Dk Shivakumar: ನನ್ನ ಹಾಗೂ ನನ್ನ ಸ್ನೇಹಿತರಿಗೆ ಇಡಿ ಕಿರುಕುಳ ನೀಡುತ್ತಿದೆ : ಡಿ.ಕೆ ಶಿವಕುಮಾರ್​ ಗಂಭೀರ ಆರೋಪ

ಬೆಂಗಳೂರು : Dk Shivakumar Ed And Cbi Enquiry :ನನಗೆ ಹಾಗೂ ನನ್ನ ಆಪ್ತರಿಗೆ ಇಡಿ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಗಂಭೀರ ಆರೋಪವನ್ನು ಮಾಡಿದ್ದಾರೆ. ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ನನಗೆ ಹಾಗೂ ನನ್ನ ಆಪ್ತರಿಗೆ ಪ್ರತಿನಿತ್ಯ ವಿಚಾರಣೆಗೆ ಕರೆಯುತ್ತಿದೆ. ನನ್ನ ಜೊತೆ ವ್ಯವಹಾರದಲ್ಲಿ ತೊಡಗಿದವರಿಗೆ ಇಡಿ ಹಾಗೂ ಇತರೆ ತನಿಖಾ ಸಂಸ್ಥೆಗಳ ಮೂಲಕ ಕಿರುಕುಳ ನೀಡಲಾಗ್ತಿದೆ ಎಂದು ಆರೋಪಿಸಿದ್ದಾರೆ.

ಗುರುವಾರ ಕೂಡ ನನ್ನನ್ನು ಕರೆದು ವಿಚಾರಣೆಗೆ ಒಳಪಡಿಸಿದ್ದಾರೆ. ಜಾರಿ ನಿರ್ದೇಶನಾಲಯ ಸೋಮವಾರ ವಿಚಾರಣೆಗೆ ಹಾಜರಾಗಿ ಅಂತಾ ಹೇಳಿದೆ. ಸಿಬಿಐ ಅಧಿಕಾರಿಗಳು ನನ್ನ ಮೇಲೆ ಎಫ್​ಐಆರ್​ ದಾಖಲು ಮಾಡಿಕೊಂಡಿದ್ದಾರೆ. ಆದರೆ ಜಾರಿ ನಿರ್ದೇಶನಾಲಯ ನನ್ನ ಮೇಲೆ ಎಫ್​ಐಆರ್ ದಾಖಲಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಸಿಬಿಐ ಹಾಗೂ ಇಡಿ ಪ್ರತಿದಿನ ನನ್ನನ್ನು ಹಾಗೂ ನನ್ನ ಸ್ನೇಹಿತರನ್ನು ವಿಚಾರಣೆಗೆ ಹಾಜರುಪಡಿಸುತ್ತಿದೆ ಎಂದು ಗುಡುಗಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ನನ್ನ ಮೇಲೆ ಎಫ್​ಐಆರ್​ ದಾಖಲು ಮಾಡಿಕೊಂಡಿದೆ. ಆದರೆ ಜಾರಿ ನಿರ್ದೇಶನಾಲಯ ಅದ್ಯಾವ ಪ್ರಕರಣ ದಾಖಲಿಸಿಕೊಂಡಿದೆಯೋ ನನಗಂತೂ ತಿಳಿದಿಲ್ಲ. ಸಧ್ಯ ನಾನು ಭಾರತ ಐಕ್ಯತಾ ಯಾತ್ರೆಯ ತಯಾರಿಯಲ್ಲಿದ್ದೇನೆ. ಭಾರತ ಐಕ್ಯತಾ ಯಾತ್ರೆಯ ವಿಚಾರವಾಗಿ ನಾನು ಅಧಿವೇಶನದಲ್ಲಿ ಭಾಗಿಯಾಗಬೇಕಿದ್ದು ನನಗೆ ನನ್ನದೇ ಆದ ಜವಾಬ್ದಾರಿಗಳಿವೆ. ಹೀಗಾಗಿ ನಮ್ಮ ವಕೀಲರ ಜೊತೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.

ನನ್ನ ಜೊತೆ ವ್ಯಾಪಾರ , ವ್ಯವಹಾರ ಮಾಡಿದವರಿಗೆ ಕಿರುಕುಳ ನೀಡಲಾಗುತ್ತಿದೆ. ನಾನು ಸಿಬಿಐ ಹಾಗೂ ಇಡಿ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಇಡೀ ರಾಜ್ಯದಲ್ಲಿ ಕೇವಲ ನನ್ನ ಪ್ರಕರಣವನ್ನು ಮಾತ್ರ ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿದೆ. ನಾನು ಈ ಬಗ್ಗೆ ಹೈಕೋರ್ಟ್​ನಲ್ಲಿ ಹೋರಾಟ ಮಾಡಲಿದ್ದೇನೆ. ನಾನು ಕಾನೂನು ಬಾಹಿರವಾದ ಯಾವುದೇ ಕೆಲಸವನ್ನು ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ : Aashiki : ಕನ್ನಡದಲ್ಲೂ ‘ಆಶಿಕಿ’ ಕಿಕ್..ಇದು ಕ್ರೈಮ್ ರಿಪೋರ್ಟರ್ ಹೆಣೆದ ಮ್ಯೂಸಿಕಲ್ ಲವ್ ಸ್ಟೋರಿ

ಇದನ್ನೂ ಓದಿ : Mark Boucher MI Head Coach : ದಕ್ಷಿಣ ಆಫ್ರಿಕಾದ ದಿಗ್ಗಜ ಮುಂಬೈ ಇಂಡಿಯನ್ಸ್ ಕೋಚ್ ; ಮಾರ್ಕ್ ಬೌಷರ್ ಹೆಗಲೇರಿದ ಮುಂಬೈ ಗುರು ಪಟ್ಟ

Congress Leader Dk Shivakumar On Ed And Cbi Enquiry

Comments are closed.