ಕೈಲಾಸ್ ಕ್ಕೆ ಭಾರತೀಯರಿಗೆ ಪ್ರವೇಶವಿಲ್ಲ….! ಸ್ವಾಮಿ ನಿತ್ಯಾನಂದನ ಕರೋನಾ ರೂಲ್ಸ್…!!

ಜಗತ್ತಿನಲ್ಲಿ ಕೊರೋನಾ ಎರಡನೇ ಅಲೆ ತಲ್ಲಣ ಗಳನ್ನು ಸೃಷ್ಟಿಸಿರುವ‌ ಹೊತ್ತಿನಲ್ಲೇ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮೀಜಿ ತಾನು ಸೃಷ್ಟಿಸಿದ ಕೈಲಾಸದಲ್ಲಿ ಭಾರತೀಯರಿಗೆ ಪ್ರವೇಶ ನಿರಾಕರಿಸುವ ಮೂಲಕ ಸುದ್ದಿಯಾಗಿದ್ದಾರೆ.

ನಾನಾ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಬಿಡದಿಯ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ 2019 ರಲ್ಲಿ ಭಾರತ ತೊರೆದು ಪಲಾಯನ ಗೈಯ್ದಿದ್ದ. ಬಳಿಕ ಈಕ್ವಡಾರ್ ಬಳಿ ದ್ವೀಪವೊಂದನ್ನು ಖರೀದಿಸಿ ಅಲ್ಲೇ ವಾಸವಾಗಿದ್ದಾನೆ ಎನ್ನಲಾಗಿದೆ.

ತನ್ನ ದ್ವೀಪಕ್ಕೆ ಕೈಲಾಸ ಎಂದು ಹೆಸರಿಟ್ಟಿರುವ ನಿತ್ಯಾನಂದ ತನ್ನ ಸ್ವಯಂ ಘೋಷಿತ ಕೈಲಾಸಕ್ಕೆ ಭಾರತೀಯರಿಗೆ ಪ್ರವೇಶವಿಲ್ಲ ಎಂದಿದ್ದಾನೆ.

ಈ ಬಗ್ಗೆ ಕೈಲಾಸದ ಅಧಿಕೃತ ಟ್ವಿಟರ್ ನಲ್ಲಿ ಮಾಹಿತಿ ನೀಡಲಾಗಿದ್ದು, ಭಾರತ, ಬ್ರೆಜಿಲ್, ಯುರೋಪಿಯನ್ ಯೂನಿಯನ್ ಮತ್ತು‌ ಮಲೆಷಿ ಯಾದ ಪ್ರವಾಸಿಗರು, ಭಕ್ತರು ಆಗಮಿಸದಂತೆ ನಿರ್ಬಂಧ‌ ಪ್ರಕಟಿಸಲಾಗಿದೆ.

ಈಕ್ವಡಾರ್ ಬಳಿ ದ್ವೀಪ ಖರೀದಿಸಿ ಅಲ್ಲಿ ತನ್ನದೇ ಕೈಲಾಸ ಸೃಷ್ಟಿಸಿರುವ ನಿತ್ಯಾನಂದ ಅಲ್ಲಿ ತನ್ನದೇ ಆದ ಪ್ರತ್ಯೇಕ ಹಣ, ಬ್ಯಾಂಕ್, ಧ್ವಜ, ಸಂವಿಧಾನ‌ ರಚಿಸಿಕೊಂಡಿರುವುದಾಗಿ ಘೋಷಿಸಿಕೊಂಡಿದ್ದಾನೆ‌. ಕರ್ನಾಟಕದಲ್ಲಿ ಹಲವು ಪ್ರಕರಣದಲ್ಲಿ ನಿತ್ಯಾನಂದ ಹೆಸರು ಕೇಳಿಬಂದಿತ್ತು.

Comments are closed.