ಕಬ್ಬು ತಿಂದ್ರೆ ಕ್ಯಾನ್ಸರ್ ಹತ್ತಿರಕ್ಕೂ ಸುಳಿಯೋದಿಲ್ಲ !

0
  • ರಕ್ಷಾ ಬಡಾಮನೆ

ನಾವು ಸೇವಿಸೋ ನಿಸರ್ಗದತ್ತವಾದ ಆಹಾರ ಸೇವನೆ ಆರೋಗ್ಯಕ್ಕೆ ಅನುಕೂಲವನ್ನು ಮಾಡುತ್ತದೆ. ಅದ್ರಲ್ಲಿ ನಾವು ತಿನ್ನೋ ಕಬ್ಬು ಕೆಲವರಿಗೆ ಬದುಕಾದ್ರೆ, ಇನ್ನೂ ಕೆಲವರಿಗೆ ಸವಿರುಚಿ. ಆದರೆ ಎಲ್ಲರ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡುತ್ತದೆ ಇದೇ ಕಬ್ಬು. ನಾನಾ ಸ್ವಾದಗಳಲ್ಲಿ ರುಚಿ ಹೆಚ್ಚಿಸುವ ಕಬ್ಬಿನ ಹಾಲು ಹಲವಾರು ಕಾಯಿಲೆಗಳನ್ನು ನಿಯಂತ್ರಿಸುತ್ತದೆ.

Sugar cane 1
ಕಬ್ಬು ತಿಂದ್ರೆ ಕ್ಯಾನ್ಸರ್ ಹತ್ತಿರಕ್ಕೂ ಸುಳಿಯೋದಿಲ್ಲ! 10

ಕಾಮಾಲೆ, ಮೂತ್ರಪಿಂಡದ ಕಲ್ಲಿನ ಸಮಸ್ಯೆ ಮತ್ತಿತರ ಆರೋಗ್ಯ ತೊಂದರೆಗಳನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಅಲ್ಲದೇ ಕಬ್ಬಿನ ಹಾಲನ್ನು ಕುಡಿಯೋದ್ರಿಂದ ಕ್ಯಾನ್ಸರ್ ನಮ್ಮ ಹತ್ರಿರಕ್ಕೂ ಸುಳಿಯೋದಿಲ್ಲ. ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟುಗಳು, ಪ್ರೋಟೀನ್, ಗಂಧಕ, ಕ್ಯಾಲ್ಸಿಯಂ, ಕಬ್ಬಿಣ, ಸತು ಮತ್ತು ಪೊಟ್ಯಾಶಿಯಂ ನಂತಹ ಖನಿಜಗಳ ಸಹಿತ ಹಲವಾರು ಅವಶ್ಯಕ ಪೋಷಕಾಂಶಗಳಿವೆ. ಸಕ್ಕರೆ ಬೆರೆಸಿದ ಹಣ್ಣಿನ ರಸಗಳಿಗಿಂತಲೂ ಕಬ್ಬಿನ ಹಾಲನ್ನು ಸೇವಿಸುವುದೇ ಹೆಚ್ಚು ಆರೋಗ್ಯಕರ.

Sugar 13
ಕಬ್ಬು ತಿಂದ್ರೆ ಕ್ಯಾನ್ಸರ್ ಹತ್ತಿರಕ್ಕೂ ಸುಳಿಯೋದಿಲ್ಲ! 11

ಕಬ್ಬಿನ ಹಾಲು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಕಬ್ಬಿನ ಹಾಲಿನಲ್ಲಿರುವ ಕ್ಯಾಲ್ಸಿಯಂ, ಮೆಗ್ನೇಶಿಯಂ, ಪೊಟ್ಯಾಶಿಯಮ್, ಕಬ್ಬಿಣ ಹಾಗೂ ಮ್ಯಾಂಗನೀಸ್ ಮೊದಲಾದ ಖನಿಜಗಳಿರುವ ಕಾರಣ ಇದು ಕೊಂಚ ಕ್ಷಾರೀಯವಾಗಿದೆ. ಅಲ್ಲದೇ ಇದರಲ್ಲಿರುವ ಫ್ಲೇವ ನಾಯ್ಡುಗಳು ಕ್ಯಾನ್ಸರ್ ಉಂಟು ಮಾಡುವ ಪ್ರೀರ್ಯಾಡಿಕಲ್ ಕಣಗಳ ವಿರುದ್ಧ ಹೋರಾಡುತ್ತದೆ. ಹೀಗಾಗಿ ಸ್ತನ ಹಾಗೂ ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್ ನಮ್ಮ ಹತ್ತಿರಕ್ಕೂ ಸುಳಿಯೋದಿಲ್ಲ.

Sugar 7
ಕಬ್ಬು ತಿಂದ್ರೆ ಕ್ಯಾನ್ಸರ್ ಹತ್ತಿರಕ್ಕೂ ಸುಳಿಯೋದಿಲ್ಲ! 12

ಕಾಮಾಲೆ ರೋಗದಿಂದ ಬಳಲುತ್ತಿದ್ದವರಿಗೆ ಕಬ್ಬು ಉತ್ತಮ. 1 ಲೋಟ ಕಬ್ಬಿನ ರಸಕ್ಕೆ 2 ಚಮಚ ನಿಂಬೆರಸವನ್ನು ಸೇರಿಸಿ ಸೇವಿಸಿದರೆ ಕಾಮಾಲೆ ಕಡಿಮೆಯಾಗುತ್ತದೆ. 1 ಲೋಟ ಕಬ್ಬಿನ ರಸಕ್ಕೆ 60 ಮಿಲಿ ಮೂಲಂಗಿ ರಸವನ್ನು ಸೇರಿಸಿ ದಿನಕ್ಕೆ 2 ಬಾರಿ ಸೇವಿಸಿದರೆ ನಾಯಿಕೆಮ್ಮು ಗುಣವಾಗುತ್ತದೆ. ರಕ್ತ ಶುದ್ಧಿಗಾಗಿ ಕಬ್ಬಿನ ರಸವನ್ನು ಊಟ ಆದ ನಂತರ ಸೇವಿಸಬೇಕು. ಹೀಗೆ 1/2 ಬಟ್ಟಲು ಕಬ್ಬಿನ ರಸಕ್ಕೆ 1/2 ಬಟ್ಟಲು ದಾಳಿಂಬೆ ರಸ ಸೇರಿಸಿ ಸೇವಿಸಿದರೆ ಭೇದಿ ನಿಲ್ಲುತ್ತದೆ.

Sugar 14
ಕಬ್ಬು ತಿಂದ್ರೆ ಕ್ಯಾನ್ಸರ್ ಹತ್ತಿರಕ್ಕೂ ಸುಳಿಯೋದಿಲ್ಲ! 13

ಕಬ್ಬಿನ ಹಾಲಿನ ಸೇವನೆಯಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಥವಾ LDL ಪ್ರಮಾಣ ಕಡಿಮೆಯಾಗುತ್ತದೆ. ಇದರ ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುವ ಟ್ರೈಗ್ಲಿಸರೈಡ್ ಗಳ ಪ್ರಮಾಣವನ್ನು ಸಂತುಲಿತ ಮಟ್ಟದಲ್ಲಿರಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

Sugar 6
ಕಬ್ಬು ತಿಂದ್ರೆ ಕ್ಯಾನ್ಸರ್ ಹತ್ತಿರಕ್ಕೂ ಸುಳಿಯೋದಿಲ್ಲ! 14

ಹಲ್ಲು ಮತ್ತು ಮೂಳೆಗಳನ್ನು ದೃಢಗೊಳಿಸುತ್ತದೆ ಕಬ್ಬಿನ ಹಾಲನ್ನು ಕುಡಿಯುವುದಕ್ಕಿಂತ ಕಬ್ಬಿನ ಜಲ್ಲೆಯನ್ನು ಜಗಿದು ರಸ ಹೀರುವ ಮೂಲಕ ಹಲ್ಲು ಮತ್ತು ಒಸಡುಗಳು ಗಟ್ಟಿಗೊಳ್ಳುತ್ತವೆ. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳನ್ನು ದೃಢಗೊಳಿಸಲು ನೆರವಾಗುತ್ತದೆ.

Sugar
ಕಬ್ಬು ತಿಂದ್ರೆ ಕ್ಯಾನ್ಸರ್ ಹತ್ತಿರಕ್ಕೂ ಸುಳಿಯೋದಿಲ್ಲ! 15

ಬಾಯಿಯ ದುರ್ವಾಸನೆ ನಿವಾರಿಸುತ್ತದೆ ನಿಮಗೆ ಬಾಯಿಯಲ್ಲಿ ದುರ್ವಾಸನೆಯ ತೊಂದರೆ ಇದೆಯೇ? ಹಾಗಾದರೆ ಇಂದಿನಿಂದಲೇ ಕಬ್ಬಿನ ಹಾಲನ್ನು ಕುಡಿಯಲು ಪ್ರಾರಂಭಿಸಿ. ಇದರಲ್ಲಿರುವ ಖನಿಜಗಳು ಒಸಡು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ ಹಾಗೂ ಈ ಮೂಲಕ ಆಹಾರಕಣಗಳು ಸಂಗ್ರಹಗೊಳ್ಳದೇ ಬಾಯಿಯ ದುರ್ವಾಸನೆ ಇಲ್ಲವಾಗುತ್ತದೆ.

Sugar 11
ಕಬ್ಬು ತಿಂದ್ರೆ ಕ್ಯಾನ್ಸರ್ ಹತ್ತಿರಕ್ಕೂ ಸುಳಿಯೋದಿಲ್ಲ! 16

ಕಬ್ಬಿನರಸದಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದ ಹಲವಾರು ಸೋಂಕುಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ ಹಾಗೂ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ವಿಶೇಷವಾಗಿ ಯಕೃತ್ ಗೆ ಕಾಮಾಲೆ ರೋಗಕ್ಕೆ ಅತ್ಯುತ್ತಮ ರಕ್ಷಣೆ ಒದಗಿಸುತ್ತದೆ. ಕಬ್ಬಿನ ಹಾಲಿನ ಸೇವನೆಯಿಂದ ದೇಹದ ಪೋಷಕಾಂಶಗಳ ಕೊರತೆ ನೀಗುತ್ತದೆ ಹಾಗೂ ಇದರಲ್ಲಿರುವ ಪ್ರೋಟೀನುಗಳು ಘಾಸಿಗೊಂಡಿದ್ದ ಜೀವಕೋಶಗಳನ್ನು ಪುನರ್ಜೀವಗೊಳಿಸಲು ನೆರವಾಗುತ್ತದೆ.

Sugar 8
ಕಬ್ಬು ತಿಂದ್ರೆ ಕ್ಯಾನ್ಸರ್ ಹತ್ತಿರಕ್ಕೂ ಸುಳಿಯೋದಿಲ್ಲ! 17

ಕಿಡ್ನಿಯಲ್ಲಿ ಕಲ್ಲನ್ನು ಹೋಗಲಾಡಿಸುತ್ತದೆ ಕಬ್ಬಿನ ಹಾಲಿನ ಅತ್ಯಂತ ಪ್ರಯೋಜನಕಾರಿಯಾದ ಗುಣವೆಂದರೆ ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸುತ್ತದೆ. ಕಿಡ್ನಿಯಲ್ಲಿ ಕಲ್ಲಿದ್ದವರು ಇದನ್ನು ಪ್ರತಿದಿನ ಕುಡಿದರೆ ಆ ಸಮಸ್ಯೆಯಿಂದ ಗುಣಮುಖವಾಗಲು ಸಹಕಾರಿಯಾಗುತ್ತದೆ.

Sugar 4
ಕಬ್ಬು ತಿಂದ್ರೆ ಕ್ಯಾನ್ಸರ್ ಹತ್ತಿರಕ್ಕೂ ಸುಳಿಯೋದಿಲ್ಲ! 18

ಮೂತ್ರನಾಳದ ಸೋಂಕು ಹಾಗೂ ಲೈಂಗಿಕ ರೋಗಗಳ ನೋವನ್ನು ಕಡಿಮೆ ಮಾಡುತ್ತದೆ ಒಂದು ವೇಳೆ ನೀವು ಸತತವಾಗಿ ಮೂತ್ರನಾಳದ ಸೋಂಕಿನಿಂದ ಅಥವಾ ಮೂತ್ರಪಿಂಡಗಳಲ್ಲಿ ಕಲ್ಲು ಅಥವಾ ಲೈಂಗಿಕ ರೋಗದಿಂದ ಬಳಲುತ್ತಿದ್ದರೆ ಕೊಂಚ ಕಬ್ಬಿನ ರಸವನ್ನು ಲಿಂಬೆ ರಸ ಹಾಗೂ ಎಳನೀರಿನಲ್ಲಿ ಬೆರೆಸಿ ನಿತ್ಯವೂ ಕುಡಿಯುವ ಮೂಲಕ ಈ ಎಲ್ಲಾ ತೊಂದರೆಗಳಿಂದ ಮುಕ್ತಿ ಪಡೆಯಬಹುದು.

Leave A Reply

Your email address will not be published.