diaper changing facility : ಮೆಟ್ರೋ ನಿಲ್ದಾಣಗಳ ಪುರುಷರ ವಾಶ್​ರೂಮಿನಲ್ಲಿ ಇನ್ಮುಂದೆ ಇರಲಿದೆ ಡೈಪರ್​ ಚೇಂಜಿಂಗ್​ ರೂಮ್​

ಮುಂಬೈ : diaper changing facility  : ಸಾರ್ವಜನಿಕ ಶೌಚಾಲಯಗಳಲ್ಲಿ ಮಹಿಳೆಯರ ವಿಭಾಗದಲ್ಲಿ ಶಿಶುಗಳಿಗೆ ಡೈಪರ್​ ಬದಲಾಯಿಸುವ ಸೌಲಭ್ಯ ಇದ್ದೇ ಇರುತ್ತದೆ. ಆದರೆ ಇದೇ ಮೊದಲ ಬಾರಿಗೆ ಮೆಟ್ರೋ ನಿಲ್ದಾಣಗಳಲ್ಲಿನ ಪುರುಷರ ವಾಶ್​ರೂಮ್​ಗಳಲ್ಲಿ ಶಿಶುಗಳಿಗೆ ಡೈಪರ್​ ಬದಲಾಯಿಸುವ ಸೌಲಭ್ಯ ಲಭ್ಯವಾಗಲಿದೆ. ಮುಂಬೈನ ನಿರ್ಮಾಣ ಹಂತದಲ್ಲಿರುವ ಕಫ್​ ಪರೇಡ್​ – ಬಾಂದ್ರಾ ಮೆಟ್ರೋ ಕಾರಿಡಾರ್​ನ ಎಲ್ಲಾ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಒದಗಿಸಲಾಗುತ್ತಿದೆ.


ಭಾರತದಲ್ಲಿ ಮೊದಲ ಬಾರಿಗೆ ಮೆಟ್ರೋ ನಿಲ್ದಾಣದ ಆವರಣದಲ್ಲಿ ಇಂತಹ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇಲ್ಲಿಯವರೆಗೆ ಭಾರತದ ಯಾವುದೇ ಮೆಟ್ರೋ ನಿಲ್ದಾಣದಲ್ಲಿ ಮಗುವಿನ ಡೈಪರ್​ಗಳನ್ನು ಬದಲಾಯಿಸಲು ಪುರುಷರ ವಾಶ್​ರೂಮ್​ಗಳಲ್ಲಿ ಸೌಲಭ್ಯವನ್ನು ನೀಡಿರಲಿಲ್ಲ. ಆದರೆ ಇನ್ಮುಂದೆ ಈ ಸೌಲಭ್ಯವು ನಮ್ಮಲ್ಲಿ ಸಿಗಲಿದೆ ಎಂದು ಮೆಟ್ರೋ ರೈಲು ನಿಗಮದ ವಕ್ತಾರರು ತಿಳಿಸಿದ್ದಾರೆ .


ಎಲ್ಲಾ ನಿಲ್ದಾಣಗಳಲ್ಲಿ ಟಿಕೆಟ್​ ಕೌಂಟರ್​ ಒಳಗೆ ವಾಶ್​ ರೂಮ್​ ಇರುತ್ತದೆ. ಆದರೆ ಸಾಂತಾಕ್ರೂಸ್​ ನಿಲ್ದಾಣದಲ್ಲಿ ಮಾತ್ರ ಈ ವಾಶ್​ರೂಮ್​ ಟಿಕೆಟ್​ ಕೌಂಟರ್​ನ ಹೊರಗಡೆ ಇರಲಿದೆ. ಪ್ರತಿ ನಿಲ್ದಾಣದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ತಲಾ ಒಂದು ವಾಶ್​ರೂಂ ಇರಲಿದೆ. ನಿಲ್ದಾಣಗಳಲ್ಲಿ ಸ್ಥಳಾವಕಾಶ ಲಭ್ಯತೆಗೆ ಅನುಗುಣವಾಗಿ ವಾಶ್​ ರೂಮ್​ಗಳನ್ನು ಜೋಡಿಸಲಾಗಿದೆ .


ಮಕ್ಕಳನ್ನು ಬೆಳೆಸುವ ಜವಾಬ್ದಾರಿಯು ತಂದೆ ಹಾಗೂ ತಾಯಿಯ ಸಮಾನ ಜವಾಬ್ದಾರಿಯಾಗಿದೆ. ಇದೇ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಸೌಲಭ್ಯವನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಮೆಟ್ರೋ ಪ್ರಯಾಣದ ಸಮಯದಲ್ಲಿ ಡೈಪರ್​ಗಳನ್ನು ಬದಲಾಯಿಸುವ ಸಮಯದಲ್ಲಿ ಪೋಷಕರಿಗೆ ಅನಾನುಕೂಲವಾಗಬಾರದು ಎಂದು ಮೆಟ್ರೋ ರೈಲು ನಿಗಮದ ವಕ್ತಾರರು ತಿಳಿಸಿದ್ದಾರೆ.
ಒಂದೆರಡು ವರ್ಷಗಳ ಹಿಂದೆ ಪುರುಷರ ವಾಶ್​ರೂಮ್​ಗಳಲ್ಲಿ ಮಗುವಿನ ಡೈಪರ್​ಗಳನ್ನು ಬದಲಾಯಿಸುವ ಸೌಲಭ್ಯದ ಕೊರತೆಯಿದೆ ಎಂಬ ವಿಚಾರವನ್ನು ನಾನು ಅರಿತುಕೊಂಡೆ. ಇದು ತಾಯಿಯಿಲ್ಲದೇ ತಂದೆಯ ಜೊತೆಯಲ್ಲಿ ಪ್ರಯಾಣ ಮಾಡುವ ಮಕ್ಕಳಿಗೆ ಸಾಕಷ್ಟು ಅನಾನುಕೂಲತೆಯನ್ನು ಉಂಟು ಮಾಡುತ್ತಿತ್ತು. ಶಾಪಿಂಗ್​ ಮಾಲ್​ಗಳಿಂದ ಹಿಡಿದು ರೆಸ್ಟಾರೆಂಟ್​ಗಳು ಹಾಗೂ ಸಾರ್ವಜನಿಕ ಸಾರಿಗೆಗಳಲ್ಲಿ ಇಂತಹ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ .

ಇದನ್ನು ಓದಿ : Make Or Brake : ದಿನಕ್ಕೆ 12 ಗಂಟೆ, ವಾರಕ್ಕೆ 7 ದಿನ ಕೆಲಸ : ಎಲನ್‌ ಮಸ್ಕ್‌ ಆದೇಶಕ್ಕೆ ಟ್ವೀಟರ್ ಉದ್ಯೋಗಿಗಳು ಸುಸ್ತೋ ಸುಸ್ತು

ಇದನ್ನೂ ಓದಿ : KL Rahul back in form: ಟೀಕಾಕಾರರಿಗೆ ಅಬ್ಬರದ ಅರ್ಧಶತಕದೊಂದಿಗೆ ಉತ್ತರಿಸಿದ ರಾಹುಲ್, ವರ್ಕೌಟ್ ಆಯ್ತು ಕೊಹ್ಲಿ ಟಿಪ್ಸ್

Mumbai Metro to be the first with diaper changing facility in men’s washrooms

Comments are closed.