Vinay Kumar : MI ಎಮಿರೇಟ್ಸ್ ತಂಡಕ್ಕೆ ದಾವಣಗೆರೆ ಎಕ್ಸ್‌ಪ್ರೆಸ್ ವಿನಯ್ ಕುಮಾರ್ ಬೌಲಿಂಗ್ ಕೋಚ್

ಬೆಂಗಳೂರು: ಕರ್ನಾಟಕದ ದಿಗ್ಗಜ ನಾಯಕ, ರಾಜ್ಯಕ್ಕೆ ಎರಡು ಬಾರಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಹಾಗೂ ಇರಾನಿ ಕಪ್’ಗಳನ್ನು ಗೆದ್ದುಕೊಟ್ಟಿರುವ ದಾವಣಗೆರೆ ಎಕ್ಸ್’ಪ್ರೆಸ್ ಆರ್.ವಿನಯ್ ಕುಮಾರ್ (Vinay Kumar) , ಎಂಐ ಎಮಿರೇಟ್ಸ್ (MI Emirates) ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ಇಂಟರ್’ನ್ಯಾಷನಲ್ ಟಿ20ಯಲ್ಲಿ (UAE’s ILT20) ಆಡಲಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಎಂಐ ಎಮಿರೇಟ್ಸ್ ತಂಡದ ಪ್ರಧಾನ ಕೋಚ್ ಆಗಿ ನ್ಯೂಜಿಲೆಂಡ್’ನ ಮಾಜಿ ವೇಗದ ಬೌಲರ್ ಶೇನ್ ಬಾಂಡ್ ಅವರನ್ನು ಆಯ್ಕೆ ಮಾಡಲಾಗಿದೆ. ಇದುವರೆಗೆ ಶೇನ್ ಬಾಂಡ್ (Shane Bond) ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿದ್ದರು.

ಯುಎಇ ಐಎಲ್ ಟಿ20ಯಲ್ಲಿ ಎಂಐ ಎಮಿರೇಟ್ಸ್ (MI Emirates) ತಂಡದ ಬೌಲಿಂಗ್ ಕೋಚ್ ಹೊಣೆಗಾರಿಕೆಯನ್ನು ಕನ್ನಡಗ ವಿನಯ್ ಕುಮಾರ್ ನಿಭಾಯಿಸಲಿದ್ದಾರೆ. ಇದುವರೆಗೆ ವಿನಯ್ ಕುಮಾರ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಟ್ಯಾಲೆಂಟ್ ಹಂಟ್ ವಿಭಾಗದಲ್ಲಿದ್ದರು. ಈಗ ಬೌಲಿಂಗ್ ಕೋಚ್ ಆಗಿ ಬಡ್ತಿ ನೀಡಲಾಗಿದೆ.

ಭಾರತದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಎಂಐ ಎಮಿರೇಟ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ. ನ್ಯೂಜಿಲೆಂಡ್’ನ ಮತ್ತೊಬ್ಬ ಮಾಜಿ ವೇಗಿ ಜೇಮ್ಸ್ ಫ್ರಾಂಕ್ಲಿನ್ ಅವರಿಗೆ ಫೀಲ್ಡಂಗ್ ಕೋಚ್ ಪಟ್ಟ ಕಟ್ಟಲಾಗಿದೆ. ಭಾರತದ ಮಾಜಿ ಆಲ್ರೌಂಡರ್ ರಾಬಿನ್ ಸಿಂಗ್ ಅವರನ್ನು ಎಂಐ ಎಮಿರೇಟ್ಸ್’ನ ಜನರಲ್ ಮ್ಯಾನೇಜರ್ ಆಫ್ ಕ್ರಿಕೆಟ್ ಆಗಿ ನೇಮಕ ಮಾಡಲಾಗಿದೆ. ಚೊಚ್ಚಲ ಆವೃತ್ತಿಯ ಯುಎಇ ಐಎಲ್ ಟಿ20 ಟೂರ್ನಿ ಮುಂದಿನ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ.

ಐಪಿಎಲ್’ನಿಂದ ವಿದೇಶೀ ಫ್ರಾಂಚೈಸಿ ಲೀಗ್’ಗಳಿಗೆ ಕಾಲಿಟ್ಟಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ದಕ್ಷಿಣ ಆಫ್ರಿಕಾ ಟಿ20 ಲೀಗ್’ನಲ್ಲಿ ಕೇಪ್ ಟೌನ್ ತಂಡದ ಫ್ರಾಂಚೈಸಿಯನ್ನು ತನ್ನದಾಗಿಸಿಕೊಂಡಿದ್ದು ಆ ತಂಡಕ್ಕೆ ಎಂಐ ಕೇಪ್ ಟೌನ್ (MI Cape Town) ಎಂದು ನಾಮಕರಣ ಮಾಡಲಾಗಿದೆ.

ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ಟೀಮ್ ಮ್ಯಾನೇಜ್ಮೆಂಟ್’ನಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದ್ದು, ದಕ್ಷಿಣ ಆಫ್ರಿಕಾದ ದಿಗ್ಗಜ ವಿಕೆಟ್ ಕೀಪರ್ ಮಾರ್ಕ್ ಬೌಷರ್ ಅವರನ್ನು ಹೆಡ್ ಕೋಚ್ ಆಗಿ ನೇಮಕ ಮಾಡಲಾಗಿದೆ. 2016ರಿಂದ 2022ರವರೆಗೆ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಮುಖ್ಯ ಕೋಚ್ ಆಗಿದ್ದ ಶ್ರೀಲಂಕಾದ ಮಹೇಲ ಜಯವರ್ಧನೆ ಅವರಿಗೆ ಮುಂಬೈ ಇಂಡಿಯನ್ಸ್’ನ ಗ್ಲೋಬಲ್ ಹೆಡ್ ಆಫ್ ಪರ್ಫಾಮೆನ್ಸ್ (Global Head of Performance, MI) ಜವಾಬ್ದಾರಿ ನೀಡಲಾಗಿದೆ. 2016ರ ನವೆಂಬರ್ ತಿಂಗಳಲ್ಲಿ ಮಹೇಲ ಜಯವರ್ಧನೆ ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದರು. ಮುಂಬೈ ಇಂಡಿಯನ್ಸ್ ತಂಡದ ಟೀಮ್ ಡೈರೆಕ್ಟರ್ ಆಗಿದ್ದ ಮಾಜಿ ವೇಗದ ಬೌಲರ್ ಜಹೀರ್ ಖಾನ್ (Zaheer Khan) ಅವರಿಗೆ ಮುಂಬೈ ಇಂಡಿಯನ್ಸ್ ಕ್ರಿಕೆಟ್ ಡೆವಲಪ್ಮೆಂಟ್ ಗ್ಲೋಬಲ್ ಹೆಡ್ ಆಗಿ ಪ್ರಮೋಷನ್ ನೀಡಲಾಗಿದೆ ( Global Head of Cricket Development, MI).

ಎಂಐ ಎಮಿರೇಟ್ಸ್ ತಂಡದ ಕೋಚಿಂಗ್ ಸಿಬ್ಬಂದಿ
ಹೆಡ್ ಕೋಚ್: ಶೇನ್ ಬಾಂಡ್ (ನ್ಯೂಜಿಲೆಂಡ್)
ಬ್ಯಾಟಿಂಗ್ ಕೋಚ್: ಪಾರ್ಥಿವ್ ಪಟೇಲ್ (ಭಾರತ)
ಬೌಲಿಂಗ್ ಕೋಚ್: ಆರ್.ವಿನಯ್ ಕುಮಾರ್ (ಭಾರತ)
ಫೀಲ್ಡಿಂಗ್ ಕೋಚ್: ಜೇಮ್ಸ್ ಫ್ರಾಂಕ್ಲಿನ್ (ನ್ಯೂಜಿಲೆಂಡ್)
ಜನರಲ್ ಮ್ಯಾನೇಜರ್ ಆಫ್ ಕ್ರಿಕೆಟ್: ರಾಬಿನ್ ಸಿಂಗ್ (ಭಾರತ)

ಇದನ್ನೂ ಓದಿ : Super Sub Rules in Domestic Cricket: ಸೈಯದ್ ಮುಷ್ತಾಕ್ ಅಲಿ ಟಿ20ಗೆ ಸೂಪರ್ ಸಬ್ ವಾಪಸ್: ಐಪಿಎಲ್‌ಗೂ ಬರಲಿದೆ ಬಿಸಿಸಿಐನ ಹೊಸ ರೂಲ್ಸ್?

ಇದನ್ನೂ ಓದಿ : Sanju Samson: ಸಂಜು ಸ್ಯಾಮ್ಸನ್ ಬಾಯಿಗೆ ತುಪ್ಪ ಸವರಿದ ಬಿಸಿಸಿಐ ವಿರುದ್ಧ ಫ್ಯಾನ್ಸ್ ಗರಂ

Vinay Kumar Joined MI Emirates as Bowling Coach IPL t20

Comments are closed.