Namibian cheetahs :ಬರೋಬ್ಬರಿ 70 ವರ್ಷಗಳ ಬಳಿಕ ಭಾರತಕ್ಕೆ ಮತ್ತೆ ಮರಳಿದ ಚೀತಾ : ಐತಿಹಾಸಿಕ ದಿನವಾಗಿ ಬದಲಾಯ್ತು ಮೋದಿ ಬರ್ತಡೇ

ಮಧ್ಯ ಪ್ರದೇಶ : Namibian cheetahs : ದೇಶದಲ್ಲಿ ಸಂಪೂರ್ಣ ವಿನಾಶಗೊಂಡಿದ್ದ ಚೀತಾಗಳು ಇಂದು ಪ್ರಧಾನಿ ನರೇಂದ್ರ ಮೋದಿ 72ನೇ ಜನ್ಮದಿನದಂದು ಪುನಃ ಭಾರತಕ್ಕೆ ಮರಳಿವೆ. ನಮಿಬೀಯಾದಿಂದ ಬಂದ ಎಂಟು ಚೀತಾಗಳನ್ನು ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದ ವಿಶೇಷ ಆವರಣಕ್ಕೆ ತಂದು ಬಿಡಲಾಗಿದೆ. 72ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಚಿರತೆಗಳನ್ನು ಬಿಡುಗಡೆ ಮಾಡಿ ಜೊತೆಗೆ ಕೆಲವು ಫೋಟೋಗಳನ್ನು ತಾವೇ ಕ್ಲಿಕ್​ ಮಾಡಿದ್ದಾರೆ.

ಭಾರತದಲ್ಲಿಯೂ ಒಂದು ಕಾಲದಲ್ಲಿ ಚೀತಾಗಳು ವಾಸವಿದ್ದವು. ಆದರೆ ಕ್ರಮೇಣ ಅವನತಿಯ ದಾರಿ ಹಿಡಿದ ಬಳಿಕ 1952ರಲ್ಲಿ ಭಾರತದಲ್ಲಿ ಚೀತಾಗಳು ವಿನಾಶಗೊಂಡಿವೆ ಎಂದು ಘೋಷಣೆ ಮಾಡಲಾಯ್ತ. ಆದರೆ ಇಂದು ಪುನಃ ಚಿರತೆಗಳು ಭಾರತಕ್ಕೆ ಮರಳಿವೆ. ಚೀತಾ ಮರುಪರಿಚಯ ಕಾರ್ಯಕ್ರಮದ ಅಂಗವಾಗಿ ಇಂದು ಬೆಳಗ್ಗೆ ವಿಶೇಷ ವಿಮಾನದ ಮೂಲಕ ಎಂಟು ಚಿರತೆಗಳನ್ನು ನಮೀಬಿಯಾದಿಂದ ಗ್ವಾಲಿಯರ್​ಗೆ ತರಲಾಗಿತ್ತು.ಬಳಿಕ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ ಮೂಲಕ ಶಿಯೋಪುರ್​ ಜಿಲ್ಲೆಗೆ ಕರೆತರಲಾಯ್ತು. ಐದು ಹೆಣ್ಣು ಹಾಗೂ ಮೂರು ಗಂಡು ಚೀತಾಗಳು ಇಂದು ಮಧ್ಯಪ್ರದೇಶಕ್ಕೆ ಬಂದು ಸೇರಿವೆ.


ಚೀತಾಗಳನ್ನು ಬಿಡುಗಡೆಗೊಳಿಸಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಾಜೆಕ್ಟ್​ ಚೀತಾ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ನಮ್ಮ ಪ್ರಯತ್ನವಾಗಿದೆ. ಅಲ್ಲದೇ ಚೀತಾಗಳನ್ನು ವೀಕ್ಷಿಸುವ ಮುನ್ನ ಸಾರ್ವಜನಿಕರು ತಾಳ್ಮೆಯಿಂದ ಇರಬೇಕು ಎಂದು ಇದೇ ವೇಳೆ ಮನವಿ ಮಾಡಿದರು. ಈ ಚಿರತೆಗಳು ಈ ಪ್ರದೇಶದ ಬಗ್ಗೆ ಯಾವುದೇ ಅರಿವಲ್ಲದೇ ಅತಿಥಿಗಳ ರೂಪದಲ್ಲಿ ಆಗಮಿಸಿವೆ. ಈ ಚೀತಾಗಳು ಕುನೋ ರಾಷ್ಟ್ರೀಯ ಉದ್ಯಾನವನ್ನು ತಮ್ಮ ಮನೆಗಳನ್ನಾಗಿ ಮಾಡಿಕೊಳ್ಳಲು ನಾವು ಈ ಚೀತಾಗಳಿಗೆ ಕೆಲವು ತಿಂಗಳುಗಳ ಸಮಯ ನೀಡೋಣ ಎಂದು ಹೇಳಿದರು.


ನಮೀಬಿಯಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಅಂತಾರಾಷ್ಟ್ರೀಯ ಲಾಭರಹಿತ ಸಂಸ್ಥೆಯಾದ ಚೀತಾ ಸಂರಕ್ಷಣಾ ಅನುದಾನ ನೀಡಿರುವ ಮಾಹಿತಿಯ ಪ್ರಕಾರ ಗಂಡು ಚೀನಾತಗಳು 4.5 ವರ್ಷದಿಂದ 5.5 ವರ್ಷ ಪ್ರಾಯದ್ದಾಗಿವೆ ಹಾಗೂ ಹೆಣ್ಣು ಚೀತಾಗಳು ಎರಡರಿಂದ ಮೂರು ವರ್ಷ ವಯಸ್ಸಿನದ್ದಾಗಿವೆ. ಕಳೆದ ವರ್ಷ ನವೆಂಬರ್​ ತಿಂಗಳಲ್ಲಿಯೇ ಈ ಚೀತಾಗಳನ್ನು ಭಾರತಕ್ಕೆ ಕರೆತರಲು ಯೋಚಿಸಲಾಗಿತ್ತು. ಆದರೆ ಕೋವಿಡ್​ ಕಾರಣದಿಂದಾಗಿ ಅದು ವಿಳಂಬಗೊಂಡಿತ್ತು.

ಇದನ್ನು ಓದಿ : Diabetes Drug Sitagliptin :ದೇಶದ ಜನತೆಗೆ ಗುಡ್​ ನ್ಯೂಸ್​ : ಜನೌಷಧಿ ಕೇಂದ್ರಗಳಲ್ಲಿ 60 ರೂಪಾಯಿಗೆ ಮಧುಮೇಹ ಔಷಧಿ

ಇದನ್ನೂ ಓದಿ : Sanju Samson: ಸಂಜು ಸ್ಯಾಮ್ಸನ್ ಬಾಯಿಗೆ ತುಪ್ಪ ಸವರಿದ ಬಿಸಿಸಿಐ ವಿರುದ್ಧ ಫ್ಯಾನ್ಸ್ ಗರಂ

Modi releases 8 Namibian cheetahs in Kuno National Park

Comments are closed.