ವಿಶ್ವಕಪ್‌ ಸೆಮಿಫೈನಲ್‌ಗೆ ಅಫ್ಘಾನಿಸ್ತಾನ ತಂಡ ಎಂಟ್ರಿ ಫಿಕ್ಸ್‌ : ಇಲ್ಲಿದೆ ತಂಡಗಳ ಸೋಲು ಗೆಲುವಿನ ಪಕ್ಕಾ ಲೆಕ್ಕಾಚಾರ

ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌, ಅಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳಿಗೆ ಸೆಮಿಫೈನಲ್‌ ಪ್ರವೇಶಿಸಲು ಸಮಾನ ಅವಕಾಶವಿದೆ. ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್‌ನಲ್ಲಿ ಒಂದು ಸೋಲನ್ನು ಕಂಡಿದ್ರೆ ಆಸ್ಟ್ರೇಲಿಯಾ 2 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ.

ವಿಶ್ವಕಪ್‌ 2023 ರಲ್ಲಿ ( World Cup 2023) ಲೀಗ್‌ ಹಂತದ ಪಂದ್ಯಗಳು ಅಂತಿಮ ಹಂತದಲ್ಲಿದೆ. ಭಾರತ ಕ್ರಿಕೆಟ್‌ ತಂಡ ಈಗಾಗಲೇ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಉಳಿದ ಮೂರು ಸ್ಥಾನಗಳಿಗೆ ನಾಲ್ಕು ತಂಡಗಳು ಪೈಪೋಟಿ ನಡೆಸುತ್ತಿದೆ. ಅದ್ರಲ್ಲೂ ಅಫ್ಘಾನಿಸ್ತಾನ ಕ್ರಿಕೆಟ್ ತಂಡ (Afghanistan Cricket Team) ಈ ಬಾರಿಯ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ಎಂಟ್ರಿ ಕೊಡುವುದು ಫಿಕ್ಸ್‌ ಎನ್ನಲಾಗುತ್ತಿದೆ.

Afghanistan Cricket Team Will Enter World Cup 2023 Semi-Final, Here is exact Calculation
Image Credit : Afghanistan Cricket Board/ Twitter

ವಿಶ್ವಕಪ್‌ನಲ್ಲಿ ಭಾರತ ಸತತ 7 ಪಂದ್ಯಗಳಲ್ಲಿ ಗೆಲುವು ಕಾಣುವ ಮೂಲಕ ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅಲ್ಲದೇ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ದ ಆಡಲಿದ್ದು, ಈ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದ್ರೆ ಸೆಮಿ ಫೈನಲ್‌ ಲೆಕ್ಕಾಚಾರ ಬದಲಾಗುವುದು ಗ್ಯಾರಂಟಿ.

ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌, ಅಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳಿಗೆ ಸೆಮಿಫೈನಲ್‌ ಪ್ರವೇಶಿಸಲು ಸಮಾನ ಅವಕಾಶವಿದೆ. ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್‌ನಲ್ಲಿ ಒಂದು ಸೋಲನ್ನು ಕಂಡಿದ್ರೆ ಆಸ್ಟ್ರೇಲಿಯಾ 2 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಉಳಿದಂತೆ ನ್ಯೂಜಿಲೆಂಡ್‌ ಹಾಗೂ ಆಫ್ಘಾನಿಸ್ತಾನ ತಲಾ 3 ಪಂದ್ಯಗಳಲ್ಲಿ ಸೋತಿದ್ದು, ಅಂಕಪಟ್ಟಿಯಲ್ಲಿ ತಲಾ 8 ಅಂಕ ಪಡೆದುಕೊಂಡಿವೆ.

Afghanistan Cricket Team Will Enter World Cup 2023 Semi-Final, Here is exact Calculation
Image Credit : Afghanistan Cricket Board/ Twitter

ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡ ತನ್ನ ಮುಂದಿನ ಪಂದ್ಯವನ್ನು ಭಾರತ ತಂಡದ ವಿರುದ್ದ ಆಡಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ್ರೆ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ಪ್ರವೇಶ ಪಡೆಯುವ ಜೊತೆಗೆ ಅಂಕಪಟ್ಟಿಯಲ್ಲಿಯೂ ಅಗ್ರಸ್ಥಾನಕ್ಕೇರುವ ಸಾಧ್ಯತೆಯಿದೆ. ಒಂದೊಮ್ಮೆ ಸೋಲನ್ನು ಕಂಡ್ರೆ ಆತಂಕ ಎದುರಾಗುವುದು ಪಕ್ಕಾ.

ದಕ್ಷಿಣ ಆಫ್ರಿಕಾ ಭಾರತ ವಿರುದ್ದ ಸೋತರೂ ಕೂಡ ಅಫ್ಘಾನಿಸ್ತಾನ ವಿರುದ್ದ ಪಂದ್ಯ ಗೆಲ್ಲಬೇಕು. ಒಂದೊಮ್ಮೆ ಅಫ್ಘಾನಿಸ್ತಾನ ವಿರುದ್ದ ಸೋಲನ್ನು ಕಂಡ್ರೆ ಅಫ್ಘಾನಿಸ್ತಾನಕ್ಕೆ ಸೆಮಿಫೈನಲ್‌ ಪ್ರವೇಶಿಸುವ ಅವಕಾಶ ದೊರೆಯಲಿದೆ. ಆದರೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ಪಂದ್ಯಗಳ ಮೇಲೆಯೂ ನಿರ್ಧಾರವಾಗಲಿದೆ.

ಇದನ್ನೂಓದಿ : ಕೇವಲ 55 ರನ್‌ಗೆ ಶ್ರೀಲಂಕಾ ಆಲೌಟ್‌ : ವಿಶ್ವಕಪ್‌ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಭಾರತ

ಅಪ್ಘಾನಿಸ್ತಾನ ಮುಂದಿನ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ದ ಆಡಲಿದೆ. ನಂತರ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಆದರೆ ಅಫ್ಘಾನಿಸ್ತಾನ ತಂಡ ಸೆಮಿಫೈನಲ್‌ ಪ್ರವೇಶಿಸಲು ಎರಡೂ ಪಂದ್ಯಗಳಲ್ಲಿಯೂ ಗೆಲುವು ಕಾಣಬೇಕಾಗಿದೆ. ನ್ಯೂಜಿಲೆಂಡ್‌ ತಂಡ ಸದ್ಯ ರನ್‌ರೇಟ್‌ ಆಧಾರದಲ್ಲಿ ಅಂಕಪಟ್ಟಿಯಲ್ಲಿ ಅಫ್ಘಾನಿಸ್ತಾನಕ್ಕಿಂತ ಒಂದು ಸ್ಥಾನ ಮುಂದಿದೆ.

Afghanistan Cricket Team Will Enter World Cup 2023 Semi-Final, Here is exact Calculation
Image Credit : Afghanistan Cricket Board/ Twitter

ಆದರೆ ನ್ಯೂಜಿಲೆಂಡ್‌ ತಂಡ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ದ ಮುಂದಿನ ಪಂದ್ಯಗಳನ್ನು ಆಡಲಿದೆ ಎರಡೂ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಸ್ಥಿತಿಗೆ ನ್ಯೂಜಿಲೆಂಡ್‌ ತಲುಪಿದೆ. ಒಂದು ಪಂದ್ಯ ಸೋತರೂ ಕೂಡ ವಿಶ್ವಕಪ್‌ನಿಂದ ಹೊರ ಬೀಳುವ ಸಾಧ್ಯತೆಯಿದೆ. ಇನ್ನು ಆಸ್ಟ್ರೇಲಿಯಾ ಸದ್ಯ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾದ ತಂಡ ಸದ್ಯ 8 ಅಂಕಗಳನ್ನು ಪಡೆದುಕೊಂಡಿದೆ. ಆದರೆ 3 ಪಂದ್ಯಗಳು ಬಾಕಿ ಉಳಿದಿವೆ. ಆಸ್ಟ್ರೇಲಿಯಾ ತನ್ನ ಮುಂದಿನ ಪಂದ್ಯವನ್ನು ಇಂಗ್ಲೆಂಡ್‌, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ದ ಆಡಲಿದೆ. ಮೂರು ಪಂದ್ಯಗಳಲ್ಲಿ ಜಯಿಸಿದ್ರೆ ಸೆಮಿಫೈನಲ್‌ ಪ್ರವೇಶ ಪಡೆಯುವುದು ಖಚಿತ.

ಇದನ್ನೂ ಓದಿ : India Vs Sri Lanka : ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ಪಾಲಿಗೆ 3 ಕೆಟ್ಟ ದಿನಗಳು !

ಒಂದೊಮ್ಮೆ ಎರಡು ಪಂದ್ಯಗಳಲ್ಲಿ ಸೋಲನ್ನು ಕಂಡ್ರೆ ಆಸ್ಟ್ರೇಲಿಯಾ ಕೂಡ ವಿಶ್ವಕಪ್‌ ನಿಂದ ಔಟ್‌ ಆಗುವ ಎಲ್ಲಾ ಸಾಧ್ಯತೆಗಳಿವೆ. ಈಗಾಗಲೇ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ತಂಡಗಳು ವಿಶ್ವಕಪ್‌ನಿಂದಲೇ ಹೊರ ಬಿದ್ದಿವೆ. ಆದರೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ಸೆಮಿಫೈನಲ್‌ ಪ್ರವೇಶದ ಭವಿಷ್ಯವನ್ನು ಈ ತಂಡಗಳು ನಿರ್ಧಾರ ಮಾಡಲಿವೆ.

Afghanistan Cricket Team Will Enter World Cup 2023 Semi-Final, Here is exact Calculation
Image Credit : Afghanistan Cricket Board/ Twitter

ಅಫ್ಘಾನಿಸ್ತಾನ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ. ಅಫ್ಘಾನಿಸ್ತಾನ ತಂಡ ಪಾಕಿಸ್ತಾನ, ಇಂಗ್ಲೆಂಡ್‌, ಶ್ರೀಲಂಕಾ, ನೆದರ್‌ಲ್ಯಾಂಡ್‌ ತಂಡಗಳ ವಿರುದ್ದ ಭರ್ಜರಿ ಗೆಲುವು ದಾಖಲಿಸಿದೆ. ಆದರೆ ನ್ಯೂಜಿಲೆಂಡ್‌, ಭಾರತ , ಬಾಂಗ್ಲಾದೇಶ ತಂಡಗಳ ವಿರುದ್ದ ಸೋಲನ್ನು ಅನುಭವಿಸಿದೆ. ಹೀಗಾಗಿ ಉಳಿದ ಎರಡು ಪಂದ್ಯಗಳನ್ನು ಗೆಲ್ಲುವುದು ಅಫ್ಘಾನಿಸ್ತಾನ ತಂಡಕ್ಕೆ ಕಷ್ಟವೇನಲ್ಲ.

ಇದನ್ನೂ ಓದಿ : Rohit Sharma – Virat Kohli : ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿಗೆ ಇದು ಕೊನೆಯ ವಿಶ್ವಕಪ್‌ !

ಅಫ್ಘಾನಿಸ್ತಾನ ತಂಡ :
ಹಶ್ಮತುಲ್ಲಾ ಶಾಹಿದಿ, ಇಬ್ರಾಹಿಂ ಜದ್ರಾನ್, ಇಕ್ರಮ್ ಅಲಿಖಿಲ್ ( ವಿಕೆಟ್‌ ಕೀಪರ್), ರಹಮಾನುಲ್ಲಾ ಗುರ್ಬಾಜ್ (ಕೀಪರ್ ), ನಜೀಬುಲ್ಲಾ ಜದ್ರಾನ್, ರಿಯಾಜ್ ಹಸನ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ರಹಮತ್ ಶಾ, ರಶೀದ್ ಖಾನ್, ಅಬ್ದುಲ್ ರೆಹಮಾನ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್

Afghanistan Cricket Team Will Enter World Cup 2023 Semi-Final, Here is exact Calculation

 

Comments are closed.