Kerala Corona : ಕೇರಳದಲ್ಲಿ ಹೆಚ್ಚುತ್ತಿದೆ ಹೆಮ್ಮಾರಿ : ಲಸಿಕೆ ಪಡೆದ 40 ಸಾವಿರ ಮಂದಿಗೆ ಸೋಂಕು

ತಿರುವನಂತರಪುರ : ಕೇರಳದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿದೆ. ಕೊರೊನಾ ಮೂರನೇ ಅಲೆಯ ಹೊಡೆತಕ್ಕೆ ತತ್ತರಿಸಿ ಹೋಗಿದ್ದು, ನಿತ್ಯವೂ 20 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿದೆ. ಈ ನಡುವಲ್ಲೇ ಕೊರೊನಾ ಲಸಿಕೆ ಪಡೆದ 40 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಕೊರೊನಾ ವೈರಸ್‌ ಸೋಂಕಿನ ನಿಯಂತ್ರಣಕ್ಕೆ ಲಸಿಕೆಯನ್ನು ನೀಡುವ ಕಾರ್ಯ ನಡೆಸಲಾಗುತ್ತಿದೆ. ಆದರೆ ಕೇರಳದಲ್ಲಿ ಕೊರೊನಾ ಲಸಿಕೆ ಪಡೆದವರಲ್ಲಿಯೇ ಕೊರೊನಾ ಸೋಂಕು ಪತ್ತೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ಪ್ರಮುಖವಾಗಿ ವ್ಯಾಕ್ಸಿನ್‌ ಪಡೆದುಕೊಂಡವರು ಮಾಸ್ಕ್‌, ಸಾಮಾಜಿಕ ಅಂತರ ಪಾಲನೆ ಮಾಡದಿರುವುದೇ ಸೋಂಕು ಕಾಣಿಸಿಕೊಳ್ಳಲು ಕಾರಣವಾಗಿದೆ ಅನ್ನೋದು ತಿಳಿದುಬಂದಿದೆ. ಆದರೆ ವ್ಯಾಕ್ಸಿನ್‌ ಪಡೆದುಕೊಂಡವರಿಗೆ ಕೊರೊನಾ ಅಷ್ಟೋದು ಮಾರಕವಲ್ಲ ಅನ್ನೋದನ್ನು ಆರೋಗ್ಯ ಇಲಾಖೆ ಹೇಳಿದೆ.

ಕೇರಳದ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಲಸಿಕೆ ಪಡೆದುಕೊಂಡಿರುವ 20 ಸಾವಿರ ಜನರಲ್ಲಿ ಕೋವಿಡ್​ ಸೋಂಕು ಕಾಣಿಸಿಕೊಂಡಿದೆ. ಕೇರಳದಲ್ಲಿ ನಿತ್ಯ 20 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಕೊರೊನಾ ಲಸಿಕೆ ಪಡೆದವರಲ್ಲಿಯೇ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆರೋಗ್ಯ ಇಲಾಖೆ ಹಾಗೂ ಸರಕಾರಕ್ಕೆ ತಲೆನೋವನ್ನು ತರಿಸಿದೆ. ಹೀಗಾಗಿ ವ್ಯಾಕ್ಸಿನ್‌ ಪಡೆದವರು ಕೂಡ ಕೊರೊನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆಯೂ ಸೂಚನೆಯನ್ನು ನೀಡಿದೆ.

ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೊರೊನಾ ಲಸಿಕೆ ಪಡೆದುಕೊಂಡವರಲ್ಲಿಯೇ ಸೋಂಕು ಕಾಣಿಸಿಕೊಂಡಿದೆ. ಇದೀಗ ಕೇರಳದಲ್ಲಿಯೂ ಕೂಡ ಅದೇ ಪರಿಸ್ಥಿತಿ ನಿರ್ಮಾಣ ವಾಗಿದೆ. ಇನ್ನು ಡೆಲ್ಟಾ ಫ್ಲಸ್‌ ವೈರಾಣು ಅತ್ಯಂತ ಪ್ರಭಾವಶಾಲಿಯಾಗಿದ್ದು, ಕೊರೊನಾ ಲಸಿಕೆ ಪಡೆದವರಿಗೂ ಅಪಾಯವನ್ನು ತಂದೊಡ್ಡುವ ಸಾಧ್ಯತೆಯಿದೆ ಅನ್ನೂವ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

( Over 40 thousand people infected with coronavirus infection in Kerala)

Comments are closed.