Cement container accident: ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಮೆಂಟ್‌ ಕಂಟೈನರ್‌ ಪಲ್ಟಿ: ಕಾರು ಜಖಂ

ಕುಂದಾಪುರ: (Cement container accident) ಸಿಮೆಂಟ್‌ ತುಂಬಿದ ಕಂಟೈನರ್‌ ಪಲ್ಟಿಯಾಗಿ ಹೆದ್ದಾರಿಗೆ ಅಡ್ಡವಾಗಿ ಬಿದ್ದ ಪರಿಣಾಮ ಕಾರೊಂದು ಜಖಂಗೊಂಡಿದ್ದು, ಸಂಚಾರ ವ್ಯತ್ಯಯಗೊಂಡ ಘಟನೆ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರ ಸಂಗಂ ಜಂಕ್ಷನ್‌ ಬಳಿಯಲ್ಲಿ ನಡೆದಿದೆ.

ಕೊಪ್ಪಳದಿಂದ ಸುಮಾರು ಐವತ್ತು ಟನ್‌ ಗಳಿಗಿಂತಲೂ ಹೆಚ್ಚು ಸಿಮೆಂಟ್‌ ತುಂಬಿದ್ದ ಕಂಟೈನರ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ಯಾರ್ಡ್‌ ಗೆ ಸಂಚರಿಸುತ್ತಿತ್ತು. ಇನ್ನೂ ಇದರ ಚಾಲಕ ರಾಹುಲ್‌ ಎನ್ನುವಾತ ಕಂಠಪೂರ್ತಿ ಕುಡಿದು ನಶಯಲ್ಲಿ ವಾಹನ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಗೆ ಢಿಕ್ಕಿಯಾಗಿದ್ದು, ಬಲಬದಿಯ ಹೆದ್ದಾರಿಗೆ ಮಗುಚಿಬಿದ್ದಿದೆ.

ಇದೇ ಸಂದರ್ಭದಲ್ಲಿ ಎದುರಿನಿಂದ ಕಾರು ಬರುತ್ತಿದ್ದು ಕಾರಿಗೂ ಕಂಟೈನರ್‌ ಢಿಕ್ಕಿ ಹೊಡೆದು ಕಾರು ಸಂಪೂರ್ಣವಾಗಿ ಜಖಂ ಗೊಂಡಿದೆ. ಕಂಟೈನರ್‌ ನಲ್ಲಿದ್ದ ಇನ್ನೋರ್ವ ಚಾಲಕ ನಿದ್ರಿಸುತ್ತಿದ್ದ ಎನ್ನಲಾಗಿದೆ. ನಂತರದಲ್ಲಿ ಸ್ಥಳೀಯರ ಸಹಾಯದೊಂದಿಗೆ ಮೂರು ಕ್ರೇನ್‌ ಗಳನ್ನು ಬಳಸಿ ಕಂಟೈನರ್‌ ಅನ್ನು ಮೇಲಕ್ಕೇತ್ತಲಾಯಿತು. ಕಂಟೈನರ್‌ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಹಲವು ಸಮಯಗಳ ಕಾಲ ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಗಿದೆ.

ಘಟನೆಯ ಕುರಿತು ಕುಂದಾಪುರದ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : Crane collapsed-4 death: ತಮಿಳುನಾಡಿನಲ್ಲಿ ಕ್ರೇನ್‌ ಕುಸಿದು ನಾಲ್ವರು ದುರ್ಮರಣ : 9 ಮಂದಿಗೆ ಗಾಯ

ಡ್ಯಾನ್ಸ್ ಕ್ಲಬ್ ಮೇಲೆ ಗುಂಡಿನ ದಾಳಿ : 10 ಮಂದಿ ಸಾವು

ಕ್ಯಾಲಿಫೋರ್ನಿಯಾ: ಅಮೇರಿಕಾದ ಕ್ಯಾಲಿಫೋರ್ನಿಯಾದ ಡ್ಯಾನ್ಸ್‌ ಕ್ಲಬ್‌ ಒಂದರಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಗುಂಡಿನ ದಾಳಿಯಲ್ಲಿ ಹತ್ತು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬಳಿಕ ದಾಳಿಕೋರ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶಂಕಿತ ದಾಳಿಕೋರನನ್ನು ಹು ಕ್ಯಾನ್‌ ಟ್ರಾನ್‌ (72 ವರ್ಷ) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ನಕಲಿ ಮದ್ಯ ಸೇವನೆ : 3 ಸಾವು, 6 ಮಂದಿ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Murder case- body cut into pieces: ಪತ್ನಿಯ ಪ್ರಿಯಕರನ ಕೊಲೆ: ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಕಾಲೋನಿಯಲ್ಲಿ ಎಸೆದ ಪತಿ

Cement container accident: Cement container overturned on Kundapur National Highway: Car injured

Comments are closed.