Narayana Murthy : ಅಳಿಯ ರಿಷಿ ಸುನಕ್ ಬಗ್ಗೆ ಹೆಮ್ಮೆಯಿದೆ : ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ

ನವದೆಹಲಿ : ಬ್ರಿಟನ್ ಪ್ರಧಾನಿಯಾಗುತ್ತಿರುವ ಅಳಿಯ ರಿಷಿ ಸುನಕ್ (Rishi Sunak )ಬಗ್ಗೆ ಮೊದಲ ಬಾರಿಗೆ ಇನ್ಪೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ(Narayana Murthy) ಅವರು ಮನಬಿಚ್ಚಿ ಮಾತನಾಡಿದ್ದಾರೆ. ಅವರ ಬಗ್ಗೆ ನಮಗೆ ಹೆಮ್ಮೆಯಿದೆ, ಅವರ ಯಶಸ್ಸನ್ನು ಬಯಸುತ್ತೇವೆ. ಬ್ರಿಟನ್ ಪ್ರಜೆಗಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳುವ ಮೂಲಕ ಅಳಿಯ ಗುಣಗಾನ ಮಾಡಿದ್ದಾರೆ.

ಭಾರತೀಯ ಮೂಲದ ರಿಷಿ ಸುನಕ್ (Rishi Sunak)ಅವರು ಇಂಗ್ಲೆಂಡ್ ಪ್ರಧಾನಿ ಆಗುತ್ತಿರುವುದನ್ನು ಇಡೀ ಭಾರತವೇ ಸಂಭ್ರಮಿಸುತ್ತಿದೆ. ಒಂದು ಕಾಲದಲ್ಲಿ ಭಾರತವನ್ನು ಆಳಿದ್ದ ದೇಶದವನ್ನು ಇದೀಗ ಭಾರತೀಯನೋರ್ವ ಆಳಲು ಸಜ್ಜಾಗಿರುವುದು ಭಾರತೀಯರಿಗೆ ಹೆಮ್ಮೆಯೇ ಸರಿ. ಅಷ್ಟಕ್ಕೂ ಈ ರಿಷಿ ಸುನಕ್ ಅವರು ಕರ್ನಾಟಕದ ಅಳಿಯ. ಇನ್ಪೋಸಿಸ್ ಸಂಸ್ಥೆಯ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಇನ್ಪೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರ ಮುದ್ದಿನ ಅಳಿಯ. ಮಗಳ ಮದುವೆಯ ನಂತರದಲ್ಲಿ ರಿಷಿ ಸುನಕ್ ಅವರ ಬಗ್ಗೆ ನಾರಾಯಣ ಮೂರ್ತಿ ಅವರು ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ರು.

ಇದೀಗ ಬ್ರಿಟನ್ ಪ್ರಧಾನಿ ಆಗುತ್ತಿರುವ ಹೊತ್ತಲೇ ನಾರಾಯಣ ಮೂರ್ತಿ ಅವರು ಅಳಿಯ ಬಗ್ಗೆ ಗುಣಗಾನ ಮಾಡಿದ್ದಾರೆ. ನಾರಾಯಣ ಮೂರ್ತಿ ಅವರು ಪಿಟಿಐಗೆ ಮೊದಲ ಇಮೇಲ್‌ನಲ್ಲಿ ” ರಿಷಿಗೆ ಅಭಿನಂದನೆಗಳು. ನಾವು ಅವರ ಬಗ್ಗೆ ಹೆಮ್ಮೆ ಪಡುತ್ತೇವೆ ಹಾಗೂ ನಾವು ಅವರ ಯಶಸ್ಸನ್ನು ಬಯಸುತ್ತೇವೆ” “ಯುನೈಟೆಡ್‌ ಕಿಂಗ್‌ಡಂನ ಜನರಿಗೆ ಅವರು ತಮ್ಮ ಕೈಲಾದಷ್ಟು ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ”. ಎಂದು ಹೇಳಿದ್ದಾರೆ.

42 ವರ್ಷದ ಸುನಕ್‌ (Rishi Sunak)ಭಾನುವಾರ ಕನ್ಸರ್ವೇಟಿವ್‌ ಪಕ್ಷದಿಂದ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಭಾರತೀಯ ಮೂಲದ ಮೊದಲ ವ್ಯಕ್ತಿ ಬ್ರಿಟನ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದ್ದಾರೆ. ಸುನಿಕ್‌ ಅವರ ತಾಯಿ ಔಷಧಿಜ್ಞಾನಿ ಹಾಗೂ ತಂದೆ ವೈದ್ಯ ವೃತ್ತಿಯನ್ನು ನಿರ್ವಹಿಸುತ್ತಿದ್ದವರು. ಸುನಕ್‌ ತಮ್ಮ ವಿದ್ಯಾಭ್ಯಾಸವನ್ನು ಇಂಗ್ಲೆಂಡ್‌ನ ಅತ್ಯಂತ ಪ್ರಸಿದ್ಧ ಶಾಲೆಗಳಲ್ಲಿ ಒಂದಾದ ವಿಂಚೆಸ್ಟರ್‌ ಹಾಗೂ ನಂತರ ಆಕ್ಸ್‌ಫರ್ಡ್‌ನಲ್ಲಿ ಶಿಕ್ಷಣವನ್ನು ಪಡೆದಿದ್ದಾರೆ. ಅಲ್ಲಿ ಅವರು ಇನ್ಫೋಸಿಸ್‌ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿಯವರ ಪುತ್ರಿಯಾದ ಪತ್ನಿ ಅಕ್ಷತಾ ಮೂರ್ತಿಯನ್ನು ಭೇಟಿಯಾಗುತ್ತಾರೆ. ಮೊದಲಿಗೆ ಇವರ ಪ್ರೀತಿಯನ್ನು ನಾರಾಯಣಮೂರ್ತಿ ಮತ್ತು ಸುಧಾಮೂರ್ತಿಯವರು ಒಪ್ಪಿಕೊಂಡಿರುವುದಿಲ್ಲ. ಅದಕ್ಕೆ ಕಾರಣ ಇವರು ಸಾಧಾರಣ ಕುಟುಂಬ ಹಿನ್ನಲೆಯಿಂದ ಬಂದಿರುವುದ್ದರಿಂದ, ಆದರೆ ನಂತರ ದಿನಗಳಲ್ಲಿ ಇವರ ಚುರುಕುತನವನ್ನು ಮೆಚ್ಚಿಕೊಂಡ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿಯವರು ಮದುವೆಗೆ ಒಪ್ಪಿಕೊಳ್ಳುತ್ತಾರೆ. ನಂತರ 2009 ರಲ್ಲಿ ಸುನಕ್‌ ಮತ್ತು ಅಕ್ಷತಾ ವಿವಾಹವಾಗುತ್ತಾರೆ. ಈ ದಂಪತಿಗೆ ಕೃಷ್ಣಾ ಮತ್ತು ಅನುಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಇದನ್ನೂ ಓದಿ : Rishi Sunak Lifestyle : ಹೋಟೆಲ್ ಸಪ್ಲೈಯರ್, ವೈದ್ಯರ ಮಗ ಬ್ರಿಟನ್ ಪ್ರಧಾನಿ ಆಗಿದ್ದು ಹೇಗೆ ? ಇಲ್ಲಿದೆ ರಿಷಿ ಸುನಕ್ ಬದುಕಿನ ರೋಚಕ ಕಹಾನಿ

ಇದನ್ನೂ ಓದಿ : Rishi Sunak UK PM : ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ, ಸುಧಾಮೂರ್ತಿ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ

ಇದನ್ನೂ ಓದಿ : Britain PM: ರಿಷಿ ಸುನಕ್ ಹಾದಿ ಮತ್ತಷ್ಟು ಸುಗಮ: ಪಿಎಂ ರೇಸ್‍ನಿಂದ ಹಿಂದೆ ಸರಿದ ಬೋರಿಸ್..!

ಇದನ್ನೂ ಓದಿ : Rishi Sunak PM : ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರುಸ್ ರಾಜೀನಾಮೆ: ರಿಷಿ ಸುನಕ್‍ಗೆ ಒಲಿಯುತ್ತಾ ಪಟ್ಟ..?

ಬ್ರಿಟನ್ ಪ್ರಧಾನಿ ಆಗಿದ್ದ ಲೀಜ್ ಟ್ರುಸ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಿಷಿ ಸುನಕ್ ಅವರಿಗೆ ಬ್ರಿಟನ್ ಪ್ರಧಾನಿ ಆಗುವ ಅವಕಾಶ ಒದಗಿ ಬಂದಿತ್ತು.

Proud of son-in-law Rishi Sunak : Infosys co-founder Narayana Murthy

Comments are closed.