Sabarimala Reopen : ಜುಲೈ 17 ರಿಂದ ಶಬರಿಮಲೆ ಅಯ್ಯಪ್ಪ ದರ್ಶನ : ಕೋವಿಡ್‌ ಲಸಿಕೆ ಅಥವಾ ಟೆಸ್ಟ್‌ ರಿಪೋರ್ಟ್‌ ಕಡ್ಡಾಯ

ಶಬರಿಮಲೆ : ಧರ್ಮಶಾಸ್ತ ಶಬರಿಮಲೆಯ ಅಯ್ಯಪ್ಪನ ಭಕ್ತರಿಗೆ ತಿರುವಾಂಕೂರು ದೇವಸ್ವ ಮಂಡಳಿ ಗುಡ್‌ ನ್ಯೂಸ್‌ ಕೊಟ್ಟಿದೆ. ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಜುಲೈ 17 ರಿಂದ 21ರ ವರೆಗೆ ತೆರೆಯಲಾಗುತ್ತಿದ್ದು, ಭಕ್ತರು ಅಯ್ಯಪ್ಪನ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಶಬರಿಮಲೆಯ ಅಯ್ಯಪ್ಪನ ಸನ್ನಧಿಗೆ ಭಕ್ತರ ಪ್ರವೇಶಕ್ಕೆ ನಿರಾಕರಿಸಲಾಗಿತ್ತು. ಆದ್ರೀಗ ತಿಂಗಳ ಪೂಜೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜುಲೈ 17 ರಿಂದ ಐದು ದಿನಗಳ ಕಾಲ ದೇವಸ್ಥಾನವನ್ನು ತೆರೆಯುವುದಾಗಿ ತಿರುವಾಂಕೂರು ದೇವಸ್ವಂ ಮಂಡಳಿ ತಿಳಿಸಿದೆ.

ಅಯ್ಯಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶಗಳನ್ನು ಕಲ್ಪಿಸಲಾಗಿದ್ದರೂ ಭಕ್ತರು ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇ ಬೇಕು. ಐದು ದಿನಗಳ ಕಾಲ ಮಾತ್ರ ಭಕ್ತರ ಪ್ರವೇಶಕ್ಕೆ ಅವಕಾಶವಿರುವ ಹಿನ್ನೆಲೆಯಲ್ಲಿ ಆನ್‍ಲೈನ್ ಮೂಲಕ ಬುಕಿಂಗ್ ಮಾಡಿಕೊಂಡ ಗರಿಷ್ಠ 5 ಸಾವಿರ ಭಕ್ತರಿಗೆ ಮಾತ್ರವೇ ದರ್ಶನ ಭಾಗ್ಯ ಸಿಗಲಿದೆ. ಭಕ್ತರು ಕೊರೊನಾ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಅಥವಾ 48 ಗಂಟೆಗೆ ಮೊದಲು ಮಾಡಿಸಿರುವ ಕೊರೊನಾ ಟೆಸ್ಟ್‌ ರಿಪೋರ್ಟ್‌ ಹೊಂದಿರಲೇ ಬೇಕು.

ಅಯ್ಯಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ನೂಕು ನುಗ್ಗಲು ಆಗದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗುತ್ತಿದೆ. ಅದ್ರಲ್ಲೂ ತಿರುವಾಂಕೂರು ದೇವಸ್ವಂ ಮಂಡಳಿ ಹಾಗೂ ಕೇರಳ ಪೊಲೀಸ್‌ ಇಲಾಖೆ ವೆಬ್‌ ಸೈಟ್‌ ಲಾಂಚ್‌ ಮಾಡಿದ್ದು, ಭಕ್ತರು ಈ ಆನ್‌ಲೈನ್‌ ಪೋರ್ಟ್‌ ಮೂಲಕವೇ ಪ್ರಸಾದ, ಪೂಜೆ, ವಚ್ರ್ಯೂಲ್ ಕ್ಯೂ, ವಾಸ್ತವ್ಯ, ಕಾಣಿಕೆ ಬುಕ್‌ ಮಾಡಬಹುದಾಗಿದೆ. ಭಕ್ತರು ಆನ್‌ಲೈನ್‌ ಮೂಲಕ ರಿಜಿಸ್ಟ್ರೇಶನ್ ಮಾಡಲು ಮೊಬೈಲ್ ನಂಬರ್, ಇ-ಮೇಲ್ ಐಡಿ ಕಡ್ಡಾಯವಾಗಿದೆ.

Comments are closed.