Pay CM campaign: ಕರಾವಳಿ ಭಾಗದಲ್ಲಿ ಜೋರಾಗಿದೆ ಪೇ ಸಿಎಂ ಅಭಿಯಾನ

ಮಂಗಳೂರು : Pay CM campaign : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆರಂಭವಾಗಿರುವ ಪೇ ಸಿಎಂ ಅಭಿಯಾನ ಇದೀಗ ಜಿಲ್ಲೆಗಳಿಗೂ ಕಾಲಿಟ್ಟಿದೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿಯೂ ಪೇ ಸಿಎಂ ಎಂಬ ಪೋಸ್ಟರ್ ಅಂಟಿಸಲಾಗಿದೆ. ಬೆಳಕು ಹರಿಯುವ ಮುನ್ನವೇ ಕೈ ಕಾರ್ಯಕರ್ತರು ಎಂದು ಹೇಳಲಾದ ವ್ಯಕ್ತಿಗಳು ಈ ಪೋಸ್ಟರ್ ಅಂಟಿಸಿದ್ದಾರೆ. ಬೆಳ್ತಂಗಡಿಯ ಬಸ್ ಸ್ಟ್ಯಾಂಡ್, ಬಸ್, ಬಸ್ ಸ್ಟ್ಯಾಂಡ್ ಆವರಣದಲ್ಲಿರುವ ಅಂಗಡಿಗಳ ಗೋಡೆಗೆ ಈ ಸ್ಟಿಕ್ಕರ್ ಅಂಟಿಸಲಾಗಿದೆ.

ಇನ್ನು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಪೋಟೋ ಅಳವಡಿಸಿ ಪೇ ಎಂಎಲ್ಎ ಪೋಸ್ಟರ್‌ನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಕಾಂಗ್ರೆಸ್‌ನ ಈ ಅಭಿಯಾನದ ಬಗ್ಗೆ ಬಿ.ಜೆ.ಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೋಸ್ಟರ್ ತೆರವುಗೊಳಿಸುವ ಕಾರ್ಯ ನಡೆದಿದೆ.

ಇನ್ನು ಕಾಂಗ್ರೆಸ್ ಹಮ್ಮಿಕೊಂಡಿರುವ ಪೇ ಸಿ.ಎಂ‌ ಅಭಿಯಾನಕ್ಕೆ ಬ್ರೇಕ್ ಹಾಕುವುದುಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅನುಮತಿ ಪಡೆಯದೆ ಪೋಸ್ಟರ್ ಅಂಟಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಈಗಾಗಲೇ ಬೆಂಗಳೂರಿನಲ್ಲಿ ಪೇ ಸಿಎಂ ಪೋಸ್ಟರ್ ಅಂಟಿಸಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ರೀತಿಯ ಪೋಸ್ಟರ್ ಅಂಟಿಸುತ್ತಿರುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿ.ಜೆ.ಪಿ ಸರ್ಕಾರ 40% ಕಮೀಷನ್ ಪಡೆದು ಆಡಳಿತ ನಡೆಸುತ್ತಿದೆ ಎಂಬುದು ಕಾಂಗ್ರೆಸ್ ನವರ ವಾದ. ಹೀಗಾಗಿ ಜನರೇ ಸಿ.ಎಂ ಗೆ ಹಣ ಜಮಾವಣೆ ಮಾಡುವಂತೆ ಕುಹಕವಾಡುವ ರೀತಿ ಕಾಂಗ್ರೆಸ್ ಈ ಪೇ ಸಿಎಂ‌ ಅಭಿಯಾನ ನಡೆಸುತ್ತಿದೆ.‌ ಸ್ವತಃ ಸಿದ್ದರಾಮಯ್ಯನವರೇ ಈ ಪೇ ಸಿಎಂ ಅಭಿಯಾನದಲ್ಲಿ ಭಾಗವಹಿಸಿದ್ದು ನಿನ್ನೆ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.

ಇನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಮೇಲೂ ಕಾಂಗ್ರೆಸ್ ಈ ಹಿಂದೆಯೇ 40% ಕಮೀಷನ್ ಆರೋಪವನ್ನು ಮಾಡಿತ್ತು.‌ ಶಾಸಕರ ಕಚೇರಿಯಿಂದ ಗೋಣಿ ಚೀಲದಲ್ಲೇ ಹಣ ಕೊಂಡೊಯ್ಯಲಾಗುತ್ತೆ ಎಂಬ ಬಗ್ಗೆ ಆಡಿಯೋ ಸಹ ವೈರಲ್ ಆಗಿತ್ತು. ಸದ್ಯ ಇದೀಗ ಪೇ ಸಿಎಂ‌ ಅಭಿಯಾನ ನಡೆಯುತ್ತಿದ್ದಂತೆ ಪೇ ಎಂಎಲ್ಎ ಅಭಿಯಾನವನ್ನು ಕಾಂಗ್ರೇಸ್ ಬೆಳ್ತಂಗಡಿಯಲ್ಲಿ ಶುರು ಮಾಡಿದೆ. ಒಟ್ಟಿನಲ್ಲಿ ಈ ಪೇ ಸಿಎಂ ಅಭಿಯಾನ ಮುಂದೆ ಯಾವ ಸ್ವರೂಪ ಪಡೆಯಲಿದೆ ಎಂದು ಕಾದು ನೋಡಬೇಕಾಗಿದೆ.

ಇದನ್ನು ಓದಿ : tourist vehicle rolls off :ಕಣಿವೆಗೆ ಉರುಳಿದ ಪ್ರವಾಸಿ ಬಸ್​ : ಏಳು ಮಂದಿ ದುರ್ಮರಣ, 10 ಮಂದಿ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Ajinkya Rahane: ಅಶಿಸ್ತು ತೋರಿದ ಯಶಸ್ವಿ ಜೈಸ್ವಾಲ್‌ನನ್ನು ಮೈದಾನದಿಂದ ಹೊರಗಟ್ಟಿದ ಅಜಿಂಕ್ಯ ರಹಾನೆ

Pay CM campaign has also started in Mangalore

Comments are closed.