Shashi Tharoor : ಸೋತರೂ ಹೃದಯ ಗೆದ್ದ ಶಶಿ ತರೂರ್.. ಅಮಾನ್ಯಗೊಂಡ ಬ್ಯಾಲೆಟ್ ಪೇಪರ್ ನಲ್ಲಿ ಏನಿತ್ತು..?

ನವದೆಹಲಿ : Shashi Tharoor Heart : ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಶಶಿ ತರೂರ್ ಸೋತಿರಬಹುದು. ಆದ್ರೆ ತರೂರ್ ಅನೇಕರ ಹೃದಯವನ್ನು ಗೆದ್ದಿದ್ದಾರೆ. ಈ ಸಂಗತಿ ಅವರಿಗೆ ಸಿಕ್ಕ 1072 ಮತಗಳಿಂದ ಅಷ್ಟೇ ಅಲ್ಲ, ಮತಎಣಿಕೆಯಲ್ಲಿ ಅಮಾನ್ಯಗೊಂಡ ಬ್ಯಾಲೆಟ್ ಪೇಪರ್  ನಿಂದಲೂ ಬಯಲಾಗಿದೆ.

ಅಂದಹಾಗೆ ಬುಧವಾರ ನಡೆದ ಮತ ಎಣಿಕೆಯಲ್ಲಿ ಶಶಿ ತರೂರ್ ಅವರ ಎದುರಾಳಿ ಮಲ್ಲಿಕಾರ್ಜುನ ಖರ್ಗೆ ಅವರು 7,897 ಮತಗಳನ್ನು ಪಡೆದು ಜಯಗಳಿಸಿದರೆ, ತರೂರ್ ಅವರು 1,072 ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಆದ್ರೆ 416 ಮತಗಳು ನಾನಾ ಕಾರಣಗಳಿಂದ ಅಮಾನ್ಯಗೊಡಿದ್ವು. ಈ ಅಮಾನ್ಯಗೊಂಡ ಬ್ಯಾಲೆಟ್ ಪೇಪರ್ ಗಳಲ್ಲಿ ಇಂಟ್ರೆಸ್ಟಿಂಗ್ ಆಗಿರೋ ಕಥೆ ಸಿಕ್ಕಿದೆ.

ತರೂರ್ ಬಣದ ಮೂಲಗಳ ಪ್ರಕಾರ ಅಮಾನ್ಯವಾದ ಮತಗಳ ಪೈಕಿ ಒಂದು ಬ್ಯಾಲೆಟ್ ಪೇಪರ್ ನಲ್ಲಿ ತರೂರ್ ಹೆಸರಿನ ಮುಂದೆ ಹೃದಯ ಮತ್ತು ಬಾಣದ ಬರಹವನ್ನ ಬರೆಯಲಾಗಿದೆ. ಅಲ್ದೆ ಮತ್ತೊಂದು ಬ್ಯಾಲೆಟ್  ನಲ್ಲಿ ಖರ್ಗೆ ಅವರ ಹೆಸರಿನ ಮುಂದೆ ಸ್ವಸ್ತಿಕ್ ಗುರುತು ಮಾಡಲಾಗಿದೆ ಅಂತಾ ಹೇಳಲಾಗಿದೆ. ಹೀಗಾಗಿ ಇದು, ತರೂರ್ ಅವರ ಬಗ್ಗೆ ಕಾಂಗ್ರೆಸ್ ನಲ್ಲಿ ಧನಾತ್ಮಕ ಭಾವನೆ ಇರೋದನ್ನ ಖಚಿತ ಪಡಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಚಲಾವಣೆಯಾದ ಒಟ್ಟು ಮತಗಳಲ್ಲಿ ಶಶಿ ತರೂರ್ ಅವರ ವೋಟಿಂಗ್ ಶೇರ್ 12 ರಷ್ಟಿದೆ. ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಕೇರಳ ಮತ್ತು ಯುಪಿಯಲ್ಲಿ ಅವರಿಗೆ ಹೆಚ್ಚು ಮತಗಳು ಬಂದಿವೆ ಎಂದು ತರೂರ್ ಬಣ ಹೇಳಿಕೊಂಡಿದೆ. ಏಕೆಂದರೆ ಎಲ್ಲಾ ಮತಪತ್ರಗಳನ್ನು ಮಿಶ್ರಣ ಮಾಡಲಾಗಿದ್ದು, ಯಾವ ಅಭ್ಯರ್ಥಿಗಳು ಯಾವ ರಾಜ್ಯದಿಂದ ಎಷ್ಟು ಮತಗಳನ್ನು ಪಡೆದರು ಎಂಬುದು ಯಾರಿಗೂ ತಿಳಿದಿಲ್ಲ. ಖರ್ಗೆ ಅವರು ನಾಮಪತ್ರ ಸಲ್ಲಿಸಲು ಹೋದಾಗ ಹಿರಿಯ ನಾಯಕರು ಅವರ ಜೊತೆಗಿಲ್ಲದಿದ್ದರೆ ಫಲಿತಾಂಶ ಸಂಪೂರ್ಣ ವಾಗಿ ಭಿನ್ನವಾಗಿರುತ್ತಿದ್ದವು  ಎಂದು ತರೂರ್ ಟೀಂ ಸದಸ್ಯರೊಬ್ಬರು ಖಾಸಗಿ ಸುದ್ದಿವಾಹಿನಿಗೆ ಹೇಳಿದ್ದಾರೆ.

ಇದನ್ನೂ ಓದಿ : Congress President Election Result:ಮಲ್ಲಿಕಾರ್ಜುನ ಖರ್ಗೆಗೆ ಎಐಸಿಸಿ ಅಧ್ಯಕ್ಷ ಪಟ್ಟ : ನಿಜವಾಯ್ತು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ

ಇದನ್ನೂ ಓದಿ : KSRTC Good News : ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ 50 ಲಕ್ಷ ಅಪಘಾತ ವಿಮೆ ಯೋಜನೆ ಜಾರಿ

Shashi Tharoor Heart with arrow drawn next to Shashi Tharoor’s name on ballot papers

Comments are closed.