Nepal Earthquake : ವಾಯುವ್ಯ ನೇಪಾಳ, ದೆಹಲಿ, ದೆಹಲಿ ಎನ್‌ಸಿಆರ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ನೇಪಾಳದಲ್ಲಿ ಕನಿಷ್ಠ 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪನದಲ್ಲಿ 6.4 ತೀವ್ರತೆ ದಾಖಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ನೇಪಾಳದಲ್ಲಿ ಶುಕ್ರವಾರ ತಡರಾತ್ರಿ 6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಸುದ್ದಿಸಂಸ್ಥೆ ಎಎನ್‌ಐ ವರದಿಯ ಪ್ರಕಾರ, ರುಕುಮ್ ವೆಸ್ಟ್ ಮತ್ತು ಜಜರ್ಕೋಟ್ ಜಿಲ್ಲೆಗಳಲ್ಲಿ 36 ಮತ್ತು 34 ಮಂದಿ ಸಾವನ್ನಪ್ಪಿರುವ ಕುರಿತು ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಅಲ್ಲದೇ ಭೂಕಂಪದಿಂದಾಗಿ ಹಲವರು ಗಾಯಗೊಂಡಿದ್ದು, ಇನ್ನೂ ಕೆಲವರ ಸ್ಥಿತಿ ಚಿಂತಾಜನಕ ವಾಗಿದೆ.

ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರವು ಜಾಜರ್‌ಕೋಟ್ ಜಿಲ್ಲೆಯ ಲಾಮಿದಂಡಾ ಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದು ವನ್ನು ಗುರುತಿಸಿದಿದೆ. ನೇಪಾಳದಲ್ಲಿ ಒಟ್ಟು ಮೂರು ಭದ್ರತಾ ಏಜೆನ್ಸಿಗಳು ರಕ್ಷಣಾ ಹಾಗೂ ಪರಿಹಾರದ ಕಾರ್ಯವನ್ನು ಕೈಗೊಂಡಿವೆ.ಸಾಲ್ಯಾನ್, ದೈಲೇಖ್ ಮತ್ತು ರೋಲ್ಪಾ ಜಿಲ್ಲೆಗಳಲ್ಲಿ ಅಪಾರ ಪ್ರಮಾಣ ಆಸ್ತಿಗೆ ಹಾನಿ ಉಂಟಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ : ಕೇಂದ್ರ ಸರ್ಕಾರದಿಂದ ಬಿಗ್ ಗಿಫ್ಟ್ : ಕೇವಲ 3 ಸಾವಿರ ವಿನಿಯೋಗಿಸಿ ಗಳಿಸಿ ಲಕ್ಷಾಂತರ ಹಣ !
ಇನ್ನು ದೆಹಲಿ-ಎನ್‌ಸಿಆರ್‌ನಲ್ಲಿಯೂ ಭೂಪಂಕ ಸಂಭವಿಸಿದೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ದೆಹಲಿ-ಎನ್‌ಸಿಆರ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಉತ್ತರ ಭಾರತದ ಹಲವಾರು ಪ್ರದೇಶಗಳಲ್ಲಿಯೂ ಭೂಕಂಪನದ ಅನುಭವವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜನರು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಜಾಜರ್‌ಕೋಟ್ ಜಿಲ್ಲೆಯ ಲಮಿಡಾಂಡಾ ಪ್ರದೇಶದಲ್ಲಿ ಭೂಕಂಪನ ಶುಕ್ರವಾರ ರಾತ್ರಿ 11.47 ಕ್ಕೆ ಸಂಭವಿಸಿದೆ. ಭೂಕಂಪನದ ಕೇಂದ್ರಬಿಂದು ನೇಪಾಳದಲ್ಲಿದೆ, ಅಯೋಧ್ಯೆಯ ಉತ್ತರಕ್ಕೆ 227 ಕಿಮೀ ಮತ್ತು ಕಠ್ಮಂಡುವಿನಿಂದ ಪಶ್ಚಿಮ-ವಾಯುವ್ಯಕ್ಕೆ 331 ಕಿಮೀ ದೂರದಲ್ಲಿದೆ ಎನ್ನಲಾಗುತ್ತಿದೆ.
Nepal: Death toll jumps to 70 after strong earthquake
Read @ANI Story | https://t.co/e1TCzfvGr9#NepalEarthquake #earthquake #Nepal pic.twitter.com/xY8BEM2zMS
— ANI Digital (@ani_digital) November 4, 2023
ಇದನ್ನೂ ಓದಿ : ಬೆಂಗಳೂರಲ್ಲಿ ಮತ್ತೊಂದು ಅಗ್ನಿದುರಂತ : ಸುಟ್ಟು ಕರಕಲಾದ ಖಾಸಗಿ ಬಸ್‌ಗಳು
ಇನ್ನು ದೆಹಲಿ ಪಕ್ಕದಲ್ಲಿರುವ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಭಾಗಗಳಲ್ಲಿಯೂ ಭೂಕಂಪ ಸಂಭವಿಸಿರುವ ಕುರಿತು ವರದಿಯಾಗಿದೆ. ಭೂಕಂಪ ಸಂಭವಿಸುತ್ತಿದ್ದಂತೆಯೇ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಕಳೆದ ಅಕ್ಟೋಬರ್ 3 ರಂದು, ನೇಪಾಳದಲ್ಲಿ 6.2 ರ ತೀವ್ರತೆಯ ಭೂಕಂಪ ಸಂಭವಿಸಿತ್ತು.
ನೇಪಾಳದಲ್ಲಿ ಭೂಕಂಪ ಸಂಭವಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ನೇಪಾಳದಲ್ಲಿ 2015 ರಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. 12,000ಕ್ಕೂ ಮಂದಿಯನ್ನು ಭೂಕಂಪ ಬಲಿ ಪಡೆದಿತ್ತು. ಅಪಾರ ಪ್ರಮಾಣ ಆಸ್ತಿಗೆ ಹಾಕಿ ಉಂಟಾಗಿತ್ತು.
Nepal earthquake more than 70 dead delhi Uttar Pradesh and Bihar Reporterd Earthquake