PM in Uttarakhand: ಉತ್ತರಾಖಂಡ್‍ನಲ್ಲಿ ಪ್ರಧಾನಿ ಮೋದಿ ಪ್ರವಾಸ: ವಿಶೇಷ ಉಡುಗೆಯಲ್ಲಿ ಮಿಂಚಿದ ‘ನಮೋ’..!

ಉತ್ತರಾಖಂಡ್: PM in Uttarakhand: ಪ್ರಧಾನಿ ಮೋದಿ ಇಂದಿನಿಂದ 2 ದಿನಗಳ ಕಾಲ ಉತ್ತರಾಖಂಡ್‍ನ ಕೇದರಿನಾಥ ಹಾಗೂ ಬದರಿನಾಥಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರಯುಕ್ತ ಅವರು ಇಂದು ಬೆಳಿಗ್ಗೆ ಉತ್ತರಾಖಂಡ್‍ಗೆ ತೆರಳಿದ್ದಾರೆ. ರಾಜ್ಯಕ್ಕೆ ಬಂದಿಳಿದ ಪ್ರಧಾನಿ ಅವರನ್ನು ರಾಜಕೀಯ ಗಣ್ಯರು ಸ್ವಾಗತ ಕೋರಿ ಬರಮಾಡಿಕೊಂಡರು. ಬಳಿಕ ಕೇದರನಾಥ ದೇಗುಲಕ್ಕೆ ಮೊದಲು ಭೇಟಿಕೊಟ್ಟು,ಆದಿಗುರು ಶ್ರೀ ಶಂಕರಾಚಾರ್ಯ ಸಮಾಧಿ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕೇದರಾನಾಥ ದೇಗುಲದಲ್ಲಿ ಶಿವನಿಗೆ ರುದ್ರಾಭಿಷೇಕ ಸೇರಿದಂತೆ ಬೆಳಗ್ಗಿನ ಧಾರ್ಮಿಕ ವಿಧಿ-ವಿಧಾನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮಂದಾಕಿನಿ ಮತ್ತು ಸರಸ್ವತಿ ಅಸ್ತಪಥದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಪ್ರಧಾನಿ ಅವರು ಬಳಿಕ ಅಲ್ಲಿನ ಕಾರ್ಮಿಕರ ಜೊತೆ ಸಂವಾದ ನಡೆಸಿದರು. ಕೇದರನಾಥ್ ನಡುವೆ ಹೊಸ ರೋಪ್ ಯೋಜನೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 3400 ಕೋಟಿ ರೂ. ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.ಕೇದರನಾಥ್‍ಗೆ ಸಂಪರ್ಕ ಕಲ್ಪಿಸುವ 9.7 ಕಿ.ಮೀ ಉದ್ದದ ಗೌರಿಕುಂಡ್ ರೋಪ್‍ವೇಗೆ ಶಂಕುಸ್ಥಾಪನೆ ಶಂಕುಸ್ಥಾಪನೆ ನೆರವೇರಿಸಿದರು. ಇದು 2 ಸ್ಥಳಗಳ ನಡುವಿನ ಪ್ರಸ್ತುತ 6-7 ಗಂಟೆಗಳ ಪ್ರಯಾಣದ ಅವಧಿಯನ್ನು 30 ನಿಮಿಷಗಳಿಗೆ ಕಡಿಮೆ ಮಾಡುತ್ತದೆ.

ಹಿಂದೂ ಯಾತ್ರಸ್ಥಳಗಳಾದ ರಿಷಿಕೇಶ, ಜೋಶಿಮಠ,ಬದ್ರಿನಾಥವನ್ನು ಡೆಹ್ರಾಡೂನ್‍ಗೆ ಸಂಪರ್ಕಿಸುವಂತೆ ವಿಸ್ತರಿಸಿರುವ ರಾಷ್ಟ್ರೀಯ ಹೆದ್ದಾರಿ 7ನ್ನು, ಪ್ರಯಾಗ್‍ರಾಜ್‍ನಿಂದ ಗೌರಿಕುಂಡದವರೆಗೆ ವಿಸ್ತರಿಸಲಾದ ರಾಷ್ಟ್ರೀಯ ಹೆದ್ದಾರಿ 107ನ್ನು ಉದ್ಘಾಟಿಸಿದರು. ಬಳಿಕ ಮಾಣ ಗ್ರಾಮದಲ್ಲಿ ರಸ್ತೆ ಮತ್ತು ರೋಪ್ ವೇ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಧ್ಯಾಹ್ನ ಅರೈವಲ್ ಪ್ಲಾಜಾ ಮತ್ತು ಕೆರೆಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶಿಲನೆ ನಡೆಸಿದರು. ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಕೇದರಿನಾಥ ದೇಗುಲದ ಸುತ್ತಮುತ್ತ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಕೇದರಿನಾಥ ಮತ್ತು ಬದರಿನಾಥ ದೇಗುಲಗಳು ಅಲಂಕಾರಗಳಿಂದ ಕಂಗೊಳಿಸುತ್ತಿತ್ತು. ಪ್ರಧಾನಿ ಅವರ ಇಂದಿನ ಉತ್ತರಾಖಂಡ್ ಭೇಟಿಯನ್ನು ವಿಶೇಷವೆಂದೇ ಪರಿಗಣಿಸಲಾಗುತ್ತಿದೆ.

ಪ್ರಧಾನಿ ಧರಿಸಿರುವ ಉಡುಪಿನ ವಿಶೇಷತೆ ಏನು..?

ಪ್ರತಿಬಾರಿಯೂ ಬೇರೆ ಬೇರೆ ರಾಜ್ಯಗಳ ಪ್ರವಾಸದ ವೇಳೆ ಅಲ್ಲಿನ ಸಾಂಪ್ರಾದಾಯಿಕ ಉಡುಗೆಯಲ್ಲಿ ಮಿಂಚುವ ಪ್ರಧಾನಿ ಮೋದಿ ಅವರು ಇಂದು ಹಿಮಾಚಲದ ಸಾಂಪ್ರದಾಯಿಕ ಚೋಲಾ ಡೋರಾ ಉಡುಪನ್ನು ಧರಿಸಿ ಗಮನ ಸೆಳೆದರು. ಅಂದಹಾಗೆ ಈ ಉಡುಪನ್ನು ಇತ್ತೀಚೆಗೆ ಮೋದಿ ಹಿಮಾಚಲಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಮಹಿಳೆಯೊಬ್ಬರು ತಮ್ಮ ಕೈಯ್ಯಾರೆ ತಾವೇ ತಯಾರಿಸಿ ಪ್ರಧಾನಿ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಇದನ್ನು ಉತ್ತಮವಾದ ಕುಸುರಿ ಕೆಲಸದಿಂದ ಸಿದ್ಧಪಡಿಸಲಾಗಿದೆ. ಮಹಿಳೆಯಿಂದ ಉಡುಗೆ ಸ್ವೀಕರಿಸಿದ್ದ ವೇಳೆ, ತಾನು ತಂಪಾದ ಸ್ಥಳಗಳಿಗೆ ಭೇಟಿ ನೀಡುವಾಗ ಈ ಉಡುಪನ್ನು ಧರಿಸುವುದಾಗಿ ಪ್ರಧಾನಿ ಅವರು ಆಕೆಗೆ ಮಾತು ಕೊಟ್ಟಿದ್ದರು. ಅದರಂತೆ ಇಂದು ಕೇದರನಾಥದಲ್ಲಿ ಈ ಉಡುಪು ಧರಿಸಿರುವುದು ವಿಶೇಷವಾಗಿದೆ.

ಕೇದರನಾಥದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ ಬಳಿಕ ಬದರಿನಾಥಕ್ಕೆ ಪ್ರಯಾಣ ಬೆಳೆಸಿದರು. ಇಂದು ರಾತ್ರಿ ಬದರಿನಾಥದಲ್ಲೇ ರಾತ್ರಿ ತಂಗಲಿರುವ ಮೋದಿ ನಾಳೆಯೂ ಕೆಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: MurugaShri case: ಮುರುಘಾ ಶ್ರೀಗಳಿಗಿಲ್ಲ ಬಿಡುಗಡೆ ಭಾಗ್ಯ: ಇನ್ನೂ 14 ದಿನಗಳ ಕಾಲ ಜೈಲು ಫಿಕ್ಸ್..!

ಇದನ್ನೂ ಓದಿ: Scientific Reason Behind Diwali:ದೀಪಾವಳಿ ಆಚರಣೆಯ ಹಿಂದಿದೆ ವೈಜ್ಞಾನಿಕ ಕಾರಣ : ನಿಮಗಿದು ಗೊತ್ತೆ ?

Prime Minister Modi visited Kedarnath and Badarinath today

Comments are closed.