Pregnant minor dies : ಗರ್ಭಪಾತ ಮಾತ್ರೆ ಸೇವಿಸಿ ಅಪ್ರಾಪ್ತೆ ಸಾವು : ಬಾಯ್​ಫ್ರೆಂಡ್​ ಬಂಧನ

ತಮಿಳುನಾಡು : Pregnant minor dies : ಹದಿಹರೆಯದ ವಯಸ್ಸಿನಲ್ಲಿ ಎಷ್ಟು ಜಾಗರೂಕೆಯಿಂದ ಇದ್ದರೂ ಕೂಡ ಕಡಿಮೆಯೇ. ಪೋಷಕರು ಎಷ್ಟೇ ಜಾಗೃತಿ ವಹಿಸಿದ್ದರೂ ಸಹ ಕೆಲವೊಮ್ಮೆ ಮಕ್ಕಳು ಕೈ ತಪ್ಪಿ ಹೋಗುತ್ತಾರೆ. ಈ ವಯಸ್ಸಿನಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಹದಿಹರೆಯದ ಮಕ್ಕಳ ಜೀವನವನ್ನೇ ಹಾಳು ಮಾಡಿಬಿಡಬಹುದು. ಅಥವಾ ಕೆಲವು ಪ್ರಸಂಗಳಲ್ಲಿ ಜೀವ ಹೋಗಲೂ ಬಹುದು. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ತಮಿಳುನಾಡಿನಲ್ಲಿ 15 ವರ್ಷದ ಬಾಲಕಿಯೊಬ್ಬಳು ಗರ್ಭಪಾತದ ಮಾತ್ರೆಯನ್ನು ಸೇವಿಸಿದ ಪರಿಣಾಮ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ತಿರುವಮಲೈ ಜಿಲ್ಲೆಯ ಚೆಂಗಂ ಎಂಬಲ್ಲಿ ಈ ಘಟನೆ ಸಂಭವಿಸಿದೆ. 27 ವರ್ಷದ ಮುರುಗನ್​ ಎಂಬಾತನಿಂದ ಗರ್ಭವತಿಯಾಗಿದ್ದ ಈಕೆ ಗರ್ಭಪಾತ ಮಾಡಿಸಿಕೊಳ್ಳಲು ಹೋಗಿ ಜೀವವನ್ನೇ ಕಳೆದುಕೊಂಡಿದ್ದಾಳೆ .

ಮುರುಗನ್​ ಪ್ರತಿ ನಿತ್ಯ ಈ ಬಾಲಕಿಯನ್ನು ಆಕೆಯ ಶಾಲೆಗೆ ಡ್ರಾಪ್​ ಮಾಡುತ್ತಿದ್ದ ಎನ್ನಲಾಗಿದೆ. ಈ ನಡುವೆ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು ಅದು ಕಾಲಾತಂತರದಲ್ಲಿ ದೈಹಿಕ ಸಂಪರ್ಕದವರೆಗೂ ಹೋಗಿತ್ತು. ಕೆಲವು ದಿನಗಳ ಹಿಂದೆ ಬಾಲಕಿ ಗರ್ಭ ಧರಿಸಿದ್ದಳು. ಮುರುಗನ್​ ತನ್ನ ಸ್ನೇಹಿತ ಪ್ರಭು ಎಂಬಾತ ನೀಡಿದ ಸಲಹೆಯ ಮೇರೆಗೆ ಬಾಲಕಿಗೆ ಗರ್ಭಪಾತದ ಮಾತ್ರೆಯನ್ನು ನೀಡಿದ್ದಾನೆ.


ಶಾಲೆಗೆ ಕರೆದುಕೊಂಡು ಹೋಗುತ್ತೇನೆಂದು ಹೇಳಿ ಬಾಲಕಿಯನ್ನು ಮುರುಗನ್​ ಆಕೆಯ ಮನೆಯಿಂದ ಹೊರಗೆ ಕರೆದುಕೊಂಡು ಬಂದಿದ್ದ. ಮಾರ್ಗ ಮಧ್ಯದಲ್ಲಿ ಆಕೆಗೆ ಗರ್ಭಪಾತದ ಮಾತ್ರೆ ಸೇವಿಸುವಂತೆ ಹೇಳಿದ್ದಾನೆ. ಗರ್ಭಪಾತದ ಮಾತ್ರೆ ಸೇವಿಸಿ ಶಾಲೆಗೆ ಹೋಗುತ್ತಿದ್ದ ವೇಳೆಯಲ್ಲಿ ಬಾಲಕಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದ್ದಾಳೆ. ಬಳಿಕ ಮುರುಗನ್​ ಬಾಲಕಿಯನ್ನು ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ.


ವೈದ್ಯರು ಬಾಲಕಿ ಮೃತಪಟ್ಟಿದ್ದಾಳೆ ಎಂದು ಮುರುಗನ್​ಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಗೆಂದು ಬಾಲಕಿಯ ಮೃತದೇಹವನ್ನು ತಿರುವನಮಲೈ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ.
ಮೃತ ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಮುರುಗನ್​ ಹಾಗೂ ಆತನ ಸ್ನೇಹಿತ ಪ್ರಭುವನ್ನು ಪೊಲೀಸರು ಬಂಧಿಸಿದ್ದಾರೆ. ಮುರುಗನ್​ ವಿರುದ್ಧ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಗರ್ಭಪಾತ ಮಾತ್ರೆ ನೀಡಿದವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನು ಓದಿ : Presidential Election 2022: ರಾಷ್ಟ್ರಪತಿ ಚುನಾವಣೆಗೆ 98 ನಾಮಪತ್ರ ಸಲ್ಲಿಕೆ : ಆಯ್ಕೆಯಾಗಿದ್ದು ಇಬ್ಬರು ಮಾತ್ರ

ಇದನ್ನೂ ಓದಿ : man kills wife : ಹಲ್ಲುಜ್ಜುವ ವಿಚಾರಕ್ಕೆ ಜಗಳ : ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ

Pregnant minor dies after taking abortion pill in Tamil Nadu, boyfriend held

Comments are closed.