅವರ ಪತ್ನಿ ಮಧುಲಿಕಾ ರಾವತ್​, ಸಿಡಿಎಸ್​​ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್​​​ ಲಖ್ಬಿಂದರ್​ ಸಿಂಗ್​ ಲಿಡ್ಡೆರ್​, ಲೆ.ಕ ಹರ್ಜಿಂದರ್​ ಸಿಂಗ್, ವಿಂಗ್​ ಕಮಾಂಡರ್​ ಪಿಎಸ್​ ಚವ್ಹಾಣ್​, ಸ್ಕ್ವಾಡ್ರನ್​ ಲೀಡರ್​ ಕೆ ಸಿಂಗ್​, ಜೆಡಬ್ಲು ಓ ಪ್ರದೀಪ್​, ಜೆಡಬ್ಲುಓ ದಾಸ್​, ನಾಯಕ್​ ಬಿ ಸಾಯಿ ತೇಜ, ಸತ್ಪಾಲ್​, ನಾಯಕ್​ ವಿವೇಕ ಕುಮಾರ್, ನಾಯಕ್​ ಗುರುಸೇವಕ್​ ಸಿಂಗ್​ ಎಂದು ಗುರುತಿಸಲಾಗಿದೆ

ಈ ದುರಂತದಲ್ಲಿ ಬದುಕುಳಿದಿರುವ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​​​ರನ್ನು ಲೈಫ್​ ಸಪೋರ್ಟ್​ನಲ್ಲಿ ಇಡಲಾಗಿದೆ. ವೆಲ್ಲಿಂಗ್ಟನ್​ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು ಸಿಂಗ್​​ರನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಮುಂದುವರಿಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ: CDS Bipin Rawat chopper crash :‘ನೋಡನೋಡುತ್ತಿದ್ದಂತೆಯೇ ಹೆಲಿಕಾಪ್ಟರ್​ ಮರಕ್ಕೆ ಡಿಕ್ಕಿ ಹೊಡೆದಿತ್ತು’: ಸೇನಾ ಹೆಲಿಕಾಪ್ಟರ್​ ದುರಂತದ ಕ್ಷಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

ಇದನ್ನೂ ಓದಿ :Rajnath Singh : ಜೀವನ್ಮರಣ ಹೋರಾಟದಲ್ಲಿ ಕ್ಯಾಪ್ಟನ್​ ವರುಣ್​ ಸಿಂಗ್​: ಸಂಸತ್ತಿಗೆ ರಾಜನಾಥ್​ ಸಿಂಗ್​ ಮಾಹಿತಿ

Black box of IAF chopper that crashed with CDS Gen Bipin Rawat on board recovered

Comments are closed.