Presidential Election 2022: ರಾಷ್ಟ್ರಪತಿ ಚುನಾವಣೆಗೆ 98 ನಾಮಪತ್ರ ಸಲ್ಲಿಕೆ : ಆಯ್ಕೆಯಾಗಿದ್ದು ಇಬ್ಬರು ಮಾತ್ರ

Presidential Election 2022: 2022ರ ರಾಷ್ಟ್ರಪತಿ ಚುನಾವಣೆಗೆ ಈ ಬಾರಿ ಬರೋಬ್ಬರಿ 98 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ವಿಚಿತ್ರ ಏನೆಂದರೆ ಈ 98 ನಾಮಪತ್ರಗಳ ಪೈಕಿ ಕೇವಲ 2 ನಾಮಪತ್ರ ಮಾತ್ರ ಕಣದಲ್ಲಿ ಉಳಿದಿದೆ. ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ 96 ಮಂದಿಯ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ನಾಮಪತ್ರಗಳನ್ನು ಹಿಂಪಡೆಯಲು ಜುಲೈ 2 ಕೊನೆಯ ದಿನಾಂಕವಾಗಿದೆ. ಚುನಾವಣಾ ಅಧಿಕಾರಿಗಳು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ನಾಮಪತ್ರ ಸಲ್ಲಿಕೆ ಮಾಡಲು ಜೂನ್​ 29ರವರೆಗೆ ಅವಕಾಶ ನೀಡಲಾಗಿತ್ತು. ಒಟ್ಟೂ ಸಲ್ಲಿಕೆಯಾಗಿದ್ದ 98 ನಾಮಪತ್ರಗಳಲ್ಲಿ 26 ನಾಮಪತ್ರಗಳು ತಾಂತ್ರಿಕ ಕಾರಣಗಳಿಂದ ರದ್ದಾಗಿದೆ. ಉಳಿದ 72 ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ನಡೆಸಿದ್ದು ಈ ಪೈಕಿ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮ ಹಾಗೂ ಯುಪಿಎ ಅಭ್ಯರ್ಥಿ ಯಶವಂತ್​ ಸಿನ್ಹಾ ನಾಮಪತ್ರ ಮಾತ್ರ ಸರಿಯಾಗಿದೆ ಎಂದು ತಿಳಿದು ಬಂದಿದೆ.

ಈ ಬಾರಿ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿಯನ್ನು ಚುನಾವಣಾಧಿಕಾರಿಯನ್ನಾಗಿ ಮಾಡಲಾಗಿದೆ. ಅಂಕಿಅಂಶಗಳ ಪ್ರಕಾರ, ದೆಹಲಿ ಸೇರಿದಂತೆ 17 ರಾಜ್ಯಗಳಿಂದ ನಾಮಪತ್ರಗಳು ಭರ್ತಿಯಾಗಿವೆ. ಈ ಪೈಕಿ ದೆಹಲಿಯಿಂದ ಗರಿಷ್ಠ 19 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಉತ್ತರ ಪ್ರದೇಶದ 16 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಮಹಾರಾಷ್ಟ್ರದಿಂದ 11 ಮಂದಿ ಹಾಗೂ ತಮಿಳುನಾಡಿನಿಂದ 10 ಮಂದಿ ಅರ್ಜಿ ಸಲ್ಲಿಸಿದ್ದಾರೆ. ದ್ರೌಪದಿ ಮುರ್ಮು ಸೇರಿದಂತೆ 10 ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ.


ಚುನಾವಣೆಗೆ ಸ್ಪರ್ಧಿಸಲು 15 ಸಾವುರ ರೂಪಾಯಿ ಠೇವಣಿ ಇಡಬೇಕಾದ ಹಿನ್ನೆಲೆಯಲ್ಲಿ ಬಹುತೇಕ ನಾಮಪತ್ರಗಳು ಠೇವಣಿ ಇಡದ ಕಾರಣದಿಂದ ತಿರಸ್ಕೃತಗೊಂಡಿವೆ. 62 ನಾಮಪತ್ರಗಳಲ್ಲಿ 9,30,000 ಸಾವಿರ ರೂಪಾಯಿ ಠೇವಣಿಯಾಗಿದೆ. ಠೇವಣಿಯ ಮಾಡಿದ ಮೊತ್ತವನ್ನು ಅರ್ಜಿ ಸಲ್ಲಿಸಿ ಹಿಂಪಡೆಯಬಹುದಾಗಿದೆ.

ಇದನ್ನು ಓದಿ : KL Rahul Health Report : ರಾಹುಲ್‌ಗೆ ಜರ್ಮನಿಯಲ್ಲಿ ಆಪರೇಷನ್ ಸಕ್ಸಸ್.. ಪ್ರಿಯತಮನ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ ಪ್ರೇಯಸಿ

ಇದನ್ನೂ ಓದಿ : ಇಂಗ್ಲೆಂಡ್‌ನಲ್ಲಿ ಹಸಿದ ಭಿಕ್ಷುಕನಿಗೆ ಆಹಾರ ನೀಡಿ ಮಾನವೀಯತೆ ಮೆರೆದ ರಿಷಬ್ ಪಂತ್

Presidential Election 2022: Nomination papers from 98 people to become President, only two are valid; Why

Comments are closed.