Bangalore Heavy Rain: ರಾತ್ರಿಯಿಡಿ ರಣಭೀಕರ ಮಳೆ.. ಮುಳುಗಿದ ಬೆಂಗಳೂರು.. ಇನ್ನೂ ಇದೇ ಮಳೆ ಅನಾಹುತ

ಬೆಂಗಳೂರು :  Bangalore Heavy Rain ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ನಿನ್ನೆ ಅಕ್ಷರಶಃ ಅಟ್ಟಹಾಸ ಮೆರೆದಿದೆ, ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಅವಾಂತರಗಳ ಸರಮಾಲೆಯೇ ಸೃಷ್ಟಿಯಾಗಿದೆ.

ಬೆಂಗಳೂರಿನಾದ್ಯಂತ ಬುಧವಾರ ಸಂಜೆಯಿಂದಲೇ ಮಳೆ ಸುರಿಯಲು ಪ್ರಾರಂಭಿಸಿತು. ಪರಿಣಾಮ ರಸ್ತೆಗಳೆಲ್ಲ ನದಿಗಳಾಂತಾಗಿದ್ವು. ಮಲ್ಲೇಶ್ವರಂ, ಶೇಷಾದ್ರಿಪುರಂ, ಮೆಜೆಸ್ಟಿಕ್, ಎಂಜಿ ರಸ್ತೆ, ಹಲಸೂರು, ಯಶವಂತಪುರ, ಕಾರ್ಪೊರೇಷನ್ ಸರ್ಕಲ್, ಶಾಂತಿನಗರ, ಕೆಂಗೇರಿ, ಯಮಲೂರು, ವಿಲ್ಸನ್ ಗಾರ್ಡನ್, ಜಯನಗರ, ಚಾಮರಾಜಪೇಟೆ, ಶಿವಾಜಿನಗರ, ಇಂದಿರಾನಗರ, ಹೆಚ್ಎಎಲ್ ಲೇಔಟ್, ಮೈಸೂರು ರಸ್ತೆ ಸೇರಿದಂತೆ ಬಹುತೇಕ ಕಡೆ ಮಳೆಯಿಂದಾಗಿ ಜನರು ಪರದಾಡುವಂತಾಯ್ತು. ರಸ್ತೆಯಲ್ಲಿ ನೀರು ಹರಿದಿದ್ರಿಂದ ವಾಹನ ಸವಾರರು ಪರದಾಡಬೇಕಾಯ್ತು. ವೇಗವಾಗಿ ಹರಿಯುತತ್ತಿದ್ದ ನೀರಿನಲ್ಲಿ ಕೊಚ್ಚಿಹೋಗ್ತಿದ್ದ ಬೈಕ್ ಗಳನ್ನ ಹಿಡಿಯಲು ವಾಹನ ಸವಾರರು ಪರದಾಡ್ತಿದ್ದ ದೃಶ್ಯ ಶಿವಾಜಿನಗರದಲ್ಲಿ ಕಂಡು ಬಂತು.

ಬನಶಂಕರಿಯ ಅನೇಕ ಬಡಾವಣೆಯ ಮನೆಗಳಿಗೆ ಮೋರಿ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ಮನೆಗಳಿಂದ ನೀರು ಹೊರಹಾಕಲು ನಿವಾಸಿಗಳ ಹರಸಾಹಸಪಟ್ಟರು. ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ ಹೊರಹಾಕಿದ್ರು. ಶೇಷಾದ್ರಿಪುರಂ ಮೆಟ್ರೋ ಸುರಂಗದ ತಡೆಗೋಡೆ ಕುಸಿದು 7 ಕಾರು, 2 ಬೈಕ್ ಜಖಂಗೊಂಡಿವೆ. ಕಾರಿನಲ್ಲಿ ಕುಳಿತಿದ್ದ ನಾಗಭೂಷಣ್, ಆನಂದ್​ ಅಪಾಯದಿಂದ ಪಾರಾಗಿದ್ದಾರೆ.

ಮಳೆಯಿಂದಾಗಿ ಶಾಂತಿನಗರ, ವಿಲ್ಸನ್​ಗಾರ್ಡನ್ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು. ಕೆರೆಯಂತಾದ ರಸ್ತೆಯಲ್ಲಿ ವಾಹನ ಸವಾರರು ಪರದಾಡಿದರು. ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ, ಸೇಂಟ್​ ಜೋಸೆಫ್​ ಕಾಲೇಜು ಬಳಿ ರಸ್ತೆಗಳು ಜಲಾವೃತಗೊಂಡು ಫುಟ್​ಪಾತ್​ ಮಟ್ಟಕ್ಕೆ ನೀರು ಹರಿಯಿತು.ಚಿಕ್ಕಪೇಟೆ, ಸುಲ್ತಾನ್ ಪೇಟೆ ಸೇರಿದಂತೆ ಬೆಂಗಳೂರಿನ ಹೃದಯ ಭಾಗದಲ್ಲಿರೋ ಮಾರುಕಟ್ಟೆಗಳ ಪ್ರದೇಶಗಳು ಮಳೆಯಿಂದಾಗಿ ಜಲಾವೃತವಾಗಿದ್ವು

ನಗರದಲ್ಲಿ ಮುಂದಿನ ಮೂರು ದಿನಗಳವರೆಗೆ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯು ಹಳದಿ ಅಲರ್ಟ್ ಘೋಷಿಸಿದೆ. ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿಹೆಚ್ಚು ಮಳೆ ದಾಖಲಾಗಿರುವ ವರ್ಷ 2017. ಆಗ ನಗರದಲ್ಲಿ ಒಟ್ಟು 1,696 ಮಿಮೀ ಮಳೆಯಾಗಿತ್ತು. ಈ ವರ್ಷ ನಗರದಲ್ಲಿ ಈಗಾಗಲೇ 1,706 ಮಿಮೀ ಮಳೆಯಾಗಿದ್ದು, ದಾಖಲೆ ಬರೆದಿದೆ.

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸುರಿದ ಮಳೆಯು ದೇಶ-ವಿದೇಶಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದರಿಂದ ಬೆಂಗಳೂರಿನ ಬ್ರ್ಯಾಂಡ್‌ ಇಮೇಜ್‌ಗೂ ಧಕ್ಕೆಯಾಗಿತ್ತು. ಐಟಿ ಕಂಪನಿಗಳು ಬೆಂಗಳೂರು ಬಿಟ್ಟು ಹೊರನಡೆಯುವುದಾಗಿ ವಾರ್ನಿಂಗ್‌ ನೀಡಿದ್ದವು. ಇದೀಗ ಮತ್ತೆ ಬೆಂಗಳೂರು ಭೀಕರ ಮಳೆ ಟ್ವೀಟರ್‌ನಲ್ಲಿ ಮತ್ತೆ ಟ್ರೆಂಡಿಂಗ್‌ನಲ್ಲಿದ್ದು, ನಿನ್ನೆ ರಾತ್ರಿಯಿಂದಲೇ ಜನರು ತಾವು ಅನುಭವಿಸಿದ ಪರದಾಟಗಳ ಕುರಿತು ವಿಡಿಯೋ, ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : Shashi Tharoor : ಸೋತರೂ ಹೃದಯ ಗೆದ್ದ ಶಶಿ ತರೂರ್.. ಅಮಾನ್ಯಗೊಂಡ ಬ್ಯಾಲೆಟ್ ಪೇಪರ್ ನಲ್ಲಿ ಏನಿತ್ತು..?

ಇದನ್ನೂ ಓದಿ : Virat Kohli with fan girl : ವಿರಾಟ್ ಕೊಹ್ಲಿ ಜೊತೆ ಬ್ರಿಸ್ಬೇನ್‌ನಲ್ಲಿ ಕಾಣಿಸಿಕೊಂಡ ಈ ಸುರಸುಂದರಾಗಿ ಯಾರು ?

ಇದನ್ನೂ ಓದಿ : Mohammed Shami Shaheen Shah Afridi : ಪಾಕ್ ವೇಗಿ ಶಾಹೀನ್ ಅಫ್ರಿದಿಗೆ ಬೌಲಿಂಗ್ ಟಿಪ್ಸ್ ನೀಡಿದ ಮೊಹಮ್ಮದ್ ಶಮಿ

Bangalore Heavy Rain Terrible rain overnight Bengaluru drowned Another rain disaster

Comments are closed.