Yashtimadhu Benefits : ಶೀತ, ಕೆಮ್ಮಿಗೆ ರಾಮಬಾಣ ಯಷ್ಟಿಮಧು; ಇದರ ಕಷಾಯ ಮಾಡುವುದು ಹೇಗೆ ಗೊತ್ತಾ…

ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸುವ ಯಷ್ಟಿಮಧು (Yashtimadhu Benefits) ಅತ್ಯಂತ ಪ್ರಯೋಜನಕಾರಿಯಾದ ಗಿಡಮೂಲಿಕೆಯಾಗಿದೆ. ಇದು ಶೀತ, ಸಾಮನ್ಯ ಜ್ವರ, ಕೆಮ್ಮಿಗೆ ಮನೆಮದ್ದುವಿನ (Home Remedies) ರೀತಿಯಲ್ಲಿ ಚಿಕಿತ್ಸೆ ನೀಡಲು ಉತ್ತಮವಾಗಿದೆ. ಯಷ್ಟಿಮಧು ಅಥವಾ ಜ್ಯೇಷ್ಟಮಧು ಎಂದು ಕರೆಯುವ ಇದರ ವೈಜ್ಞಾನಿಕ ಹೆಸರು ಲೈಕೋರೈಸ್. ಇದನ್ನು “ಸ್ವೀಟ್‌ವುಡ್” ಎಂದೂ ಕರೆಯುತ್ತಾರೆ. ಇತ್ತೀಚೆಗೆ ಇದನ್ನು ಪರಿಮಳಯುಕ್ತ ಚಹಾ ಮತ್ತು ಪಾನೀಯಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಇದನ್ನು ಆಯುರ್ವೇದ ಪದ್ಧತಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ಮತ್ತು ಉಸಿರಾಟ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಉಪಯೋಗಿಸಲಾಗುತ್ತದೆ. ಲೈಕೋರೈಸ್ ಆಂಟಿವೈರಲ್, ಆಂಟಿಇನ್ಫಮೆಟರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಜೀರ್ಣಾಂಗವ್ಯೂಹದ ಮ್ಯೂಕೋಸಲ್‌ನ ಆರೋಗ್ಯವನ್ನು ಕಾಪಾಡುತ್ತದೆ. ಮಲಬದ್ಧತೆ, ಗ್ಯಾಸ್ಟ್ರಿಕ್ ಮತ್ತು ಪೆಪ್ಟಿಕ್ ಹುಣ್ಣುಗಳನ್ನು ತಡೆಯುತ್ತದೆ.

ಕೆಮ್ಮು ಮತ್ತು ಶೀತವನ್ನು ಗುಣಪಡಿಸಲು ಯಷ್ಟಿಮಧು ಸಹಾಯ ಮಾಡುತ್ತದೆ. ಅದರ ಜೊತೆಗೆ ದೇಹದಲ್ಲಿನ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಗಂಟಲು ನೋವು ಮತ್ತು ಇತರ ಉಸಿರಾಟದ ಸಮಸ್ಯೆಗಳಿಗೆ ಇದು ನಿಜವಾಗಿಯೂ ತ್ವರಿತ ಪರಿಹಾರ ನೀಡಬಲ್ಲದು. ಆಯುರ್ವೇದದ ಪ್ರಕಾರ, ಯಷ್ಟಿಮಧು ಪಿಸಿಓಡಿಯಿಂದ ಬಳಲುತ್ತಿರುವ ಮಹಿಳೆಯರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸಾಮಾನ್ಯ ಗಂಟಲು ನೋವು, ಶೀತ, ಕೆಮ್ಮಿಗೆ ಯಷ್ಟಿಮಧುವಿನಿಂದ ತಯಾರಿಸಿದ ಕಷಾಯ ಬಹಳ ಆರಾಮವನ್ನು ನೀಡುತ್ತದೆ.

ಶೀತ, ಕೆಮ್ಮಿಗೆ ಯಷ್ಟಿಮಧುವಿನಿಂದ ಕಷಾಯ ತಯಾರಿಸುವುದು ಹೇಗೆ?

  • ಒಂದು ಗ್ಲಾಸ್‌ ನೀರಿಗೆ 1 ಚಮಚ ಯಷ್ಟಿಮಧುವಿನ ಪುಡಿಯನ್ನು ಸೇರಿಸಿ ಕುದಿಸಿ. ಬಿಸಿ ಆರಿದ ನಂತರ ಕುಡಿಯಿರಿ.
  • ಉಗುರುಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಜೇನುತುಪ್ಪ ಮತ್ತು ಸ್ವಲ್ಪ ಯಷ್ಟಿಮಧುವಿನ ಪುಡಿಯನ್ನು ಬೆರೆಸಿ ಕುಡಿಯುವುದು, ಒಣ ಕೆಮ್ಮನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
  • ಯಷ್ಟಿಮಧುವಿನ ಬೇರು ಒಂದು ಇಂಚು, ನಾಲ್ಕೈದು ತುಳಸಿ ಮತ್ತು ಪುದೀನ ಎಲೆಗಳನ್ನುಒಂದು ಗ್ಲಾಸ್‌ ನೀರಿನಲ್ಲಿ ಮಿಶ್ರಣ ಮಾಡಿ, 10 ನಿಮಿಷಗಳ ಕಾಲ ಕುದಿಸಿ. ಆ ನೀರನ್ನು ಕುಡಿಯಿರಿ.
  • ಮತ್ತೊಂದು ಸುಲಭದ ಉಪಾಯವೆಂದರೆ ಯಷ್ಟಿಮಧುವಿನ ಚಿಕ್ಕ ಪೀಸ್‌ ಅನ್ನು ಅಗಿಯುವುದು. ಹೀಗೆ ಮಾಡುವುದರಿಂದ ಗಂಟಲಿನ ಸೋಂಕು ಕಡಿಮೆಯಾಗುತ್ತದೆ.

ಇದನ್ನೂ ಓದಿ : Arecanut Price Increase : ಮತ್ತೆ ಮಾರುಕಟ್ಟೆಯಲ್ಲಿ ಏರಿಕೆ ಕಂಡ ಅಡಿಕೆ ಬೆಲೆ : ಎಲ್ಲೆಲ್ಲಿ ಎಷ್ಟೆಷ್ಟು ಏರಿಕೆ ?

ಇದನ್ನೂ ಓದಿ : Peanut-Til Barfi: ಸಂಕ್ರಾಂತಿಗೆ ಮನೆಯಲ್ಲಿಯೇ ತಯಾರಿಸಿ ಶೇಂಗಾ–ಎಳ್ಳು ಬರ್ಫಿ

(Yashtimadhu Benefits. How to use this for common cold and cough. Home remedies)

Comments are closed.