Kiran Gosavi : ಆರ್ಯನ್ ಖಾನ್ ಪ್ರಕರಣದ ಎನ್‌ಸಿಬಿ ಸಾಕ್ಷಿ ಕಿರಣ್ ಗೋಸಾವಿ ಆರೆಸ್ಟ್‌

ಮುಂಬೈ : ಡ್ರಗ್ಸ್‌ ಕ್ರೂಸ್‌ ದಂಧೆ ಪ್ರಕರಣದಲ್ಲಿ ನಡೆದಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಸ್ವತಂತ್ರ ಸಾಕ್ಷಿ ಕಿರಣ್‌ ಗೋಸಾವಿ ಅವರನ್ನು ಪುಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಡ್ರಗ್ಸ್‌ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ವೇಳೆಯಲ್ಲಿ ಆರ್ಯನ್‌ ಖಾನ್‌ ಜೊತೆಗೆ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದರು. ನಂತರ ಡ್ರಗ್ಸ್‌ ಪ್ರಕರಣವನ್ನು ಮುಚ್ಚಿ ಹಾಕುವ ಸಲುವಾಗಿ ಸುಮಾರು 18 ಕೋಟಿ ರೂಪಾಯಿ ಡೀಲ್‌ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಗೋಸಾವಿ ನಾಪತ್ತೆ ಯಾಗಿದ್ದರು. 2018 ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ತನ್ನ ವಿರುದ್ಧ ಲುಕ್‌ಔಟ್ ಸುತ್ತೋಲೆ ಹೊರಡಿಸಿದ ನಂತರ ತಲೆಮರೆಸಿಕೊಂಡಿದ್ದ ಗೋಸಾವಿ, ಮಹಾರಾಷ್ಟ್ರದಲ್ಲಿ ತನ್ನ ಜೀವಕ್ಕೆ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದಾನೆ.‌

ಪೊಲೀಸರ ಮುಂದೆ ಶರಣಾದ್ರ ಗೋಸಾವಿ ?

ಮುಂಬೈ ಕ್ರೂಸ್‌ ದಾಳಿಯ ವೇಳೆಯಲ್ಲಿ ಆರ್ಯನ್‌ ಖಾನ್‌ ಜೊತೆಗೆ ತೆಗೆಯಿಸಿಕೊಂಡಿದ್ದ ಪೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ಖಾಸಗಿ ತನಿಖಾಧಿಕಾರಿಯಾಗಿರುವ ಕಿರಣ್‌ ಗೋಸಾವಿ ಅಂಗರಕ್ಷಕನಾಗಿರುವ ಪ್ರಭಾಕರ್‌ ಎಂಬಾತ ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ಹಾಗೂ ಕಿರಣ್‌ ಗೋಸಾವಿ ವಿರುದ್ದ ಗಂಭೀರ ಆರೋಪವನ್ನು ಮಾಡಿದ್ದ. ಪ್ರಕರಣವನ್ನು ಕೈ ಬಿಡಲು 25 ಕೋಟಿ ರೂಪಾಯಿ ಡೀಲ್‌ ನಡೆದಿತ್ತು. ಅಂತಿಮ ವಾಗಿ 18 ಕೋಟಿ ರೂಪಾಯಿಗೆ ಡೀಲ್‌ ಫೈನಲ್‌ ಆಗಿತ್ತು ಅಂತಾ ಆರೋಪಿಸಿದ್ದರು. ಈ ಡೀಲ್‌ ಹಣದಲ್ಲಿ 8ಕೋಟಿ ರೂಪಾಯಿ ಸಮೀರ್‌ ವಾಂಖೆಡೆ ಹಾಗೂ ಉಳಿದ ಹಣ ಇತರರಿಗೆ ಸಂದಾಯವಾಗಲಿದೆ ಎಂದಿದ್ದರು. ಪ್ರಭಾಕರ್‌ ನೀಡಿದ್ದ ಹೇಳಿ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಕೊಟ್ಟಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್‌ ವಾಂಖೆಡೆ ಅವರ ವೈಯಕ್ತಿಕ ಜೀವನದ ಕುರಿತು ಪ್ರಶ್ನೆಗಳನ್ನು ಎತ್ತಲಾಗಿತ್ತು. ಇನ್ನೊಂದೆಡೆಯಲ್ಲಿ ಎನ್‌ಸಿಬಿ ಸಮೀರ್‌ ವಿರುದ್ದ ತನಿಖೆಗೆ ಆದೇಶ ನೀಡಿತ್ತು. ಇದೆಲ್ಲದರ ನಡುವಲ್ಲೇ ಪೊಲೀಸರು ಕಿರಣ್‌ ಗೋಸಾವಿ ವಿರುದ್ದ ಲುಕ್‌ಔಟ್‌ ನೊಟೀಸ್‌ ಜಾರಿ ಮಾಡಿದ್ದರು. ಇದೀಗ ಕಿರಣ್‌ ಗೋಸಾವಿ ಪೊಲೀಸರ ಮುಂದೆ ಶರಣಾಗತಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಆರ್ಯನ್‌ ಖಾನ್‌ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್‌ : 18 ಕೋಟಿ ರೂ. ನಡೆದಿತ್ತಾ ಡೀಲ್‌

ಇದನ್ನೂ ಓದಿ : ಬಾಲಿವುಡ್ ನಟ ಶಾರೂಕ್ ಖಾನ್ ಗೆ ಬಿಗ್ ಶಾಕ್ : ಪುತ್ರ ಆರ್ಯನ್‌ ಖಾನ್ ಚರಸ್ ಸೇವನೆ ಮಾಡಿರುವುದು ದೃಢ

Comments are closed.