Record number of accidents: ದೆಹಲಿಯಲ್ಲಿ ದಾಖಲೆ ಬರೆದ ಅಪಘಾತಗಳ ಸಂಖ್ಯೆ

ನವದೆಹಲಿ: (Record number of accidents) ದೆಹಲಿಯಲ್ಲಿ ಈವೆರೆಗೆ ಹಲವು ರಸ್ತೆ ಅಪಘಾತಗಳು ಸಂಭವಿಸಿದ್ದು, ಹಲವು ಸಾವು ನೋವುಗಳಾಗಿವೆ. ಕಳೆದ ಮೂರು ವರ್ಷಗಳಲ್ಲಿ ದೆಹಲಿಯ ಕೆಲವು ರಸ್ತೆಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸಿದ ವರದಿಗಳು ಬಂದಿವೆ. ಇದೀಗ ಎಎಪಿ ನೇತೃತ್ವದ ಸರಕಾರದ ವರದಿಯ ಪ್ರಕಾರ ದೆಹಲಿಯಲ್ಲಿನ ಹದಿನೆಂಟು ರಸ್ತೆಗಳಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸಿರುವುದಾಗಿ ವರದಿ ಮಾಡಿದೆ.

ಡೇಟಾ ಟು ಆಕ್ಷನ್‌ ಎಂಬ ಶೀರ್ಷಿಕೆಯ ಜೊತೆಗೆ ದೆಹಲಿ ರಸ್ತೆ ಸುರಕ್ಷತಾ ವರದಿ ಕಳೆದ ಮೂರುವರ್ಷಗಳಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸಿದ ರಸ್ತೆಗಳ ಪಟ್ಟಿಯನ್ನು ನೀಡಿದೆ.

ದೆಹಲಿ ಸರಕಾರದ ಅಂಕಿ ಅಂಶಗಳ ಪ್ರಕಾರ, ರಸ್ತೆ ಅಪಘಾತಗಳಿಂದ ಅತಿ ಹೆಚ್ಚು ಸಾವುಗಳನ್ನು ವರದಿ ಮಾಡಿದ ಪ್ರದೇಶಗಳೆಂದರೆ;
ಮುಕರ್ಬಾ ಚೌಕ್‌ (19 ಸಾವುಗಳು)
ಮಜ್ನು ಕಾ ತಿಲಾ-ಔಟರ್ ರಿಂಗ್ ರೋಡ್ ಸ್ಟ್ರೆಚ್ (16 ಸಾವುಗಳು)
ಸಿಗ್ನೇಚರ್ ಬ್ರಿಡ್ಜ್ ಬಳಿ (16 ಸಾವುಗಳು)
ಆಜಾದ್‌ಪುರ ಚೌಕ್ (15 ಸಾವುಗಳು)
ಪಂಜಾಬಿ ಬಾಗ್ ಚೌಕ್ (12 ಸಾವುಗಳು)
ನಿರಂಕಾರಿ ಚೌಕ್ (12 ಸಾವುಗಳು)
ಬುರಾರಿ ಚೌಕ್ (12 ಸಾವುಗಳು)
ಸೀಲಂಪುರ್ ಚೌಕ್ (12 ಸಾವುಗಳು)
ಗಾಜಿಪುರ ವೃತ್ತ (10 ಸಾವುಗಳು)
ಶಿವಾಜಿ ಪಾರ್ಕ್ ಮೆಟ್ರೋ ಸ್ಟೇಷನ್ (10 ಸಾವುಗಳು)

ರಸ್ತೆ ಅಪಘಾತಗಳಿಂದಾಗಿ ಅತಿ ಹೆಚ್ಚು ಸಾವು ಸಂಭವಿಸಿದ ಇತರ ಪ್ರದೇಶಗಳಲ್ಲಿ 12 ಸಾವುಗಳೊಂದಿಗೆ ಸೀಲಂಪುರ್ ಚೌಕ್, 10 ಸಾವುಗಳೊಂದಿಗೆ ಗಾಜಿಪುರ ವೃತ್ತ ಮತ್ತು 10 ಸಾವುಗಳೊಂದಿಗೆ ಶಿವಾಜಿ ಪಾರ್ಕ್ ಮೆಟ್ರೋ ಸ್ಟೇಷನ್ ಸೇರಿವೆ ಎಂದು ವರದಿ ಹೇಳಿದೆ.

ಇದನ್ನೂ ಓದಿ : US Visa in short time: ಭಾರತೀಯರಿಗೆ ಗುಡ್ ನ್ಯೂಸ್ : ಕಡಿಮೆ ಅವಧಿಯಲ್ಲಿ ಸಿಗಲಿದೆ ಯುಎಸ್ ವೀಸಾ

ಇದನ್ನೂ ಓದಿ : Crane collapsed-4 death: ತಮಿಳುನಾಡಿನಲ್ಲಿ ಕ್ರೇನ್‌ ಕುಸಿದು ನಾಲ್ವರು ದುರ್ಮರಣ : 9 ಮಂದಿಗೆ ಗಾಯ

ಇದನ್ನೂ ಓದಿ : ನಕಲಿ ಮದ್ಯ ಸೇವನೆ : 3 ಸಾವು, 6 ಮಂದಿ ಆಸ್ಪತ್ರೆಗೆ ದಾಖಲು

Record number of accidents: Number of accidents recorded in Delhi

Comments are closed.