Pm Modi Birthday 2022 :ಪ್ರಧಾನಿ ಮೋದಿ ಜನ್ಮದಿನದಂದು ಜನಿಸಿದ ಶಿಶುವಿಗೆ ಸಿಗಲಿದೆ ಉಚಿತ ಚಿನ್ನದುಂಗುರ

ತಮಿಳುನಾಡು : Pm Modi Birthday 2022 : ನಾಳೆ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ. ಹೀಗಾಗಿ ಪ್ರಧಾನಿ ಮೋದಿ ಅಭಿಮಾನಿಗಳು ನಾಳೆ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಚರಿಸಲು ನಿರ್ಧರಿಸಿದ್ದಾರೆ.ನಾಳೆ ದೇಶದ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಘಟಕವು ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಒಂದಿಲ್ಲೊಂದು ಸಾಮಾಜಿಕ ಕಾರ್ಯಕ್ರಮವನ್ನು ನಡೆಸಲಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಾಳೆ ಬಿಜೆಪಿ ವತಿಯಿಂದ ಉಚಿತ ರಕ್ತದಾನ ಶಿಬಿರ ನಡೆಯಲಿದೆ. ಅಲ್ಲದೇ ಬೈಕ್​ ರ್ಯಾಲಿ ಕೂಡ ನಡೆಯಲಿದ್ದು ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಚಾಲನೆ ನೀಡಲಿದ್ದಾರೆ.

ಈ ನಡುವೆ ತಮಿಳುನಾಡಿನಲ್ಲಿ ಬಿಜೆಪಿ ಘಟಕವು ಪ್ರಧಾನಿ ಜನ್ಮದಿನವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದೆ. ಹೀಗಾಗಿ ಪ್ರಧಾನಿ ಜನ್ಮದಿನದಂದು ಅಂದರೆ ನಾಳೆ ಜನಿಸಿದ ಶಿಶುಗಳಿಗೆ ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡಲು ತಮಿಳುನಾಡು ಬಿಜೆಪಿ ಘಟಕವು ನಿರ್ಧರಿಸಿದೆ. ಇದರ ಜೊತೆಯಲ್ಲಿ ಮೀನುಗಳನ್ನು ಉಚಿತವಾಗಿ ಹಂಚಲು ಕೂಡ ತೀರ್ಮಾನಿಸಲಾಗಿದೆ. ಇದಕ್ಕಾಗಿ ತಮಿಳುನಾಡು ಬಿಜೆಪಿ ಘಟಕವು ಬರೋಬ್ಬರಿ 720 ಕಿಲೋ ಗ್ರಾಂನಷ್ಟು ಮೀನುಗಳನ್ನು ಖರೀದಿ ಮಾಡಿದೆ.

ನವಜಾತ ಶಿಶುಗಳಿಗೆ ನೀಡಲಾಗುವ ಉಂಗುರಗಳು 2 ಗ್ರಾಂ ತೂಕವನ್ನು ಹೊಂದಿವೆ. ಅಲ್ಲದೇ ಇದು ಕೇಂದ್ರ ಸರ್ಕಾರದ ಯೋಜನೆಯಲ್ಲ ಎಂಬುದನ್ನು ತಮಿಳುನಾಡು ಬಿಜೆಪಿ ಘಟಕವು ಸ್ಪಷ್ಟಪಡಿಸಿದೆ. ಕೇಂದ್ರ ಸಚಿವ ಎಲ್​,ಮುರುಗನ್​​ ತಮಿಳುನಾಡಿನ ಬಿಜೆಪಿ ಸಂಸದರಾಗಿದ್ದಾರೆ.ಇವರ ನೇತೃತ್ವದಲ್ಲಿ ತಮಿಳುನಾಡಿನ ಬಿಜೆಪಿ ಘಟಕದ ವತಿಯಿಂದ ಈ ಕಾರ್ಯಕ್ರಮ ನಡೆಸಿಕೊಡಲಿದೆ. ಚೆನ್ನೈನಲ್ಲಿರುವ ಆರ್​ಎಸ್​ಆರ್​ಎಂ ಆಸ್ಪತ್ರೆಯನ್ನು ಈ ಕಾರ್ಯಕ್ರಮದ ಅನುಷ್ಠಾನಕ್ಕೆಂದು ಆಯ್ಕೆ ಮಾಡಿಕೊಳ್ಳಲಾಗಿದೆ.

ಒಂದು ಬೂತ್​ನಲ್ಲಿ ಒಂದು ದಿನಕ್ಕೆ ಹತ್ತರಿಂದ ಹದಿನೈದು ಮಕ್ಕಳು ಜನಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಅಷ್ಟು ಉಂಗುರಗಳನ್ನು ಖರೀದಿ ಮಾಡಲಾಗಿದೆ. ಇದರ ಜೊತೆಯಲ್ಲಿ ಮೀನುಗಳನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಉಚಿತ ಮೀನು ಹಂಚಿಕೆ ಮಾಡಲು ಕೂಡ ತಮಿಳುನಾಡು ಬಿಜೆಪಿ ಘಟಕವು ನಿರ್ಧರಿಸಿದ್ದು ಇದಕ್ಕಾಗಿ ಸಿಎಂ ಎಂ.ಕೆ ಸ್ಟಾಲಿನ್​ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದೆ. ಪ್ರಧಾನಿ ಮೋದಿಗೆ ನಾಳೆ 72 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 720 ಕೆಜಿ ತೂಕದ ಮೀನನ್ನು ಉಚಿತವಾಗಿ ಹಂಚಿಕೆ ಮಾಡಲಾಗುತ್ತದೆ.

ಇದನ್ನು ಓದಿ : Mark Boucher MI Head Coach : ದಕ್ಷಿಣ ಆಫ್ರಿಕಾದ ದಿಗ್ಗಜ ಮುಂಬೈ ಇಂಡಿಯನ್ಸ್ ಕೋಚ್ ; ಮಾರ್ಕ್ ಬೌಷರ್ ಹೆಗಲೇರಿದ ಮುಂಬೈ ಗುರು ಪಟ್ಟ

ಇದನ್ನೂ ಓದಿ : Dk Shivakumar: ನನ್ನ ಹಾಗೂ ನನ್ನ ಸ್ನೇಹಿತರಿಗೆ ಇಡಿ ಕಿರುಕುಳ ನೀಡುತ್ತಿದೆ : ಡಿ.ಕೆ ಶಿವಕುಮಾರ್​ ಗಂಭೀರ ಆರೋಪ

Pm Modi Birthday 2022 – Tamilnadu Bjp Plans To Gift Gold Ring To All Newborn Babies On 17th Sep 2022

Comments are closed.