KL Rahul Out : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 3ನೇ ಪಂದ್ಯದಲ್ಲಿ ಪ್ಲೇಯಿಂಗ್ XIನಿಂದ ಕೆ.ಎಲ್ ರಾಹುಲ್ ಔಟ್

ಇಂದೋರ್: ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia Border-Gavaskar test series) 3ನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಸ್ಥಾನ (KL Rahul Out) ಕಳೆದುಕೊಳ್ಳಲಿದ್ದಾರೆ.ಭಾರತ ಮತ್ತು ಆಸೀಸ್ ನಡುವಿನ 3ನೇ ಟೆಸ್ಟ್ ಪಂದ್ಯ ಮಾರ್ಚ್ 1ರಂದು ಮಧ್ಯಪ್ರದೇಶದ ಇಂದೋರ್’ನಲ್ಲಿರುವ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ. ನಾಗ್ಪುರ ಮತ್ತು ದೆಹಲಿಯಲ್ಲಿ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಸುಲಭವಾಗಿ ಗೆದ್ದಿರುವ ಟೀಮ್ ಇಂಡಿಯಾ, ಈಗಾಗಲೇ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆಯಲ್ಲಿದೆ.

ಮೊದಲೆರಡೂ ಟೆಸ್ಟ್ ಪಂದ್ಯಗಳಲ್ಲಿ ವಿಫಲರಾಗಿರುವ ರಾಹುಲ್ ಆಡಿದ 3 ಇನ್ನಿಂಗ್ಸ್’ಗಳಿಂದ ಕೇವಲ 38 ರನ್ ಗಳಿಸಿದ್ದಾರೆ. ವೈಫಲ್ಯದ ನಡುವೆಯೂ ರಾಹುಲ್ ಅವರ ಸಾಮರ್ಥ್ಯದ ಮೇಲೆ ಟೀಮ್ ಮ್ಯಾನೇಜ್ಮೆಂಟ್ ನಂಬಿಕೆಯಿಟ್ಟಿದ್ದು ಅಂತಿಮ ಎರಡು ಟೆಸ್ಟ್ ಪಂದ್ಯಗಳಿಗೆ ಕನ್ನಡಿಗನನ್ನು ತಂಡದಲ್ಲಿ ಉಳಿಸಿಕೊಂಡಿದೆ. ಆದರೆ ಉಪನಾಯಕನ ಪಟ್ಟದಿಂದ ರಾಹುಲ್ ಅವರನ್ನು ಕೆಳಗಿಳಿಸಲಾಗಿದೆ. ಇದು 3ನೇ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಆಡುವ ಬಳಗದಲ್ಲಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬುದರ ಸ್ಪಷ್ಟ ಸೂಚನೆ. ಕಳೆದ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ರಾಹುಲ್ ವೈಫಲ್ಯ ಎದುರಿಸಿದ್ದರು.

ಕಳೆದ 10 ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ರಾಹುಲ್ ಗಳಿಸಿರುವ ರನ್:
8, 12, 10, 22, 23, 10, 02, 20, 17, 01

ರಾಹುಲ್ ಪ್ಲೇಯಿಂಗ್ XIನಲ್ಲಿ ಸ್ಥಾನ ಕಳೆದುಕೊಂಡರೆ, ಯುವ ಬಲಗೈ ಓಪನರ್ ಶುಭಮನ್ ಗಿಲ್, ನಾಯಕ ರೋಹಿತ್ ಶರ್ಮಾ ಜೊತೆ ಟೀಮ್ ಇಂಡಿಯಾದ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಇದನ್ನೂ ಓದಿ : Prasidh Krishna : ಬೆನ್ನು ನೋವಿಗೆ ಆಪರೇಷನ್ ಸಕ್ಸಸ್, ಐಪಿಎಲ್’ನಿಂದ ಕನ್ನಡಿಗ ಔಟ್

ಇದನ್ನೂ ಓದಿ : India Beat Ireland : ಐಸಿಸಿ ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್’ಗೆ ಲಗ್ಗೆ ಇಟ್ಟ ಟೀಮ್ ಇಂಡಿಯಾ

ಇದನ್ನೂ ಓದಿ : KL Rahul Venkatesh Prasad : ಕೆ.ಎಲ್ ರಾಹುಲ್ ವಿರುದ್ಧ ವೆಂಕಟೇಶ್ ಪ್ರಸಾದ್ ಟೀಕೆಯ ಹಿಂದಿದೆ ಹಿಡನ್ ಅಜೆಂಡಾ, ಕನ್ನಡಿಗನ ಮೇಲೆ ವೆಂಕಿಗೆ ಯಾಕಿಷ್ಟು ದ್ವೇಷ ಗೊತ್ತಾ?

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಟೀಮ್ ಇಂಡಿಯಾ:
1.ರೋಹಿತ್ ಶರ್ಮಾ (ನಾಯಕ), 2.ಕೆ.ಎಲ್ ರಾಹುಲ್, 3. ಶುಭಮನ್ ಗಿಲ್, 4.ಚೇತೇಶ್ವರ್ ಪೂಜಾರ, 5.ವಿರಾಟ್ ಕೊಹ್ಲಿ, 6.ಶ್ರೇಯಸ್ ಅಯ್ಯರ್, 7.ಸೂರ್ಯಕುಮಾರ್ ಯಾದವ್, 8.ಕೆ.ಎಸ್ ಭರತ್ (ವಿಕೆಟ್ ಕೀಪರ್), 9.ಇಶಾನ್ ಕಿಶನ್ (ವಿಕೆಟ್ ಕೀಪರ್), 10.ರವೀಂದ್ರ ಜಡೇಜ, 11.ರವಿಚಂದ್ರನ್ ಅಶ್ವಿನ್, 12.ಅಕ್ಷರ್ ಪಟೇಲ್, 13.ಕುಲ್ದೀಪ್ ಯಾದವ್, 14.ಮೊಹಮ್ಮದ್ ಶಮಿ, 15.ಮೊಹಮ್ಮದ್ ಸಿರಾಜ್, 16.ಉಮೇಶ್ ಯಾದವ್, 17.ಜೈದೇವ್ ಉನಾದ್ಕಟ್.

KL Rahul out of playing XI for 3rd match of Border-Gavaskar Test series

Comments are closed.