ರೋಹಿತ್‌ ಶರ್ಮಾ ಬದಲು ಹಾರ್ದಿಕ್ ಪಾಂಡ್ಯ ನಾಯಕ : 4 ಲಕ್ಷ ಫಾಲೋವರ್ಸ್ ಕಳೆದುಕೊಂಡ ಮುಂಬೈ ಇಂಡಿಯನ್ಸ್

Hardik Pandya Captain : ಇಂಡಿಯನ್‌ ಪ್ರೀಮಿಯರ್‌ ಲೀಗ್‌ (Indian premier league 2024)ಮುಂಬರುವ ಆವೃತ್ತಿಗೆ ಮುಂಬೈ ಇಂಡಿಯನ್ಸ್‌ ತಂಡ ರೋಹಿತ್‌ ಶರ್ಮಾ (Rohit Sharma) ಅವರನ್ನು ಕೈಬಿಟ್ಟು ಹಾರ್ದಿಕ್‌ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಕ ಮಾಡಿದೆ.

Hardik Pandya Captain : ಇಂಡಿಯನ್‌ ಪ್ರೀಮಿಯರ್‌ ಲೀಗ್‌ (Indian premier league 2024)ಮುಂಬರುವ ಆವೃತ್ತಿಗೆ ಮುಂಬೈ ಇಂಡಿಯನ್ಸ್‌ ತಂಡ ರೋಹಿತ್‌ ಶರ್ಮಾ (Rohit Sharma) ಅವರನ್ನು ಕೈಬಿಟ್ಟು ಹಾರ್ದಿಕ್‌ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಕ ಮಾಡಿದೆ. ಹಾರ್ದಿಕ್‌ ಪಾಂಡ್ಯ ನೇಮಕದ ಕೆಲವೇ ಕ್ಷಣಗಳಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ಟ್ವೀಟರ್‌ನಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಕಳೆದುಕೊಂಡಿದೆ.

IPL2024ರ ಹರಾಜಿಗೂ ಮೊದಲೇ ಗುಜರಾತ್‌ನ ಟೈಟಾನ್ಸ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ ತಂಡ ಖರೀದಿ ಮಾಡಿತ್ತು. ಡಿಸೆಂಬರ್ 15 ರಂದು ಮುಂಬೈ ಇಂಡಿಯನ್ಸ್ ಹಾರ್ದಿಕ್‌ ಪಾಂಡ್ಯ ಅವರನ್ನು ನಾಯಕನನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ. ಇದು ರೋಹಿತ್‌ ಶರ್ಮಾ ಅವರ ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿದೆ.

ಅತೀ ಹೆಚ್ಚು ಬಾರಿ ಐಪಿಎಲ್‌ ಟ್ರೋಫಿಯನ್ನು ಗೆಲ್ಲಿಸಿಕೊಟ್ಟ ರೋಹಿತ್‌ ಶರ್ಮಾ ಅವರನ್ನು ಕೈಬಿಟ್ಟು ಹಾರ್ದಿಕ್‌ ಪಾಂಡ್ಯ ಅವರನ್ನು ತಂಡದ ನಾಯಕತ್ವ ನೀಡಿರುವ ಮುಂಬೈ ಇಂಡಿಯನ್ಸ್‌ ತಂಡದ ನಿರ್ಧಾರ ಅಭಿಮಾನಿಗಳಿಗೆ ಸಹಜವಾಗಿ ಬೇಸರ ಮೂಡಿಸಿದೆ. ಹಾರ್ದಿಕ್‌ ಪಾಂಡ್ಯ ನಾಯಕನಾಗಿ ನೇಮಕವಾಗುತ್ತಲೇ ನಾಲ್ಕು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಮುಂಬೈ ಇಂಡಿಯನ್ಸ್‌ಗೆ ಟಾಟಾ ಹೇಳಿದ್ದಾರೆ.

indian premier league 2024 Mumbai Indians Lost 4 Lakh Followers After Hardik Pandya Become Captain Replace Rohit Sharma
Image Credit to Original Source

ರೋಹಿತ್‌ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗೆ ಇಳಿಸುತ್ತಿದ್ದಂತೆಯೇ ಹಲವು ಅಭಿಮಾನಿಗಳು ಮುಂಬೈ ಇಂಡಿಯನ್ಸ್‌ ತಂಡದ ಬಗೆಗಿನ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಡಿಸೆಂಬರ್ 15 ರ ಸಂಜೆ ಕೇವಲ ಒಂದು ಗಂಟೆಯ ಅವಧಿಯಲ್ಲಿ, ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಅನುಯಾಯಿಗಳ ಸಂಖ್ಯೆ 8.6 ಮಿಲಿಯನ್‌ನಿಂದ 8.2 ಮಿಲಿಯನ್‌ಗೆ ಇಳಿದಿದೆ.

ಇದನ್ನೂ ಓದಿ : IPL 2024 : ಡೆಲ್ಲಿ ಕ್ಯಾಪಿಟಲ್ಸ್‌ಗೆ ರಿಷಬ್ ಪಂತ್ ಇಂಪ್ಯಾಕ್ಟ್ ಪ್ಲೇಯರ್ ?

ರೋಹಿತ್‌ ಶರ್ಮಾ ಕಳೆದ ಮೂರು ಆವೃತ್ತಿಯಲ್ಲಿಯೂ ಕಳಪೆ ಪ್ರದರ್ಶನ ನೀಡಿದ್ದಾರೆ. ಇದೇ ಕಾರಣದಿಂದಲೇ ಅವರಿಗೆ ನಾಯಕತ್ವದಿಂದ ಕೋಕ್‌ ನೀಡಲಾಗಿದೆ ಎನ್ನಲಾಗುತ್ತಿದೆ. ಮುಂಬೈ ಇಂಡಿಯನ್ಸ್‌ ತಂಡ 2019 ಮತ್ತು 2020 ರಲ್ಲಿ ಬ್ಯಾಕ್-ಟು-ಬ್ಯಾಕ್ ಐಪಿಎಲ್‌ ಪ್ರಶಸ್ತಿಯನ್ನು ಜಯಿಸಿತ್ತು. ಐದು ಬಾರಿ ಐಪಿಎಲ್‌ ಪ್ರಶಸ್ತಿ ಪಡೆಯುವ ಮೂಲಕ ಐತಿಹಾಸಿಕ ದಾಖಲೆಯನ್ನು ಬರೆದಿದೆ.

indian premier league 2024 Mumbai Indians Lost 4 Lakh Followers After Hardik Pandya Become Captain Replace Rohit Sharma
Image Credit to Original Source

ಗುಜರಾತ್‌ ಟೈಟಾನ್ಸ್‌ ತಂಡದ ನಾಯಕನಾಗಿ ಹಾರ್ದಿಕ್‌ ಪಾಂಡ್ಯ ಕಳೆದ ಎರಡು ವರ್ಷಗಳಿಂದಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಗುಜರಾತ್‌ ಟೈಟಾನ್ಸ್‌ ತಂಡದ ಐಪಿಎಲ್‌ನ ಮೊದಲ ಆವೃತ್ತಿಯಲ್ಲಿಯೇ ಐಪಿಎಲ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಅಲ್ಲದೇ ಎರಡನೇ ಆವೃತ್ತಿಯಲ್ಲಿ ರನ್ನರ್ಸ್‌ ಅಪ್‌ ಪ್ರಶಸ್ತಿ ಪಡೆದುಕೊಂಡಿದೆ. ಹಾರ್ದಿಕ್‌ ಪಾಂಡ್ಯ ನಾಯಕತ್ವಕ್ಕೆ ಮನಸೋತಿರುವ ಮುಂಬೈ ಪಾಂಡ್ಯ ಅವರನ್ನೇ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಇದನ್ನೂ ಓದಿ : ವಿರಾಟ್‌ ಕೊಹ್ಲಿ ರಿಯಲ್‌ ಕಿಂಗ್‌ ! 25 ವರ್ಷದಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್‌ ಆದ ಕ್ರಿಕೆಟಿಗ ಕಿಂಗ್‌ ಕೊಹ್ಲಿ

15 ಕೋಟಿ ರೂಪಾಯಿ ನೀಡಿ ಹಾರ್ದಿಕ್‌ ಪಾಂಡ್ಯ ಅವರನ್ನು ಗುಜರಾತ್‌ ಟೈಟಾನ್ಸ್‌ ತಂಡದಿಂದ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಗುಜರಾತ್‌ ಟೈಟಾನ್ಸ್‌ ತಂಡದಿಂದ ಹಾರ್ದಿಕ್‌ ಪಾಂಡ್ಯವನ್ನು ಮುಂಬೈ ಇಂಡಿಯನ್ಸ್‌ ತಂಡ ಖರೀದಿಸಿದ ಬೆನ್ನಲ್ಲೇ ಸಾಕಷ್ಟು ನಿರೀಕ್ಷೆಯನ್ನು, ತಂಡದಲ್ಲಿ ಬದಲಾವಣೆ ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ಆ ನಿರೀಕ್ಷೆ ನಿಜವಾಗಿದೆ.

indian premier league 2024 Mumbai Indians Lost 4 Lakh Followers After Hardik Pandya Become Captain Replace Rohit Sharma
Image Credit to Original Source

ಹಾರ್ದಿಕ್ ಪಾಂಡ್ಯ IPL 2024 ರಲ್ಲಿ ಮುಂಬೈ ಇಂಡಿಯನ್ಸ್‌ನ ಹೊಸ ನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. 2013 ರಿಂದ ಮುಂಬೈ ಇಂಡಿಯನ್ಸ್‌ಗೆ ಐದು IPL ಪ್ರಶಸ್ತಿಗಳನ್ನು ತಂದುಕೊಟ್ಟ ರೋಹಿತ್ ಶರ್ಮಾ ಅವರ ನಾಯಕತ್ವಕ್ಕೆ ಕೋಕ್‌ ಕೊಡಿಸಿದ್ದಾರೆ. ಈ ಬದಲಾವಣೆಯಿಂದ ಕ್ರಿಕೆಟ್ ಪ್ರೇಮಿಗಳು ಸಂತಸಗೊಂಡಿದ್ದಾರೆ. ಆದರೆ ರೋಹಿತ್‌ ಶರ್ಮಾ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಇದನ್ನೂ ಓದಿ : IPL 2024 : ಐಪಿಎಲ್ 2024 ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ರುತುರಾಜ್ ಗಾಯಕ್ವಾಡ್ ನಾಯಕ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಸದ್ಯ ರೋಹಿತ್ ಶರ್ಮಾಗೆ ಇದು ಯುಗ ಅಂತ್ಯವಾಗಿದೆ. ಐಪಿಎಲ್ ಇತಿಹಾಸದಲ್ಲಿ ಗೆಲುವಿನ ಶೇಕಡಾವಾರು ಲೆಕ್ಕದಲ್ಲಿ ಅವರು ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ 158 ಪಂದ್ಯಗಳನ್ನು ಆಡಿದ್ದು ಈ ಪೈಕಿ 89 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ.

indian premier league 2024 Mumbai Indians Lost 4 Lakh Followers After Hardik Pandya Become Captain Replace Rohit Sharma

Comments are closed.