Arvind Kejriwal : ಆಪ್​ ಸರ್ಕಾರವನ್ನು ಕೆಡವಲು ಬಿಜೆಪಿ 800 ಕೋಟಿ ರೂ. ಮೀಸಲಿಟ್ಟಿದೆ : ಅರವಿಂದ ಕೇಜ್ರಿವಾಲ್​ ಗಂಭೀರ ಆರೋಪ

ದೆಹಲಿ : Arvind Kejriwal : ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಪ್​ ಸರ್ಕಾರವನ್ನು ಉರುಳಿಸಲು ಬಿಜೆಪಿಯು 800 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಆರೋಪ ಮಾಡಿದ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ರಾಜಕೀಯ ಹೈಡ್ರಾಮಾ ಜೋರಾಗಿದೆ. ದೆಹಲಿ ಸರ್ಕಾರವನ್ನು ಪತನಗೊಳಿಸಲು ಬಿಜೆಪಿಯು 800 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಒಬ್ಬ ಶಾಸಕನಿಗೆ ಬಿಜೆಪಿಯು 20 ಕೋಟಿ ರೂಪಾಯಿ ಆಫರ್​ ನೀಡಿ ಕುದುರೆ ವ್ಯಾಪಾರ ಮಾಡುತ್ತಿದೆ. ಆದರೆ ಈ 800 ಕೋಟಿ ರೂಪಾಯಿಗಳನ್ನು ಅವರು ಎಲ್ಲಿಂದ ತಂದಿದ್ದಾರೆ ಎಂದು ಸಿಎಂ ಕೇಜ್ರಿವಾಲ್​ ಪ್ರಶ್ನೆ ಮಾಡಿದ್ದಾರೆ.


ನಮ್ಮ ಸರ್ಕಾರ ಸ್ಥಿರವಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಎಲ್ಲಾ ಒಳ್ಳೆಯ ಕಾರ್ಯಗಳು ಮುಂದುವರಿಯುತ್ತದೆ ಎಂದು ಸಿಎಂ ಅರವಿಂದ ಕೇಜ್ರಿವಾಲ್​ ಟ್ವೀಟ್ ಮಾಡಿದ್ದಾರೆ. ಬಿಜೆಪಿಯು ನಮ್ಮ ಡಿಸಿಎಂ ಮನೀಶ್​ ಸಿಸೋಡಿಯಾರಿಗೆ ಪಕ್ಷವನ್ನು ತೊರೆಯುವಂತೆ ಸಂದೇಶ ನೀಡಿದೆ ಎಂದು ಕೇಜ್ರಿವಾಲ್​​​ ಪುನರುಚ್ಛರಿಸಿದ್ದಾರೆ.


ದೆಹಲಿಯಲ್ಲಿ ಪ್ರಸ್ತುತ ನಡೆಯುತ್ತಿರುವ ಸನ್ನಿವೇಶ ಹಾಗೂ ಆಪ್​ ನಾಯಕರ ಮೇಲೆ ನಡೆಯುತ್ತಿರುವ ಸಿಬಿಐ ಹಾಗೂ ಇಡಿ ದಾಳಿಗಳ ಕುರಿತು ಚರ್ಚೆಯನ್ನು ನಡೆಸಲು ಇಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​​ ನಿವಾಸದಲ್ಲಿ ಆಮ್​ ಆದ್ಮಿ ಪಕ್ಷದ ನಾಯಕರು ಚರ್ಚೆಯನ್ನು ನಡೆಸಿದ್ದಾರೆ. ಆಪ್​​ನ ಕೆಲವು ಶಾಸಕರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅರವಿಂದ ಕೇಜ್ರಿವಾಲ್​ ಆರೋಪಿಸಿದ್ದಾರೆ.


ಮನೀಶ್​ ಸಿಸೋಡಿಯಾರಿಗೆ ಬಿಜೆಪಿ ಸಂದೇಶ ರವಾನಿಸಿದ್ದು ಆಪ್​​ ಹಾಗೂ ಅರವಿಂದ್​ ಕೇಜ್ರಿವಾಲ್​ರನ್ನು ತೊರೆಯುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಆಪ್​​ನ ಕೆಲವು ಶಾಸಕರನ್ನು ಸೇರಿಸಿಕೊಂಡು ಬಿಜೆಪಿ ಸೇರಬೇಕೆಂದು ಸೂಚನೆ ನೀಡಿದ್ದಾರೆ. ಬಿಜೆಪಿಗೆ ಬಂದಲ್ಲಿ ನಿಮಗೆ ದೆಹಲಿ ಸಿಎಂ ಸ್ಥಾನವನ್ನು ನೀಡುತ್ತೇವೆ. ಅಲ್ಲದೇ ನಿಮ್ಮ ಮೇಲೆ ಸದ್ಯ ಇರುವ ಎಲ್ಲಾ ಪ್ರಕರಣಗಳನ್ನೂ ಹಿಂಪಡೆಯುತ್ತೇವೆ ಎಂದು ಆಫರ್​ ನೀಡಿದ್ದರು ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಆರೋಪಿಸಿದ್ದಾರೆ.


ನನ್ನ ಹಿಂದಿನ ಜನ್ಮದಲ್ಲಿ ನಾನು ಯಾವ ಒಳ್ಳೆಯ ಕೆಲಸ ಮಾಡಿದ್ದೇನೋ ಗೊತ್ತಿಲ್ಲ. ಈ ಜನ್ಮದಲ್ಲಿ ನನಗೆ ಮನೀಷ್​ ಸಿಸೋಡಿಯಾರಂತಹ ವ್ಯಕ್ತಿ ಸಿಕ್ಕಿದ್ದಾರೆ. ಅವರು ಬಿಜೆಪಿಯ ಎಲ್ಲಾ ಆಮಿಷಗಳನ್ನು ತಿರಸ್ಕರಿಸಿ ನನ್ನೊಂದಿಗೆ ನಿಂತಿದ್ದಾರೆ. ಬಿಜೆಪಿಗೆ ಸೇರಲು ನಮ್ಮ ಶಾಸಕರು ಹಣದ ಆಮಿಷ ಒಡ್ಡುತ್ತಿದ್ದಾರೆ. ಆಪ್​ ತೊರೆದು ಬಿಜೆಪಿ ಸೇರಲು ಬಿಜೆಪಿಯು ಶಾಸಕರಿಗೆ ತಲಾ 20 ಕೋಟಿ ರೂಪಾಯಿಗಳನ್ನು ನೀಡುತ್ತಿದೆ ಎಂಬ ಸುದ್ದಿ ಸಿಕ್ಕಿದೆ. ಆದರೆ ಆಪ್​ನ ಒಬ್ಬನೇ ಒಬ್ಬ ಶಾಸಕ ಕೂಡ ಬಿಜೆಪಿ ಆಫರ್​ ಮುಟ್ಟಿಲ್ಲ ಎನ್ನುವುದು ನನಗೆ ಸಂತಸದ ವಿಷಯವಾಗಿದೆ ಎಂದು ಅರವಿಂದ ಕೇಜ್ರಿವಾಲ್​ ಹೇಳಿದ್ದಾರೆ.

ಇದನ್ನು ಓದಿ : Music Therapy : ಸಂಗೀತದಿಂದ ಸ್ವಾಸ್ಥ್ಯ : ಸಾಮಾನ್ಯ ಮಾನಸಿಕ ಆರೋಗ್ಯ ಸುಧಾರಣೆಗೆ ಇದು ಬಹಳ ಮುಖ್ಯ

ಇದನ್ನೂ ಓದಿ : Minister R. Ashok : ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಬಗ್ಗೆ ಯೋಚಿಸಿಲ್ಲ : ಸಚಿವ ಆರ್​.ಅಶೋಕ್​

Rs 800 Crore to ‘Buy’ 40 MLAs: Arvind Kejriwal Fires Fresh Salvo at BJP | KEY POINTS

Comments are closed.