Modi feeling pride of INS Vikrant: ಭಾರತದ ಪಾಲಿಗೆ ಐತಿಹಾಸಿಕ ದಿನ – ಪ್ರಧಾನಿ ಮೋದಿ

ನವದೆಹಲಿ : Modi feeling pride of INS Vikrant ಭಾರತೀಯ ನೌಕಾಪಡೆಗೆ ಆನೆ ಬಲವನ್ನ ತುಂಬಿರೋ ‘INs ವಿಕ್ರಾಂತ್’ ವಿಮಾನ ವಾಹಕ ಯುದ್ಧ ನೌಕೆ ಬಗ್ಗೆ ಪ್ರಧಾನಿ ಮೋದಿ ಅತ್ಯಂತ ಹೆಮ್ಮೆಯನ್ನ ವ್ಯಕ್ತಪಡಿಸಿದ್ದಾರೆ.

ವಿಕ್ರಾಂತ್ ಕುರಿತು ಎರಡು ನಿಮಿಷ 52 ಸೆಕೆಂಡಿನ ವಿಡಿಯೋವನ್ನ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ನಿನ್ನೆ ಕೇರಳದ ಕೊಚ್ಚಿನ್ ನಲ್ಲಿ ಪ್ರಧಾನಿ ಮೋದಿ ದೇಶಿಯ ನಿರ್ಮಿಯ ಮೊದಲ ವಿಮಾನ ವಾಹಕ ಯುದ್ಧ ನೌಕೆಯನ್ನ ಲೋಕಾಪರ್ಣೆಗೊಳಿಸಿದ್ರು. ಬಳಿಕ ವಿಕ್ರಾಂತ್ ನೌಕೆಯಲ್ಲಿ ರೌಂಡ್ಸ್ ಹಾಕಿದ್ರು. ಇಂದು ಸಹ ವಿಕ್ರಾಂತ್ ನೌಕೆ ಕುರಿತು ಟ್ವೀಟ್ ಮಾಡಿರೋ ಪ್ರಧಾನಿ ಮೋದಿ ಭಾರತದ ಪಾಲಿಗೆ ನಿನ್ನೆ ಐತಿಹಾಸಿಕ ದಿನ ದು ಬಣ್ಣಿಸಿದ್ದಾರೆ.

‘ಭಾರತಕ್ಕೆ ಇದೊಂದು ಐತಿಹಾಸಿಕ ದಿನವಾಗಿದೆ, ನಾನು ನಿನ್ನೆ INS ವಿಕ್ರಾಂತ್ ಯುದ್ಧ ನೌಕೆಯ ಮೇಲಿದ್ದಾಗ ನನಗೆ ಎಷ್ಟು ಹೆಮ್ಮೆ ಆಗುತ್ತಿತ್ತು ಅಂದ್ರೆ ಅದನ್ನ ವರ್ಣಿಸೋಕೆ ಪದಗಳಲ್ಲಿ ಸಾಧ್ಯವಿಲ್ಲ,ಅಷ್ಟು ಹೆಮ್ಮೆ ಆಗುತ್ತಿತ್ತು’ ಹೀಗಂತ ಎರಡು ನಿಮಿಷ 52 ಸೆಕೆಂಡ್ ವಿಡಿಯೋ ಟ್ವೀಟ್ ಮಾಡಿ ತಮ್ಮ ಹೆಮ್ಮೆಯನ್ನ ವ್ಯಕ್ತಪಡಿಸಿದ್ದಾರೆ.

ವಿಕ್ರಾಂತ್ ವಿಶೇಷ : ವಿಕ್ರಾಂತ್ ಎಂದರೆ ವಿಜಯಶಾಲಿ ಮತ್ತು ಧೀರ ಎಂದರ್ಥ. ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ 2005 ಏಪ್ರಿಲ್ ತಿಂಗಳಲ್ಲಿ ನೌಕೆಗಾಗಿ ಲೋಹ ಕತ್ತರಿಸುವ ಕಾರ್ಯ ನಡೆದಿತ್ತು. ಇದು ಐತಿಹಾಸಿಕ ಮಹತ್ವ ಹೊಂದಿದ್ದು ಯಾಕೆಂದರೆ ನಿರ್ಮಾಣಕ್ಕೆ ಅಗತ್ಯವಾದ ಯುದ್ಧನೌಕೆ ದರ್ಜೆಯ ಉಕ್ಕನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ಮೂಲಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (DRDL) ಮತ್ತು ಭಾರತೀಯ ನೌಕಾಪಡೆಯ ಸಹಯೋಗದೊಂದಿಗೆ ಪಡೆದಿತ್ತು. ಫೆಬ್ರವರಿ 2009 ರಲ್ಲಿ ಹಡಗಿನ ಕೀಲ್ ಅನ್ನು ಹಾಕಲಾಯಿತು. ಆಗಸ್ಟ್ 2013 ರಲ್ಲಿ ಹಡಗಿನ ಯಶಸ್ವಿ ಚಾಲನೆಯೊಂದಿಗೆ ಹಡಗಿನ ನಿರ್ಮಾಣದ ಮೊದಲ ಹಂತವು ಪೂರ್ಣಗೊಂಡಿತು. ಯುದ್ಧನೌಕೆಯನ್ನು ಭಾರತದ ಪ್ರಮುಖ ಕೈಗಾರಿಕಾ ಸಂಸ್ಥೆಗಳು ಮತ್ತು 100 ಕ್ಕೂ ಹೆಚ್ಚು ಎಂಎಸ್ಎಂಇಗಳು ಒದಗಿಸಿದ ಸ್ಥಳೀಯ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಬಳಸಿ ನಿರ್ಮಿಸಲಾಗಿದೆ.

ವಿಕ್ರಾಂತ್ ಕಾರ್ಯಾರಂಭದೊಂದಿಗೆ, ಭಾರತವು ಎರಡು ಕಾರ್ಯಾಚರಣೆಯ ವಿಮಾನವಾಹಕ ನೌಕೆಗಳನ್ನು ಹೊಂದಿರುತ್ತದೆ, ಇದು ರಾಷ್ಟ್ರದ ಕಡಲ ಭದ್ರತೆಯನ್ನು ಹೆಚ್ಚಿಸುತ್ತದೆ. ಭಾರತೀಯ ನೌಕಾಪಡೆಯ ಆಂತರಿಕ ಸಂಸ್ಥೆಯಾದ ವಾರ್‌ಶಿಪ್ ಡಿಸೈನ್ ಬ್ಯೂರೋ (WDB)ಅಡಿಯಲ್ಲಿ  ವಿನ್ಯಾಸಗೊಳಿಸಿದ ಮತ್ತು ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿ ಸಾರ್ವಜನಿಕ ವಲಯದ ಶಿಪ್‌ಯಾರ್ಡ್ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಿಂದ ನಿರ್ಮಿಸಲ್ಪಟ್ಟಿದೆ. 262 ಮೀ ಉದ್ದ ಮತ್ತು 62 ಮೀ ಅಗಲದ ವಿಕ್ರಾಂತ್ ಹಡಗಿನಲ್ಲಿ ಸುಮಾರು 2,200 ವಿಭಾಗಗಳಿವೆ, ಸುಮಾರು 1,600 ಸಿಬ್ಬಂದಿಗಾಗಿ ವಿನ್ಯಾಸಗೊಳಿಸಲಾಗಿದೆ, ಇದರಲ್ಲಿ ಮಹಿಳಾ ಅಧಿಕಾರಿಗಳು ಮತ್ತು ನಾವಿಕರಿಗೆ ಅವಕಾಶ ಕಲ್ಪಿಸಲು ವಿಶೇಷ ಕ್ಯಾಬಿನ್‌ಗಳಿವೆ.

ಇದನ್ನೂ ಓದಿ : POCSO court Judge found dead: ಪೋಕ್ಸೋ ಕೋರ್ಟ್ ನ ಜಡ್ಜ್ ನಿಗೂಢ ಸಾವು

ಇದನ್ನೂ ಓದಿ : Teachers fear NEP : ಮುಂದಿನ ವರ್ಷದಿಂದ ರಾಜ್ಯದಲ್ಲಿ NEP ಜಾರಿ: 40 ಸಾವಿರ ಶಿಕ್ಷಕಿಯರಿಗೆ ಬೀದಿಗೆ ಬರೋ ಆತಂಕ

Modi feeling pride of INS Vikrant-A historic day for India-PM Modi

Comments are closed.