ಕೊರೊನಾದಿಂದ ಅನಾಥರಾದ ಮಕ್ಕಳ ಹೆಸರಲ್ಲಿ 10 ಲಕ್ಷ FD : ಮಹತ್ವದ ಆದೇಶ ಘೋಷಿಸಿದ ಸಿಎಂ

ಆಂಧ್ರಪ್ರದೇಶ : ಕೊರೊನಾ ವೈರಸ್ ಸೋಂಕು ಅದೆಷ್ಟೋ ಜನರ ಬದುಕಿಗೆ ಕೊಳ್ಳಿಯಿಟ್ಟಿದೆ. ಅಲ್ಲದೇ ನೂರಾರು ಮಕ್ಕಳು ಅನಾಥ ರಾಗಿದ್ದಾರೆ. ಹೀಗೆ ಅನಾಥರಾದ ಮಕ್ಕಳ ನೆರವಿನ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಸರಕಾರ ಮಹತ್ವದ ಯೋಜನೆಯೊಂದನ್ನು ಘೋಷಿಸಿದೆ.

ಕೊರೊನಾ ವೈರಸ್ ನೋಂಕಿನಿಂದಾಗಿ ತಂದೆ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥವಾದ ರಾಜ್ಯದ ಪ್ರತಿಯೊಬ್ಬ ಮಗುವಿನ ಹೆಸರಲ್ಲೂ ಹತ್ತು ಲಕ್ಷ ರೂಪಾಯಿ ಠೇವಣಿ ಇಡುವಂತೆ ಸಿಎಂ ಜಗನ್ ಮೋಹನ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಕೋವಿಡ್​ನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಹೆಸರಿಗೆ ಬ್ಯಾಂಕಿ ನಲ್ಲಿ ಸರ್ಕಾರ 10 ಲಕ್ಷ ರೂ. ಮೊತ್ತ ಠೇವಣಿ ಇಡಲಿದೆ. ಮಕ್ಕಳಿಗೆ 25 ವರ್ಷ ತುಂಬುವ ವರೆಗೂ 10 ಲಕ್ಷ ಹಣ ಹಾಗೇ ಬ್ಯಾಂಕ್‌ನಲ್ಲಿಯೇ ಇರಲಿದೆ. ಆದರೆ ಡೆಪಾಸಿಟ್ ಇಟ್ಟಿರುವ ಹಣದಲ್ಲಿ ಪ್ರತಿ ತಿಂಗಳು ಬಡ್ಡಿಯ ಮೊತ್ತವನ್ನು ಪಡೆಯಬಹುದಾಗಿದೆ. ಮಕ್ಕಳನ್ನು ಪಾಲನೆ ಮಾಡುವವರುಗೆ ಹೆಚ್ಚಿನ ಬಡ್ಡಿ ಸಿಗುವಂತಹ ವ್ಯವಸ್ಥೆ ಆಗಬೇಕು ಮತ್ತು ಆ ಕಾರ್ಯಕ್ಕೆ ಯೋಜನೆ ರೂಪಿಸಿ ಬ್ಯಾಂಕ್​ ಜತೆ ಮಾತುಕತೆ ನಡೆಸುವಂತೆ ಅಧಿಕಾರಿಗಳಿಗೆ ಆಂಧ್ರಪ್ರದೇಶ ಮುಖ್ಯ ಮಂತ್ರಿ ವೈ.ಎಸ್​. ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.

ಕೊರೊನಾ ಲಾಕ್ ಡೌನ್ ಘೋಷಣೆಯಾಗುತ್ತಲೇ ಹಲವು ಜನರ ಯೋಜನೆಗಳನ್ನು ಘೋಷಿಸಿರುವ ಆಂಧ್ರಪ್ರದೇಶ ಸರಕಾರ ಇದೀಗ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಹತ್ವದ ಯೋಜನೆ ರೂಪಿಸಿದೆ. ಆಂಧ್ರಪ್ರದೇಶ ಸರಕಾರ ಕೈಗೊಂಡಿರುವ ಈ ಯೋಜನೆ ಕೊರೋನಾ ಸಂಕಷ್ಟಕ್ಕೆ ನಲುಗಿರುವ ಅದೆಷ್ಟೋ ಮಕ್ಕಳ ಬದುಕಿಗೆ ಈ ಯೋಜನೆ ದಾರಿದೀಪವಾಗಲಿದೆ. ಜಗಮೋಹನ್ ರೆಡ್ಡಿ ಅವರ ಯೋಜನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ

https://kannada.newsnext.live/sushil-kumar-sagar-rana-murder-case-no-pre-arrest-bail-for-wrestler-sushil-kumar-in-murder-case/amp/

Comments are closed.