OTP based digital lock: ರೈಲಿನಲ್ಲಿ ಪ್ರಯಾಣಿಕರ ಪಾರ್ಸೆಲ್, ಸರಕುಗಳು ಸಂಪೂರ್ಣ ಸುರಕ್ಷಿತ: ಒಟಿಪಿ ಆಧಾರಿತ ಡಿಜಿಟಲ್ ಲಾಕ್ ವ್ಯವಸ್ಥೆ ಜಾರಿ

ನವದೆಹಲಿ: (OTP based digital lock) ರೈಲಿನಲ್ಲಿ ಪಾರ್ಸೆಲ್, ಸರಕುಗಳನ್ನು ಸಾಗಣೆ ಮಾಡುವ ಸಂದರ್ಭದಲ್ಲಿ ಕಳ್ಳತನವಾಗುವ ಬಗ್ಗೆ ಗಮನದಲ್ಲಿರಿಸಿಕೊಂಡ ಭಾರತೀಯ ರೈಲ್ವೇ ಇಲಾಖೆ ರೈಲುಗಳಲ್ಲಿ ಒಟಿಪಿ ಆಧಾರಿತ ಡಿಜಿಟಲ್ ಲಾಕ್ ವ್ಯವಸ್ಥೆಯನ್ನು ಪರಿಚಯಿಸಲಿದೆ. ಈ ವ್ಯವಸ್ಥೆಯು ಸಂಪೂರ್ಣವಾಗಿ ಸುರಕ್ಷಿತ ಒಟಿಪಿಯನ್ನು ಆಧರಿಸಿರುತ್ತದೆ. ಇದನ್ನು ರೈಲು ವಿಭಾಗದ ಬಾಗಿಲುಗಳನ್ನು ತೆರೆಯಲು ಮತ್ತು ಮುಚ್ಚಲು ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲಿನಲ್ಲಿ ನಿಮ್ಮ ಸರಕುಗಳು ಮತ್ತು ಪಾರ್ಸೆಲ್‌ಗಳನ್ನು ಈಗ ಉತ್ತಮ ರೀತಿಯಲ್ಲಿ ರಕ್ಷಿಸಲಾಗುತ್ತದೆ. ಈ ವ್ಯವಸ್ಥೆಯನ್ನು ಸಾಮಾನ್ಯವಾಗಿ ಟ್ರಕ್‌ಗಳಲ್ಲಿ ಬಳಸಲಾಗುತ್ತಿದ್ದು, ಅಲ್ಲಿ ಸ್ಮಾರ್ಟ್ ಲಾಕ್ ಅನ್ನು ಒದಗಿಸಲಾಗುತ್ತದೆ. ಇದಕ್ಕೆ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ಅಳವಡಿಸಲಾಗಿದೆ. ಮತ್ತು ಇದರಿಂದಾಗಿ ರೈಲ್ವೆಯಲ್ಲಿ ಸರಕು ಸಾಗಣೆಯ ಸಮಯದಲ್ಲಿ ಕಳ್ಳತನದ ಸಾಧ್ಯತೆ ಇರುವುದಿಲ್ಲ.

ಒಟಿಪಿ ಆಧಾರಿತ ಡಿಜಿಟಲ್ ಲಾಕ್ ವ್ಯವಸ್ಥೆ ಸಹಾಯದಿಂದ, ವಾಹನದ ಉಪಸ್ಥಿತಿಯ ಸ್ಥಳವನ್ನು ತಿಳಿಯಲಾಗುತ್ತದೆ ಮತ್ತು ಸರಕುಗಳ ಕಳ್ಳತನದ ಸಾಧ್ಯತೆ ಕಡಿಮೆಯಾಗುತ್ತದೆ. ಈ ವ್ಯವಸ್ಥೆಯು ಸಂಪೂರ್ಣವಾಗಿ ಸುರಕ್ಷಿತ ಒಟಿಪಿಯನ್ನು ಆಧರಿಸಿರುತ್ತದೆ, ಇದನ್ನು ರೈಲು ವಿಭಾಗದ ಬಾಗಿಲುಗಳನ್ನು ತೆರೆಯಲು ಮತ್ತು ಮುಚ್ಚಲು ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕ್ರಮವು ಸರಕು ರೈಲುಗಳ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸುತ್ತದೆ, ಕಳ್ಳತನವನ್ನು ತಡೆಯುತ್ತದೆ ಮತ್ತು ಸರಕು ಆದಾಯವನ್ನು ಹೆಚ್ಚಿಸುತ್ತದೆ.

ಪ್ರಯಾಣದ ಸಮಯದಲ್ಲಿ ಸರಕುಗಳಿಗೆ ಪ್ರವೇಶ ಸಾಧ್ಯವಾಗುವುದಿಲ್ಲ. ಸರಕುಗಳ ವಿಭಾಗವನ್ನು ಒಟಿಪಿ ಮೂಲಕ ತೆರೆಯಲಾಗುತ್ತದೆ ಮತ್ತು ಇನ್ನೊಂದು ಒಟಿಪಿ ಮೂಲಕ ಮುಚ್ಚಲಾಗುತ್ತದೆ. ನಂತರ ಕಂಪಾರ್ಟ್‌ಮೆಂಟ್ ಅನ್ನು ಸೀಲ್ ಮಾಡಲಾಗುತ್ತದೆ. ಒಂದೊಮ್ಮೆ ಬಾಗಿಲು ಒಡೆದರೆ, ಅಥವಾ ಯಾವುದೇ ಇಂತಹ ಘಟನೆಗಳು ನಡೆದರೆ ಅಧಿಕಾರಿಗಳ ಮೊಬೈಲ್​ಗೆ ಸಂದೇಶ ರವಾನೆಯಾಗುತ್ತದೆ. ಪ್ರತಿ ನಿಲ್ದಾಣದಲ್ಲಿ ರೈಲ್ವೆ ಉದ್ಯೋಗಿಯು ಸರಕುಗಳನ್ನು ಲೋಡ್ ಮಾಡುವ ಅಥವಾ ಇಳಿಸುವ ಪ್ರಕ್ರಿಯೆಯು ಪೂರ್ಣಗೊಂಡಿದೆ ಎಂಬುದಾಗಿ ಒಟಿಪಿ ಸ್ವೀಕರಿಸುತ್ತಾರೆ. ಹೀಗಾಗಿ ಈ ವ್ಯವಸ್ಥೆಯು ಸುಲಭ ಮತ್ತು ಸರಳವಾಗಿದೆ.

ಹೆಚ್ಚು ಕಡಿಮೆ ಮೂರು ರೈಲ್ವೆ ವಲಯಗಳು ಕೈಗೆಟಕುವ ದರದಲ್ಲಿ ಈ ಸೇವೆಯನ್ನು ಒದಗಿಸುವ ಕಂಪನಿಗಳನ್ನು ಗುರುತಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ಲಾಕ್ ಸಿಸ್ಟಮ್ ಅನ್ನು ಒಟಿಪಿ ಮೂಲಕ ತೆರೆಯಲಾಗುತ್ತದೆ ಮತ್ತು ಮುಚ್ಚಲಾಗುತ್ತದೆ, ಇದನ್ನು ಪ್ರತಿ ನಿಲ್ದಾಣದಲ್ಲಿ ಲೋಡ್ ಅಥವಾ ಇಳಿಸುವ ಅಗತ್ಯವಿರುವ ರೈಲ್ವೆ ಸಿಬ್ಬಂದಿಗೆ ಕಳುಹಿಸಲಾಗುತ್ತದೆ. ಇದು ಯಾವುದೇ ಅಡಚಣೆಯಿಲ್ಲದೆ ರೈಲು ಸುಗಮವಾಗಿ ಚಲಿಸುವಂತೆ ಮಾಡುತ್ತದೆ.

ಇದನ್ನೂ ಓದಿ : Permission for Hijab allowance: ಪಿಯುಸಿ ಪರೀಕ್ಷೆ ವೇಳೆ ಹಿಜಾಬ್‌ಗೆ ಅನುಮತಿ ಕೋರಿ ಅರ್ಜಿ: ವಿಚಾರಣೆಗೆ ಸುಪ್ರೀಂ ಒಪ್ಪಿಗೆ

OTP based digital lock: Passenger parcel, goods are fully secured in train: Implementation of OTP based digital lock system

Comments are closed.