RSS Offices in Lucknow : ಆರ್​ಎಸ್​ಎಸ್​ ಕಚೇರಿಗಳ ಮೇಲೆ ಬಾಂಬ್​ ಬೆದರಿಕೆ ಹಿನ್ನೆಲೆ ಎಫ್​ಐಆರ್​ ದಾಖಲು

RSS Offices in Lucknow : ಲಕ್ನೋ ಹಾಗೂ ಉನ್ನಾವೋದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್​ಎಸ್​ಎಸ್​) ಕಚೇರಿಗಳಿಗೆ ಬಾಂಬ್​ ಬೆದರಿಕೆ ಕರೆ ಬಂದ ಕೆಲವೇ ಗಂಟೆಗಳ ಬಳಿಕ ಇಂದು ಬೆಳಗ್ಗೆ ಲಕ್ನೋದ ಮಡಿಯಾನ್​ ಪೊಲೀಸ್​ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಹೇಳಿಕೆ ನೀಡಿರುವ ಲಕ್ನೋ ಠಾಣಾ ಪೊಲೀಸರು, ಲಕ್ನೋ ಹಾಗೂ ಉನ್ನಾವ್‌ನಲ್ಲಿರುವ ಆರ್‌ಎಸ್‌ಎಸ್ ಕಚೇರಿಗೆ ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ಮಡಿಯಾನ್ ಪೊಲೀಸ್​ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ನಿನ್ನೆ ರಾತ್ರಿ 8 ಗಂಟೆಗೆ ಆರ್‌ಎಸ್‌ಎಸ್ ಕಚೇರಿಗಳನ್ನು ಸ್ಫೋಟಿಸುವುದಾಗಿ ವಾಟ್ಸಾಪ್ ಸಂದೇಶ ರವಾನಿಸಲಾಗಿತ್ತು. ಸೈಬರ್ ಸೆಲ್ ಸಹಾಯದಿಂದ, ಸಂದೇಶ ಕಳುಹಿಸಿದ ಸಂಖ್ಯೆಯನ್ನು ಪತ್ತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಸೈಬರ್ ಸೆಲ್ ಸಹಾಯದಿಂದ ಮೊಬೈಲ್​ ಸಂಖ್ಯೆಯನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸ್ ತಂಡವು ಹೇಳಿದೆ.ಸೋಮವಾರ ರಾತ್ರಿ 8 ಗಂಟೆಗೆ ವಾಟ್ಸಾಪ್‌ನಲ್ಲಿ ಲಕ್ನೋ ಮತ್ತು ಉನ್ನಾವ್‌ನಲ್ಲಿರುವ ಆರ್‌ಎಸ್‌ಎಸ್ ಕಚೇರಿಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಸಂದೇಶಗಳನ್ನು ಸಂಘದ ಸದಸ್ಯ ನೀಲಕಂಠ ತಿವಾರಿಗೆ ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಕಳುಹಿಸಲಾಗಿದೆ.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಾಗ್ಪುರದಲ್ಲಿ ಮೂರನೇ ವರ್ಷದ ಸಂಘ ಶಿಕ್ಷಾ ವರ್ಗದ (ಅಧಿಕಾರಿಗಳ ತರಬೇತಿ ಶಿಬಿರ) ಸಮಾರೋಪ ಸಮಾರಂಭದಲ್ಲಿ ಮಾತನಾಡುವಾಗ ಕೋಮು ಸೌಹಾರ್ದತೆಗಾಗಿ ಕರೆ ನೀಡಿದ ಕೆಲವು ದಿನಗಳ ನಂತರ ಈ ಬೆದರಿಕೆಗಳನ್ನು ಹಾಕಲಾಗಿದೆ. ಯಾವುದೇ ಸಮುದಾಯವು ಉಗ್ರವಾದವನ್ನು ಆಶ್ರಯಿಸಬಾರದು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್​ ಹೇಳಿದ್ದರು.

“ಪ್ರತಿಯೊಬ್ಬರೂ ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಗೌರವಿಸಬೇಕು. ಹೃದಯದಲ್ಲಿ, ಮಾತಿನಲ್ಲಿ ಅಥವಾ ಕೃತಿಯಲ್ಲಿ ಉಗ್ರವಾದ ಇರಬಾರದು. ಎರಡೂ ಕಡೆಯಿಂದ ಬೆದರಿಕೆಯ ಮಾತುಗಳು ಇರಬಾರದು” ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದರು.

ಇದನ್ನು ಓದಿ : accident in barmer : ಎಸ್​ಯುವಿ – ಟ್ರಕ್​ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 8 ಜನ ದುರ್ಮರಣ

ಇದನ್ನೂ ಓದಿ : Andhra Pradesh:  ತಿರುಪತಿ ತಿರುಮಲ ದೇವಸ್ಥಾನದ ಕಾಣಿಕೆಯಲ್ಲಿ ಹೊಸ ದಾಖಲೆ : ₹ 10 ಕೋಟಿ ದೇಣಿಗೆ ನೀಡಿದ ಭಕ್ತರು

RSS Offices in Lucknow, Unnao Receive Bomb Threat Over WhatsApp Messages; UP Police Registers Case

Comments are closed.