ಮೊಳಕೆ ಬರಿಸಿದ ಹೆಸರು ಕಾಳು ತಿನ್ನುವುದು ಆರೋಗ್ಯಕ್ಕೆ ಉತ್ತಮವೇ ?

ಹೆಸರು ಕಾಳನ್ನು ಬೇಯಿಸಿ ತಿನ್ನುವ ಬದಲು ಮೊಳಕೆ ಬರಿಸಿ ಹಸಿಯಾಗಿ ತಿನ್ನುವುದರಿಂದ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಲಾಭದಾಯಕವಾಗಿದೆ. ಮೊಳಕೆ ಬರಿಸಿದ ಹೆಸರು ಕಾಳಿನಲ್ಲಿ ಪ್ರೋಟೀನ್‌, ಫೈಬರ್‌, ವಿಟಮಿನ್ಸ್‌, ಕ್ಯಾಲ್ಸಿಯಂ ಹಾಗೂ ಕಬ್ಬಿಣ್ಣದ ಅಂಶ ಹೇರಳವಾಗಿದೆ. ಆರೋಗ್ಯವಂತ ಮನುಷ್ಯನ ದೇಹಕ್ಕೆ ಏನೆಲ್ಲಾ ಒಳ್ಳೆಯ ಸತ್ವಗಳ ಅವಶ್ಯಕತೆ ಇದೆಯೋ ಅದೆಲ್ಲಾ ಮೊಳಕೆ ಬರಿಸಿದ ಹೆಸರು ಕಾಳಿನಲ್ಲಿ ಅಡಗಿದೆ.

ಮೊಳಕೆ ಬರಿಸಿದ ಹೆಸರು ಕಾಳು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತೆ. ಹೆಸರು ಕಾಳನ್ನು ನೀರಿನಲ್ಲಿ ನೆನೆಸಿಟ್ಟು ಮೊಳಕೆ ಬಂದ ಮೇಲೆ ಹಸಿಯಾಗಿ ತಿನ್ನುವುದರಿಂದ ಜೀರ್ಣಶಕ್ತಿ ಉತ್ತಮವಾಗುತ್ತದೆ. ಇದರಲ್ಲಿರುವ ಫೈಬರ್‌ ಅಂಶ ದೇಹದಲ್ಲಿ ಆಹಾರ ಸರಾಗವಾಗಿ ಸಂಚಾರ ಮಾಡುವಂತೆ ಮಾಡುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ದೂರಮಾಡುತ್ತದೆ.

ಇದನ್ನೂ ಓದಿ: Carrot : ನಿತ್ಯವೂ ಕ್ಯಾರೆಟ್‌ ತಿನ್ನುವುದು ಆರೋಗ್ಯಕ್ಕೆ ಉತ್ತಮವೇ ?

ಹೃದಯದ ಆರೋಗ್ಯವನ್ನು ಮೊಳಕೆ ಬರಿಸಿದ ಹೆಸರು ಕಾಳು ಕಾಪಾಡುತ್ತದೆ. ಮೊಳಕೆ ಬರಿಸಿದ ಹೆಸರು ಕಾಳು ತಿನ್ನುವುದರಿಂದ ಹೃದಯದ ಆರೋಗ್ಯ ಉತ್ತಮವಾಗುತ್ತದೆ. ಇದು ರಕ್ತದಲ್ಲಿ ಒಳ್ಳೆಯ ಕೊಬ್ಬಿ ಅಂಶವನ್ನು ಹೆಚ್ಚಿಸುತ್ತದೆ ಜೊತೆಗೆ ರಕ್ತನಾಳಗಳ ಆರೋಗ್ಯವನ್ನು ಕಾಪಾಡುತ್ತದೆ. ರಕ್ತ ಸಂಚಾರ ಹೆಚ್ಚಿಸಿ ದೇಹಕ್ಕೆ ಹೆಚ್ಚು ಆಕ್ಸಿಜನ್‌ ಸಿಗುವಂತೆ ಮಾಡುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಮೊಳಕೆ ಬರಿಸಿದ ಹೆಸರು ಕಾಳು ಹೆಚ್ಚಿಸುತದೆ. ಇದರಲ್ಲಿರುವ ವಿಟಮಿನ್‌ ಸಿ ದೇಹಕ್ಕೆ ಇನ್ಫೆಕ್ಷನ್‌ ಆಗದಂತೆ ತಡೆಯುತ್ತೆ. ಇದರ ಜೊತೆ ವಿಟಮಿನ್‌ ಎ ಅಂಶ ಹೆಚ್ಚಾಗಿ ಇರೊದ್ರಿಂದ ದೇಹಕ್ಕೆ ಹೆಚ್ಚಿನ ಆ್ಯಂಟಿ ಆಕ್ಸಿಡೆಂಟ್ ಸಿಗುವಂತೆ ನೀಗಾ ವಹಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. ಅಲ್ಲದೇ ಮೊಳಕೆ ಬರಿಸಿದ ಹೆಸರು ಕಾಳು ಕ್ಯಾನ್ಸರ್‌ ವಿರುದ್ಧವು ಹೊರಾಡುತ್ತದೆ.

ಇದನ್ನೂ ಓದಿ: Drumstick : ಪೌಸ್ಟಿಕಾಂಶಗಳ ಆಗರ ನುಗ್ಗೆ ಕಾಯಿ

(Moong Sprouted Is eating grain good for health?)

Comments are closed.