ಮನೆಯಲ್ಲೇ ಮಾಡಿ ರುಚಿ ರುಚಿಯಾದ ಮಂಗಳೂರು ಬನ್ಸ್

ಕರಾವಳಿ ಭಾಗದ ಜನರ ಆಹಾರ ಪದ್ದತಿಯೇ ವಿಶೇಷ. ಇಂತಹ ಆಹಾರಗಳಲ್ಲಿಯೇ ಮಂಗಳೂರಿಗರು ಹೆಚ್ಚಾಗಿ ಇಷ್ಟ ಪಡುವುದು ಬನ್ಸ್.‌ ಇದೇ ಕಾರಣಕ್ಕೆ ಮಂಗಳೂರು ಬನ್ಸ್‌ ಅಂತಾನೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಇಷ್ಟು ದಿನ ಉಡುಪಿ, ಮಂಗಳೂರಿನ ಹೋಟೆಲ್‌ಗಳಲ್ಲಿ ಹೆಚ್ಚಾಗಿ ಸಿಗುವ ಬನ್ಸ್‌ನ್ನು ನೀವು ಮನೆಯಲ್ಲಿಯೇ ಸಿದ್ದ ಮಾಡಬಹುದು. ರುಚಿ ರುಚಿಯಾದ ಮಂಗಳೂರು ಬನ್ಸ್‌ ಮಾಡುವುದು ಹೇಗೆ ಅನ್ನೋ ಟಿಪ್ಸ್‌ ನಾವು ಕೊಡ್ತೇವೆ ಕೇಳಿ.

ಮಂಗಳೂರು ಬನ್ಸ್‌ ಮಾಡಲು ಬೇಕಾಗುವ ಸಾಮಾಗ್ರಿಗಳು : ಮೈದಾ ಹಿಟ್ಟು ( ಗೋದಿ ಹಿಟ್ಟು ಕೂಡ ಬಳಸ ಬಹುದು ), ಬಾಳೆ ಹಣ್ಣು 6, 3 ಟೇಬಲ್‌ ಸ್ಪೂನ್‌ ಸಕ್ಕರೆ, 2 ಟೇಬಲ್‌ ಸ್ಪೂನ್‌ ಜೀರಿಗೆ, 1 ಕಪ್‌ ಮೊಸರು, 1 ಚಿಟಿಕೆ ಅಡಿಗೆ ಸೋಡಾ, ತೆಂಗಿನ ಎಣ್ಣೆ , ರುಚಿಗೆ ತಕ್ಕಷ್ಟು ಉಪ್ಪು.

ಇದನ್ನೂ ಓದಿ: Veg Momos : ಮನೆಯಲ್ಲೇ ಮಾಡಿ ಚೈನೀಸ್‌ ವೆಜ್ ಮೋಮೋಸ್

ತಯಾರಿಸುವ ವಿಧಾನ : ಮೊದಲಿಗೆ ಒಂದು ದೊಡ್ಡ ಪಾತ್ರೆಗೆ ಸಿಪ್ಪೆ ಸುಲಿದ 6 ಬಾಳೆಹಣ್ಣನ್ನು ಹಾಕಿಕೊಳ್ಳಿ ನಂತರ ಅದಕ್ಕೆ ಜೀರಿಗೆ, ಸಕ್ಕರೆ ಹಾಕಿಕೊಂಡು ಚೆನ್ನಾಗಿ ಪೇಸ್ಟ್‌ ಮಾಡಿ ನಂತರ ಆ ಪೇಸ್ಟ್‌ ಗೆ ಮೊಸರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರಾ ಮಿಶ್ರಣಕ್ಕೆ ಮೈದಾ ಹಿಟ್ಟನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ 8 ರಿಂದ 9 ಗಂಟೆಗಳಷ್ಟು ಕಾಲ ಹಾಗೇ ಬಿಡಿ.

ನಂತರ ಅದನ್ನು ಒಮ್ಮೆ ಚೆನ್ನಾಗಿ ಕಲಸಿಕೊಳ್ಳಿ. ಕಲಸಿಕೊಂಡ ನಂತರ ಅದನ್ನು ಮಧ್ಯಮ ಗಾತ್ರದ ಉಂಡೆಯನ್ನು ಮಾಡಿಕೊಳ್ಳಿ. ಉಂಡೆ ಮಾಡಿಯಾದ ನಂತರ ಪೂರಿ ಲಟ್ಟಿಸುವ ಗಾತ್ರದಲ್ಲಿ ಆ ಉಂಡೆಯನ್ನು ಲಟ್ಟಿಸಿಕೊಳ್ಳಿ. ನಂತರ ಅದನ್ನು ನಿದಾನವಾಗಿ ಎಣ್ನೆಗೆ ಬಿಟ್ಟು ಚೆನ್ನಾಗಿ ಕರಿಯಬೇಕು. ಎಣ್ಣೆಯಲ್ಲಿ ಕಂದು ಬಣ್ಣದಲ್ಲಿ ಬನ್ಸ್‌ ಉಬ್ಬಿ ಬರುವ ವರೆಗೆ ಬನ್ಸ್‌ ಅನ್ನು ಎಣ್ಣೆಯಲ್ಲಿ ಕರಿಯಬೇಕು. ನಂತರ ಸಾಂಬಾರ್‌ ಜೊತೆ ಸಿಹಿಯಾದ ಬನ್ಸ್‌ ಸವಿಯಲು ಸಿದ್ಧ.

ಇದನ್ನೂ ಓದಿ: RavaVada : ಸಂಜೆ ಸ್ನ್ಯಾಕ್ಸ್ ಗೆ ಥಟ್ ಅಂತ ರೆಡಿಮಾಡಿ ರುಚಿಕರ ರವಾ ವಡೆ

( Homemade Delicious Mangalore Buns)

Comments are closed.