Padma Awards 2022 List: ಸಿಡಿಎಸ್ ಬಿಪಿನ್ ರಾವತ್, ಕರ್ನಾಟಕದ ಕವಿ ಸಿದ್ದಲಿಂಗಯ್ಯ, ಅಮೈ ಮಹಾಲಿಂಗ ನಾಯ್ಕ ಅವರಿಗೆ ಪದ್ಮ ಗೌರವ

ನಾಳೆಯೇ ದೇಶಕ್ಕೆ 73ನೇ ಗಣರಾಜ್ಯೋತ್ಸವ. ಗಣರಾಜ್ಯ ಉದಯವಾದ ನೆನಪಿನ ಆಚರಣೆಯ ಹಿಂದಿನ ದಿನ ದೇಶದ ಪ್ರತಿಷ್ಠಿತ ಮತ್ತು ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಯನ್ನು (Padma Awards 2022) ಘೋಷಿಸಲಾಗಿದೆ. ಇತ್ತೀಚಿಗೆ ಘಟಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸಶಸ್ತ್ರ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (CDS Bipin Rawat) ಅವರಿಗೆ ಕೇಂದ್ರ ಸರ್ಕಾರವು ಮರಣೋತ್ತರ ಪದ್ಮವಿಭೂಷಣ ಪುರಸ್ಕಾರ (Padma Awards 2022 List) ಘೋಷಿಸಿದೆ. ಜೊತೆಗೆ ಕರ್ನಾಟಕದ ಕವಿ ದಿವಂಗತ ಸಿದ್ದಲಿಂಗಯ್ಯ (Poet Siddalingaiah) ಅವರಿಗೆ ಪದ್ಮಶ್ರೀ ಪುರಸ್ಕಾರ ಲಭಿಸಿದೆ.

ಕರ್ನಾಟಕದಿಂದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸುಬ್ಬಣ್ಣ ಅಯ್ಯಪ್ಪನ್, ಕಲಾ ಕ್ಷೇತ್ರದಲ್ಲಿ ಎಚ್.ಆರ್.ಕೇಶವಮೂರ್ತಿ ತಳಮಟ್ಟದ ಅನ್ವೇಷಕರಾದ ಅಬ್ದುಲ್ ಖಾದರ್ ನಾದಕಟ್ಟಿನ್, ಕೃಷಿ ಕ್ಷೇತ್ರದಲ್ಲಿ ಅಮೈ ಮಹಾಲಿಂಗ ನಾಯ್ಕ ಮತ್ತು ಸಾಹಿತ್ಯ ಮತ್ತು ಶಿಕ್ಷಣದಲ್ಲಿ ದಿವಂಗತ ಸಿದ್ದಲಿಂಗಯ್ಯ ಅವರಿಗೆ ಪುರಸ್ಕಾರ ಘೋಷಿಸಲಾಗಿದೆ.

ಈ ವರ್ಷ ಒಂದು ಜೋಡಿಗೆ ಪ್ರಶಸ್ತಿ ಸೇರಿದಂತೆ 128 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲು ರಾಷ್ಟ್ರಪತಿಗಳು ಅನುಮೋದಿನೆ ನೀಡಿದ್ದಾರೆ. ಈ ಬಾರಿ 4 ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 107 ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು ಪ್ರಶಸ್ತಿ ಪುರಸ್ಕೃತರಲ್ಲಿ 34 ಮಹಿಳೆಯರು ಮತ್ತು 10 ವಿದೇಶಿಯರು ಮತ್ತು 13 ಮರಣೋತ್ತರ ಪ್ರಶಸ್ತಿ ಪುರಸ್ಕೃತರಿದ್ದಾರೆ.

ಅಲ್ಲದೇ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಪದ್ಬಭೂಷಣ ಪುರಸ್ಕಾರ ಘೋಷಿಸಲಾಗಿದೆ. ಜೊತೆಗೆ ಗಾಯಕ ಸೋನು ನಿಗಮ್ ಅವರಿಗೆ ಪದ್ಮಶ್ರೀ ಪುರಸ್ಕಾರ, ಗೂಗಲ್ ಕಂಪನಿಯ ಸಿಇಒ ಭಾರತೀಯ ಮೂಲದ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಸತ್ಯ ನಾದೆಳ್ಳ ಸೇರಿದಂತೆ 128 ಸಾಧಕರಿಗೆ ಕೇಂದ್ರ ಸರ್ಕಾರವು ಪದ್ಮ ಪುರಸ್ಕಾರಗಳನ್ನು ನೀಡಿ ಗೌರವಿಸುವುದಾಗಿ ಘೋಷಿಸಿದೆ.

ಪದ್ಮ ಪ್ರಶಸ್ತಿ ಘೋಷಣೆಗಾಗಿ ಭಾಷಣ ಮಾಡಿ ಮಾತನಾಡಿದ ದೇಶದ ರಾಷ್ಟ್ರಪತಿ ರಾಮನಾಥ ಕೋವಿಂದ್, ಮೊದಲು ಹಿಂದಿ, ನಂತರ ಇಂಗ್ಲಿಷ್​ ಭಾಷೆಯಲ್ಲಿ ರಾಷ್ಟ್ರಪತಿ ಭಾಷಣ ಮಾಡಿದರು. ‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನಗೈದ ಮಹೋನ್ನತ ನಾಯಕರನ್ನು ಸ್ಮರಿಸಿಕೊಳ್ಳಬೇಕು. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ರಚನೆಯ ಮೂಲಕ ನಮ್ಮ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಜನರ ತ್ಯಾಗ ಮತ್ತು ಬಲಿದಾನಗಳಿಂದ ದೇಶದ ಜನರಾದ ನಮಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ಸ್ಮರಣೆ ಮಾಡಿದರು.

ಇದನ್ನೂ ಓದಿ: ಅಪ್ಪುಗೆ ಪದ್ಮಶ್ರೀ ಅಭಿಯಾನ : ಸಹೋದರ ಶಿವಣ್ಣ ಹೇಳಿದ್ದೇನು ಗೊತ್ತಾ?

(Padma Awards 2022 Full List CDS Bipin Rawat Poet Siddalingaiah and many more)

Comments are closed.