Mukesh Ambani :ಕೋಟ್ಯಾಧಿಪತಿ ಮುಖೇಶ್ ಅಂಬಾನಿ ರಿಲಯನ್ಸ್ಗೆ ಕಂಪನಿಗೆ ನಾಯಕತ್ವ ಬದಲಾವಣೆಯ ಮಹತ್ವದ ಸುಳಿವೊಂದನ್ನು ಬಿಟ್ಟಯಕೊಟ್ಟಿದ್ದಾರೆ. ದೊಡ್ಡ ಕನಸನ್ನು ಕಾಣಲು ಸೂಕ್ತ ನಾಯಕನ ಅವಶ್ಯಕತೆ ಇದೆ ಎಂದು ಹೇಳುವ ಮೂಲಕ ಮುಖೇಶ್ ಮುಂದಿನ ಪೀಳಿಗೆಗೆ ರಿಲಯನ್ಸ್ ಜವಾಬ್ದಾರಿಯನ್ನು ನೀಡುವ ಬಗ್ಗೆ ಸಂದೇಶ ನೀಡಿದ್ದಾರೆ. ಈ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಯಾರಾಗಬಹುದೆಂಬ ಚರ್ಚೆ ವಾಣಿಜ್ಯ ವಲಯದಲ್ಲಿ ಜೋರಾಗಿದೆ.
ದೇಶದ ಬಹುದೊಡ್ಡ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಉತ್ತರಾಧಿಕಾರಿ ಆಯ್ಕೆ ಕುರಿತಂತೆ 64 ವರ್ಷದ ಮುಕೇಶ್ ಅಂಬಾನಿ ಈ ಹಿಂದೆ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ ಇದೀಗ ನಾಯಕತ್ವ ಪರಿವರ್ತನೆಯು ಪ್ರಕ್ರಿಯೆಯಲ್ಲಿದೆ ಎಂದು ಹೇಳಿದ್ದಾರೆ. ಮುಖೇಶ್ ಅಂಬಾನಿಗೆ ಆಕಾಶ್ , ಇಶಾ ಹಾಗೂ ಅನಂತ್ ಎಂಬ ಮಕ್ಕಳಿದ್ದಾರೆ. ಗ್ರೂಪ್ನ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಅವರ ಜನ್ಮ ವಾರ್ಷಿಕೋತ್ಸವ ದಿನದಂದು ಮಾತನಾಡಿದ ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಂಬರುವ ವರ್ಷಗಳಲ್ಲಿ ವಿಶ್ವದ ಅತ್ಯಂತ ಪ್ರಬಲ ಹಾಗೂ ಭಾರತದ ಪ್ರತಿಷ್ಠಿತ ಬಹುರಾಷ್ಟ್ರ ಕಂಪನಿಗಳಲ್ಲಿ ಒಂದಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇದೇ ವೇಳೆ ಉತ್ತರಾಧಿಕಾರಿ ಆಯ್ಕೆ ವಿಚಾರವಾಗಿ ಮಾತನಾಡಿದ ಮುಕೇಶ್ ಅಂಬಾನಿ, ದೊಡ್ಡ ಕನಸುಗಳು ಹಾಗೂ ಅಸಾಧ್ಯವಾಗಿ ಕಾಣುವ ಗುರಿಗಳನ್ನು ಸಾಧಿಸಲು ಸೂಕ್ತ ನಾಯಕತ್ವದ ಅವಶ್ಯಕತೆ ಇದೆ. ರಿಲಯನ್ಸ್ ಇದೀಗ ನಾಯಕತ್ವ ಬದಲಾವಣೆಯ ಹಂತದಲ್ಲಿದೆ. ಹಿರಿಯರಿಂದ ನನ್ನ ಪೀಳಿಗೆಗೆ ಬಂದಂತೆ ನನ್ನಿಂದ ಯುವ ನಾಯಕರಿಗೆ ರಿಲಯನ್ಸ್ ವರ್ಗಾವಣೆಯಾಗಲಿದೆ. ಎಂದು ಹೇಳಿದರು.
ಉತ್ತರಾಧಿಕಾರಿ ಆಯ್ಕೆ ಕುರಿತಂತೆ ಮುಕೇಶ್ ಅಂಬಾನಿ ನೀಡಿದ ಹೇಳಿಕೆಯ ಸಂಬಂಧ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು ಯಾವುದೇ ಇಮೇಲ್ ಅಥವಾ ಇನ್ನಿತರ ಯಾವುದೇ ಘೋಷಣೆಗಳನ್ನು ಮಾಡಿಲ್ಲ.
ನನ್ನನ್ನು ಸೇರಿದಂತೆ ಎಲ್ಲಾ ಹಿರಿಯರು ಇದೀಗ ರಿಲಯನ್ಸ್ಗೆ ಹೆಚ್ಚು ಸಮರ್ಥ, ಅತ್ಯಂತ ಬದ್ಧತೆಯುಳ್ಳ ಭರವಸೆಯ ಯುವ ನಾಯಕತ್ವದ ಪ್ರತಿಭೆಗೆ ತಲೆಬಾಗಬೇಕಿದೆ. ನಾವು ಆ ನಾಯಕನಿಗೆ ಮಾರ್ಗದರ್ಶನ ನೀಡಬೇಕು. ಅವರನ್ನು ಸಕ್ರಿಯಗೊಳಿಸಬೇಕು. ಅವರನ್ನು ಪ್ರೋತ್ಸಾಹಿಸಬೇಕು. ಹಾಗೂ ಅವರನ್ನು ಸಬಲೀಕರಣಗೊಳಿಸಬೇಕು . ಅವರು ನಮಗಿಂತ ಉತ್ತಮವಾಗಿ ಕೆಲಸ ಮಾಡುತ್ತಾರೆ ಇದನ್ನು ನಾವು ಕುಳಿತು ಶ್ಲಾಘಿಸಬೇಕು ಎಂದು ಹೇಳಿದರು.
Reliance Industries Chairman Mukesh Ambani Hints At Leadership Transition
ಇದನ್ನು ಓದಿ : Raghaveshwara Swamiji Big Relief : ರಾಘವೇಶ್ವರ ಸ್ವಾಮೀಜಿಗೆ ಬಿಗ್ ರಿಲೀಫ್ : ಆರೋಪ ಮುಕ್ತಗೊಳಿಸಿದ ಹೈಕೋರ್ಟ್
ಇದನ್ನೂ ಓದಿ : Goa New Year Alert : ಗೋವಾಕ್ಕೆ ಪಾರ್ಟಿಗೆ ಹೋಗೋ ಮುನ್ನ ಎಚ್ಚರ: ಸರ್ಕಾರ ಜಾರಿಗೆ ತಂದಿದೆ ಖಡಕ್ ರೂಲ್ಸ್