ಕಾರು ಮಾರಿ ಕರೋನಾ ಪೀಡಿತರಿಗೆ ನೆರವು….! ಮುಂಬೈನಲ್ಲೊಬ್ಬ ಅಪರೂಪದ ಆಕ್ಸಿಜನ್ ಮ್ಯಾನ್…!!

ಕೆಲವೊಮ್ಮೆ ಒಂದೊಂದು ಘಟನೆಗಳು ಮನುಷ್ಯ ನನ್ನೇ ಬದಲಾಯಿಸಿ ಬಿಡುತ್ತವೆ. ಆತನೂ ಅಷ್ಟೇ ಕಣ್ಣೇದುರಿನಲ್ಲೇ ಸ್ನೇಹಿತನ ಪತ್ನಿ ಆಕ್ಸಿಜನ್ ಇಲ್ಲದೇ ಸತ್ತಿದ್ದು ಕಂಡು ಕಣ್ಣೀರಿಟ್ಟಿದ್ದ. ಬಳಿಕ ತಾನೇ ಆಕ್ಸಿಜನ್ ಪೊರೈಸುವ, ರೋಗಿಗಳ ಉಸಿರು ಕಾಯುವ ಆಕ್ಸಿಜನ್ ಮ್ಯಾನ್ ಆಗಿ ಬದಲಾಗಿದ್ದಾನೆ.

ಮುಂಬೈನ ಶಹನವಾಜ್ ಶೇಕ್ ಇಂತಹದೊಂದು ಮಾದರಿ ಕಾರ್ಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸ್ಥಳೀಯವಾಗಿ ಆಕ್ಸಿಜನ್ ಮ್ಯಾನ್ ಎಂದೇ ಕರೆಸಿಕೊಳ್ಳೋ ಶಹನವಾಜ್, ಇದುವರೆಗೂ 170 ಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್ ಪೊರೈಕೆ ಮಾಡಿ ರೋಗಿಗಳ‌ ಜೀವ ಉಳಿಸಿದ್ದಾರೆ.


ಕೊರೋನಾ ಪೀಡಿತರ ಸಹಾಯಕ್ಕಾಗಿ 2020 ರಿಂದಲೂ ಆಕ್ಸಿಜನ್ ಸಿಲಿಂಡರ್ ಪೂರೈಕೆಯಲ್ಲಿ ತೊಡಗಿರುವ ಶಹನವಾಜ್ ಇದಕ್ಕಾಗಿ ತಮ್ಮ 22 ಲಕ್ಷ ಬೆಲೆಬಾಳುವ ಎಸ್ಯುವಿ ಕಾರನ್ನು ಮಾರಾಟ ಮಾಡಿದ್ದಾರೆ.

ಕಾರು ಮಾರಿ ಆಕ್ಸಿಜನ್ ಪೊರೈಕೆ ಮಾಡೋದು ಮಾತ್ರವಲ್ಲ, ರೋಗಿ ಗಳ ಸಹಾಯಕ್ಕಾಗಿ ಸ್ನೇಹಿತರ ಜೊತೆ ಸೇರಿ ಕಂಟ್ರೋಲ್ ರೂಂ ಕೂಡ ಸ್ಥಾಪನೆ ಮಾಡಿದ್ದಾರೆ.

ಕಳೆದ ವರ್ಷ ಶಹನವಾಜ್ ಸ್ನೇಹಿತನ ಪತ್ನಿ ಕೊರೋನಾದಿಂದ ಬಳಲಿ ದ್ದು ಆಕ್ಸಿಜನ್ ಸಿಗದೇ ಆಟೋ ದಲ್ಲೇ ಪ್ರಾಣ ಬಿಟ್ಟಿದ್ದರು.ಇದಾದ‌ ಬಳಿಕ ನೊಂದು ಸೋಂಕಿತರ ಸಹಾಯಕ್ಕೆ ಮುಂದಾಗಿದ್ದಾರೆ ಶಹನವಾಜ್. ಇದುವರೆಗೂ 4 ಸಾವಿರಕ್ಕೂ ಅಧಿಕ ರೋಗಿಗಳಿಗೆ ಆಕ್ಸಿಜನ್ ಒದಗಿಸಿ ದ್ದಾರಂತೆ ಶಹನವಾಜ್.

Comments are closed.