NIA raid: 8 ರಾಜ್ಯಗಳ 70 ಕಡೆ ಎನ್‌ಐಎ ದಾಳಿ: ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿತ ಸ್ಥಳಗಳಲ್ಲಿ ಶೋಧ

ನವದೆಹಲಿ: (NIA raid) ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆ ಹಾಗೂ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಭಾರತದ ಎಂಟು ರಾಜ್ಯಗಳ ಎಪ್ಪತ್ತು ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ಬೆಳಿಗ್ಗೆ ದಾಳಿ ನಡೆಸಿದೆ. ಪಂಜಾಬ್‌ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಲಾರೆನ್ಸ್‌ ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿತ ಸ್ಥಳಗಳಲ್ಲಿ ಶೋಧ ಮುಂದುವರೆದಿದೆ.

ದೆಹಲಿಯ ಎನ್‌ ಸಿ ಆರ್, ಪಂಜಾಬ್‌, ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ, ಗುಜರಾತ್‌, ಚಂಡೀಗಢ ಹಾಗೂ ಉತ್ತರ ಪ್ರದೇಶದಲ್ಲಿ ಇಂದು ಮುಂಜಾನೆಯೇ ಶೋಧ ಕಾರ್ಯಾಚರಣೆ ಆರಂಭವಾಗಿದೆ. ದರೋಡೆ, ಕಳ್ಳಸಾಗಣೆ ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಷ್ಣೋಯಿಯನ್ನು ಎನ್‌ ಐಎ ೨೦೨೨ ನವೆಂಬರ್‌ ೪ ರಂದು ಬಂಧಿಸಿತ್ತು.

ವಾರದ ಹಿಂದಷ್ಟೇ ಸಿರ್ಸಾ ಮೂಲದ ಲಾಜಿಸ್ಟಿಕ್ಸ್‌ ಪೂರೈಕೆದಾರ ಹಾಗೂ ಕುಖ್ಯಾತ ರೌಡಿಯೋರ್ವನನ್ನು ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ವೇಳೆ ಬಂಧಿಸಲಾಗಿತ್ತು. ದೇಶ ಸೇರಿದಂತೆ ವಿದೇಶಗಳ್ಲಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ರೂಪಿಸುತ್ತಿರುವ ಕ್ರಿಮಿನಲ್‌ ಗ್ಯಾಂಗ್‌ಗಳನ್ನು ಎನ್‌ ಐಎ ಗುರುತಿಸಿದೆ. ಶಸ್ತ್ರಾಸ್ತ್ರ ಪೂರೈಕೆದಾರನ ಬಂಧನವಾದ ಬಳಿಕ ಹರಿಯಾಣ ಹಾಗೂ ಪಂಜಾಬ್‌ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗ್ಯಾಂಗ್‌ ಗಳನ್ನು ಬೇರು ಸಹಿತ ಕಿತ್ತು ಹಾಕುವ ಕ್ರಮ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನೂ ಕೆಲ ದಿನಗಳ ಹಿಂದೆ ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಕೇರಳ, ತೆಲಂಗಾಣ ಸೇರಿದಂರೆ ವಿವಿಧ ಪ್ರದೇಶಗಳ ಮೇಲೆ ಎನ್‌ ಐಎ ದಾಳಿ ನಡೆಸಿತ್ತು. ಕೇರಳದ ಕೊಯಮುತ್ತೂರಿನಲ್ಲಿ ನಡೆದ ಕಾರ್‌ ಬಾಂಬ್‌ ಹಾಗೂ ಕರ್ನಾಟಕದ ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಮಿಂಚಿನ ದಾಳಿ ನಡೆಸಿತ್ತು.

ಇದನ್ನೂ ಓದಿ : Set fire and murdered: ಮಾದಕ ವಸ್ತು ಸೇವನೆ ಪ್ರಕರಣ: ಮಹಿಳೆಗೆ ಬೆಂಕಿ ಹಚ್ಚಿ ಕೊಲೆ: ಆರೋಪಿ ಅರೆಸ್ಟ್‌

ಇದನ್ನೂ ಓದಿ : Truck caught fire: ಟ್ರಾನ್ಸ್‌ಫಾರ್ಮರ್ ಆಯಿಲ್ ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ; ಸಂಚಾರ ಅಸ್ತವ್ಯಸ್ತ

NIA raid: NIA raids 70 locations in 8 states: Searches at places linked to Bishnoi gang

Comments are closed.