Priyanka Chopra : ಕೊನೆಗೂ ಮಗುವಿನ ಪೋಟೋವನ್ನು ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

ಬಾಲಿವುಡ್‌ ಮತ್ತು ಹಾಲಿವುಡ್‌ನ ನಟಿ ಪ್ರಿಯಾಂಕಾ ಚೋಪ್ರಾ( Priyanka Chopra baby) ಪಾಪ್‌ ಸಿಂಗರ್‌ ನಿಕ್‌ ಜೊನಾಸ್ (Nick Jonas)ಮದುವೆಯ ಬಳಿಕ ಅಮೇರಿಕದಲ್ಲಿ ವಾಸವಾಗಿದ್ದಾರೆ. ಹಾಲಿವುಡ್‌ ಸಿನಿಮಾಗಳಲ್ಲಿನ ನಟನೆಯ ಜೊತೆಗೆ ನ್ಯೂಯಾರ್ಕ್‌ನಲ್ಲಿ ಇರುವ ಹೋಟೆಲ್‌ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. ನಟಿ ಪ್ರಿಯಾಂಕ ಚೋಪ್ರಾ ಅವರಿಗೆ ಹೆಣ್ಣು ಮಗುವಾಗಿದ್ದು, ಮಗುವಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್‌ ಎಂದು ಹೆಸರಿಟ್ಟಿದ್ದಾರೆ. ಆದ್ರೆ ದಂಪತಿ ಇದುವರೆಗೂ ಅಭಿಮಾನಿಗಳಿಗೆ ಮಗುವಿನ ಮುಖವನ್ನು ರಿವೀಲ್‌ ಮಾಡಿಲ್ಲ. ಇದು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿತ್ತು. ಆದ್ರೀಗ ಪೋಟೋವನ್ನು ಪ್ರಿಯಾಂಕಾ ರಿವೀಲ್‌ ಮಾಡಿದ್ದಾರೆ.

ವರ್ಷದ ಆರಂಭದಲ್ಲೇ ಬಾಡಿಗೆ ತಾಯ್ತನದ ಮೂಲಕ ಪ್ರಿಯಾಂಕಾ ಚೋಪ್ರಾ(Priyanka Chopra)ಹಾಗೂ ನಿಕ್‌ ಜೋನಸ್‌ (Nick Jonas)ಮಗುವನ್ನು ಪಡೆದಿದ್ದಾರೆ. ತಿಂಗಳು ಪೂರ್ತಿಯಾಗುವ ಮೊದಲೇ ಮಗು ಹುಟ್ಟಿದೆ ಎನ್ನುವ ಅಂತೆ-ಕಂತೆಗಳ ಸುದ್ದಿ ಹರಿದಾಡುತ್ತಿತ್ತು, ಆದರೆ ಆ ವಿಷಯದ ಬಗ್ಗೆ ಯಾರೂ ನಿಖರವಾಗಿ ಮಾಹಿತಿ ನೀಡಿಲ್ಲ. ಆದ್ರೀಗ ಮಗುವಿನ ಜೊತೆಯಲ್ಲಿ ದಂಪತಿ ಸುತ್ತಾಡುತ್ತಿದ್ದಾರೆ.

ಪ್ರಿಯಾಂಕಾ ತಮ್ಮ ಮಗುವಿನ ಮುಖವನ್ನು ಪೂರ್ತಿಯಾಗಿ ಕಾಣಿಸದ ಹಾಗೆ ಫೋಟೋವನ್ನು ಹಂಚಿಕೊಂಡಿದ್ದು, ಅದ್ಬುತವಾದ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಪ್ರಿಯಾಂಕಾ ಹಂಚಿಕೊಂಡ ಮಗುವಿನ ಪೋಟೋ ಅವರ ಅಭಿಮಾನಿ ಪೇಜ್‌ಗಳಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಅದಕ್ಕೆ ಅವರ ಸಿನಿಪ್ರೇಕ್ಷಕರು ವಿವಿಧ ರೀತಿಯ ಕಾಮೆಂಟ್‌ಗಳನ್ನು ಪಾಸ್‌ ಮಾಡುತ್ತಿದ್ದಾರೆ. ಮಗುವಿನ ಮುಖವನ್ನು ಪೂರ್ತಿಯಾಗಿ ತೋರಿಸುವಂತೆ ಸಿನಿಪ್ರೇಕ್ಷಕರು ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ : ಮೇರಿ ಕ್ರಿಸ್‌ಮಸ್ ನಲ್ಲಿ ವಿಜಯ ಸೇತುಪತಿ ಜೊತೆಯಾದ ನಟಿ ಕತ್ರಿನಾ ಕೈಫ್

ಇದನ್ನೂ ಓದಿ : ಆಸ್ಕರ್‌ಗೆ ಆರ್‌ಆರ್‌ ಆರ್‌ : ಎಸ್‌ಎಸ್‌ ರಾಜಮೌಳಿ ಹೇಳಿದ್ದೇನು ಗೊತ್ತಾ ?

ಇದನ್ನೂ ಓದಿ : ಪ್ರೇಮ ವೈಫಲ್ಯ ತಮಿಳು ಖ್ಯಾತ ನಟಿ ದೀಪಾ ಆತ್ಮಹತ್ಯೆ

ಇದನ್ನೂ ಓದಿ : ಹಾಟ್ ಅವತಾರದಲ್ಲಿ ಅಮೃತ ವರ್ಷಿಣಿ ಹುಡುಗಿ : ರಜಿನಿ ಪೊಟೋಶೂಟ್ ನೋಡೋಕೆ ಮರಿಬೇಡಿ

ಇದೇ ಸೆಪ್ಟೆಂಬರ್‌ 16ರಂದು ಪ್ರಿಯಾಂಕಾ ಪತಿ ನಿಕ್‌ ಜೋನಸ್‌ (Nick Jonas)ರವರು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಅಚರಿಸಿಕೊಂಡಿದ್ದಾರೆ. ಇಬ್ಬರು ಜೊತೆಯಲ್ಲಿ ಬರ್ತಡೆಯನ್ನು ಆಚರಿಸುವ ಸಮಯದಲ್ಲಿ ತೆಗೆದ ಪೋಟೋವನ್ನು ಶೇರ್‌ ಮಾಡುವಾಗ ತಮ್ಮ ಮಗುವಿನ ಮುಖವನ್ನು ರೀವಿಲ್‌ ಮಾಡಿಲ್ಲ.ಹಾಗಾಗಿ ತಮ್ಮ ಮಗಳ ಮುಖವನ್ನು ಅಭಿಮಾನಿಗಳಿಗೆ ರೀವಿಲ್‌ ಮಾಡುವುದು ಸದ್ಯಕ್ಕೆ ಅನುಮಾನವಾಗಿದೆ.‌

Priyanka Chopra finally shared a photo of the baby

Comments are closed.