ಪ್ರೀತಿಸಿದ ಹುಡುಗನ ಬಗ್ಗೆ ಗುಟ್ಟು ಬಿಚ್ಚಿಟ್ಟ ನಟಿ ರಜನಿ

ನಟಿ ರಜನಿ (Actress Rajini) ಕಿರುತೆರೆ ಎಂಟ್ರಿ ಕೊಡುವ ಮೊದಲು ಆರ್ಕೆಸ್ಟ್ರಾಗಳಲ್ಲಿ ಹಾಡು ಹೇಳುತ್ತಾ ಕಷ್ಟದ ಜೀವನ ನಡೆಸಿದ್ದರು. ನಂತರ ಸ್ಟಾರ್ ಸುವರ್ಣದಲ್ಲಿ ಅಮೃತ ವರ್ಷಿಣಿ ಧಾರಾವಾಹಿ ಮೂಲಕ ಸಾಕಷ್ಟು ಕನಸುಗಳನ್ನು ಹೊತ್ತು ಕಿರುತೆರೆಗೆ ಎಂಟ್ರಿಕೊಟ್ಟು, ಕರ್ನಾಟಕದ ಮನೆ ಮಗಳಾಗಿ ಗುರುತಿಸಿಕೊಂಡರು. ಇದೀಗ ನಟಿ ರಜಿನಿ ಧಾರಾವಾಹಿ ಸಿನಿಮಾರಂಗಗಳಷ್ಟೇ ಅಲ್ಲದೇ, ರಿಯಾಲಿಟಿ ಶೋಗಳಲ್ಲೂ ಕಮಾಲ್ ಮಾಡುತ್ತಿದ್ದಾರೆ. ಸದ್ಯ ಅವರ ಕನಸುಗಳು ನನಸಾಗುತ್ತಿದ್ದು, ಹಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಜೀ ಕನ್ನಡ ವಾಹಿನಿಯ ಸೂಪರ್ ಕ್ವೀನ್ಸ್ ಎಂಬ ರಿಯಾಲಿಟಿ ಶೋನಲ್ಲೂ ಭಾಗವಹಿಸುತ್ತಿದ್ದು, ಅದರಲ್ಲಿ ತಾನು ಪ್ರೀತಿಸಿದ ಹುಡುಗನ ಬಗ್ಗೆ ರಿವೀಲ್‌ ಮಾಡಿದ್ದಾರೆ.

ನಟಿ ರಜನಿ ನಟನೆಯೊಂದಿಗೆ ಭರತನಾಟ್ಯ ಹಾಗೂ ಪಾಶ್ಚಾತ್ಯ ನೃತ್ಯವನ್ನೂ ಕರಗತ ಮಾಡಿಕೊಂಡಿದ್ದಾರೆ. ತುಮಕೂರು ಮೂಲದ ನಟಿ ರಜಿನಿ ಅವರು ಈಗ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ಬ್ಯುಸಿಯಾಗಿರುವ ನಟಿ ರಜಿನಿ. ಕೆಲ ಧಾರಾವಾಹಿಗಳಲ್ಲಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಧಾರಾವಾಹಿಯಲ್ಲಿ ನಟಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಯಾಕೆಂದರೆ ಅವರ ಪಾತ್ರಗಳು ಜನರ ಮನದಲ್ಲಿ ಗಟ್ಟಿಯಾಗಿ ನೆಲೆಯೂರಿ ಬಿಟ್ಟಿರುತ್ತದೆ. ಹಾಗಾಗಿ ಅವಕಾಶಗಳು ದೊರೆಯುವುದು ಕಷ್ಟ. ಮೂರು ವರ್ಷಕ್ಕೂ ಹೆಚ್ಚು ಕಾಲ ಮೂಡಿ ಬಂದ ಧಾರಾವಾಹಿಯಲ್ಲಿ ರಜಿನಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

ನಂತರ ‘ಆತ್ಮ ಬಂಧನ’ ಧಾರಾವಾಹಿಯಲ್ಲಿ ನಟಿಸಿದರು. ಭಿನ್ನ ಪಾತ್ರಗಳನ್ನೇ ಆರಿಸಿಕೊಳ್ಳುತ್ತಿದ್ದ ರಜಿನಿ ಅವರಿಗೆ ಕ್ರಮೇಣ ಅವಕಾಶಗಳು ಕಡಿಮೆಯಾದವು. ನಂತರದ ದಿನಗಳಲ್ಲಿ ನಟಿ ರಜನಿ ಕೆಲ ರಿಯಾಲಿಟಿ ಶೋಗಳಾದ ಸ್ಟಾರ್ ಸಿಂಗರ್, ಡ್ಯಾನ್ಸಿಂಗ್ ಸ್ಟಾರ್‌ , ಮಜಾ ಟಾಕೀಸ್, ಕುಕ್ಕರಿ ಶೋಗಳಲ್ಲಿ ಭಾಗವಹಿಸಿದ್ದರು. ಕುಕ್ಕರಿ ಶೋ ಒಂದನ್ನು ರಜಿನಿ ಅವರೇ ಹೋಸ್ಟ್ ಮಾಡಿದ್ದರು. ಕಿರುತೆರೆಯಲ್ಲಿ ಹಾಗೂ ಸಿನಿಮಾದಲ್ಲಿ ಬ್ಯುಸಿಯಾಗಿರುವ ರಜಿನಿ ಅವರ ಚೊಚ್ಚಲ ಸಿನಿಮಾ ‘ಅಂಬುಜ’ ರಿಲೀಸ್ ಆಗಿದೆ. ಅಂಬುಜ ಸಿನಿಮಾದಲ್ಲಿ ಖಡಕ್ ಹೆಂಗಸಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ರಜಿನಿ ಅವರು ‘ಅಸುರನ ಕೈಯಲ್ಲಿ ಪಾರಿಜಾತ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲೂ ರಜಿನಿ ನಾಯಕಿ ಪಾರಿಜಾತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ‘ಡವ್ ಮಂಜ’ ಎಂಬ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ.

ಸದ್ಯ ರಜಿನಿ ಅವರು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಅಂತರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಕೆಲ ಸೀನ್ ಗಳಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ಮುಂದಿನ ದಿನಗಳಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇನ್ನು ಇದೀಗ ಸ್ಟಾರ್ ಸುವರ್ಣದ ಹೊಸ ಧಾರಾವಾಹಿಯಲ್ಲೂ ಹಳ್ಳಿ ಮಗಳ ಪಾತ್ರದಲ್ಲಿ ರಜಿನಿ ನಟಿಸುತ್ತಿದ್ದಾರೆ. ಆ ಧಾರಾವಾಹಿಯ ಹೆಸರು ಕೀರ್ತಿ ಕುಮಾರ ಹಾಡುಗಾರ. ಸ್ಟಾರ್ ಸುವರ್ಣದಲ್ಲಿ ಬಹಳ ಹಿಂದೆಯೇ ಇದರ ಪ್ರೋಮೋ ರಿಲೀಸ್ ಆಗಿದ್ದು, ಧಾರಾವಾಹಿಯ ಪ್ರಸಾರ ಯಾವಾಗ ಎಂಬುದು ತಿಳಿದು ಬಂದಿಲ್ಲ.

ಇದನ್ನೂ ಓದಿ : ಕ್ರಾಂತಿ ಸಿನಿಮಾದ ನಾಲ್ಕನೇ ಹಾಡು ರಿಲೀಸ್‌ : ವೈರಲ್‌ ಆಯ್ತು ಮಾಸ್‌ ಸಾಂಗ್‌

ಇದನ್ನೂ ಓದಿ : ಡಾ. ವಿಷ್ಣುವರ್ಧನ್‌ ಸ್ಮಾರಕ ಲೋಕಾರ್ಪಣೆ : ಸಾಮಾಜಿಕ ಜಾಲತಾಣಗಳಲ್ಲಿ ನಟ ಅನಿರುದ್ದ ಹೀಗಂದಿದ್ಯಾಕೆ?

ಇದನ್ನೂ ಓದಿ : ಚಿತ್ರೀಕರಣ ಮುಗಿಸಿದ “ಕರಿ ಹೈದ ಕರಿ ಅಜ್ಜ” ಸಿನಿತಂಡ : ಸ್ಯಾಂಡಲ್‌ವುಡ್‌ಗೆ ಬರಲಿದೆ ಮತ್ತೊಂದು ದೈವದ ಸಿನಿಮಾ

ಇನ್ನು ಸದ್ಯ ರಜಿನಿ ಅವರು ಜೀ ಕನ್ನಡ ವಾಹಿನಿಯ ಸೂಪರ್ ಕ್ವೀನ್ಸ್ ಎಂಬ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದಾರೆ. ಇದರಲ್ಲಿ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಹಂಚಿಕೊಂಡಿದ್ದಾರೆ. ಇನ್ನು ಅದೇ ವೇದಿಕೆಯೊಂದರಲ್ಲಿ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತಾರಳನ್ನು ಎಜೆ ಪ್ರೀತಿಸುವ ರೀತಿ ನಿಮ್ಮನ್ನು ಪ್ರೀತಿಸುವ ವ್ಯಕ್ತಿ ಇದ್ದಾರಾ ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ರಜಿನಿ ಹೌದು ಎಂದು ಹೇಳಿದ್ದಾರೆ. ಆದರೆ ಯಾರವರು ಮದುವೆ ಯಾವಾಗ ಎಂಬ ಯಾವ ವಿಚಾರವನ್ನು ಹೇಳಿಲ್ಲ. ಒಟ್ಟಿನಲ್ಲಿ ರಜಿನಿ ಅವರು ತಮ್ಮ ಪ್ರೀತಿಯ ಗುಟ್ಟನ್ನು ರಟ್ಟು ಮಾಡಿದ್ದಾರೆ. ಈ ವಿಚಾರ ತಿಳಿದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

Actress Rajini revealed the secret about the boy she loved

Comments are closed.