Avalanche ಉತ್ತರಾಖಂಡ್‌ ನಲ್ಲಿ ಹಿಮಪಾತ ; ನಿಜವಾಯಿತು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಯ ಭವಿಷ್ಯ

ಬೆಂಗಳೂರು : ( Snow falls in Uttarakhand ) ಉತ್ತರಾಖಂಡ್‌ ನ ದ್ರೌಪದಿ ದಂಡಾ-2 ಪರ್ವತ ಶಿಖರದಲ್ಲಿ ಹಿಮಕುಸಿತವಾಗಿದ್ದು, ನೆಹರು ಪರ್ವತಾರೋಹಣ ಸಂಸ್ಥೆಗೆ ಸೇರಿದ 28 ಮಂದಿ ಪ್ರತಿಕ್ಷಣಾರ್ಥಿಗಳು ಹಿಮಕುಸಿತದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನಾಪತ್ತೆಯಾದವರ ಪತ್ತೆಗಾಗಿ ರಕ್ಷಣಾ ಕಾರ್ಯ ಮುಂದುವರಿದಿದೆ. ಉತ್ತರಾಖಂಡ್‌ನಲ್ಲಿ ಹಿಮಪಾತ ಆಗಲಿದೆ ಎಂದು ಈ ಹಿಂದೆ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ನುಡಿದ ಭವಿಷ್ಯ ಇದೀಗ ನಿಜವಾಗಿದೆ.

ಮಂಗಳವಾರ ಉತ್ತರಾಖಂಡ್ ನ ಘರ್ವಾಲ್‌ ನಲ್ಲಿ ನಡೆದ ಹಿಮಕುಸಿತ ( Avalanche )ದಲ್ಲಿ 28 ಮಂದಿ ಪರ್ವತಾರೋಹಿಗಳು ಸಿಲುಕಿದ್ದು, ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ಸೇನೆ ಧಾವಿಸಿದ್ದು ತ್ವರಿತ, ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಸದ್ಯದ ಮಾಹಿತಿಯ ಪ್ರಕಾರ ಇದುವರೆಗೆ ಒಟ್ಟು 8 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಉಳಿದ ಪರ್ವತಾರೋಹಿಗಳ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಉತ್ತರ ಕಾಶಿಯ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.

ಇದನ್ನೂ ಓದಿ : Kodi Mutt Sri : ಹೃದಯ ಕಾಯಿಲೆ ಹೆಚ್ಚಲಿದೆ, ಕಾರ್ತಿಕ ಮಾಸದಲ್ಲಿ ಜಾಸ್ತಿ ತೊಂದರೆ : ಕೋಡಿ ಸ್ವಾಮೀಜಿ ಭವಿಷ್ಯ

ಕಳೆದ ಎರಡು ದಿನಗಳ ಹಿಂದೆ (ಅಕ್ಟೋಬರ್‌ 2 ರಂದು )ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಭವಿಷ್ಯ ನುಡಿದಿದ್ದರು. ಉತ್ತರಾಖಂಡದಲ್ಲಿ ಅನೇಕ ಅವಘಡಗಳು ನಡೆಯುವುದಾಗಿ ಜನರನ್ನು ರಕ್ಷಿಸುವುದಾಗಿ, ಕರ್ನಾಟಕದ ರಾಜಕೀಯ ಮುಖಂಡರಿಗೆ ಜನ ಸೇವೆ ಮಾಡುವುದಾಗಿ ಮೊದಲೆ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಇದೀಗ ಉತ್ತರಾಖಂಡದಲ್ಲಿ ಅವಘಡ ನಡೆಯಲಿದೆ ಅನ್ನೋ ಸ್ವಾಮೀಜಿ ಅವರ ಹೇಳಿಕೆ ನಿಜವಾಗಿದೆ. ಈ ಕುರಿತು ಸ್ವಾಮೀಜಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : AB de Villiers RCB : ಐಪಿಎಲ್ 2023ರಲ್ಲಿ ಆರ್‌ಸಿಬಿ ಪರ ಆಡುತ್ತೆನೆ ಎಂದ ಎಬಿ ಡಿವಿಲಿಯರ್ಸ್

ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದ ಭವಿಷ್ಯವೇನು ?

ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಭವಿಷ್ಯ ನುಡಿದಿದ್ದರು. ಭಾರತಕ್ಕೆ ಈ ಅಕ್ಟೋಬರ್‌ 25 ರ ಆಸುಪಾಸಿನಲ್ಲಿ ಅನೇಕ ಅವಘಡಗಳು, ಆಕಸ್ಮಿಕ ಮಳೆ, ಜಲಪ್ರವಾಹಗಳು ನಡೆಯಲಿದೆ. ಉತ್ತರಾಖಂಡದ ಜನತೆ ಈ ಕುರಿತು ಎಚ್ಚರಿಕೆ ವಹಿಸಬೇಕು. ಬಿಹಾರ , ಅಸ್ಸಾಂ ರಾಜ್ಯಗಳು ,ಕರ್ನಾಟಕದ ರಾಜರೇ ಜನಸೇವೆ ಮಾಡಿ ….. ಮಳೆಯಿಂದ ಎಚ್ಚರಿಕೆ .” ಎಂಬುದಾಗಿ ಎಚ್ಚರಿಕೆಯ ನೀಡಿದ್ದು, ಕರ್ನಾಟಕದ ರಾಜರು ಅಂದರೆ ಕರ್ನಾಟಕದ ರಾಜಕೀಯ ಮುಖಂಡರುಗಳಿಗೆ ಜನಸೇವೆ ಮಾಡುವುದಾಗಿ ಭವಿಷ್ಯವನ್ನು ನುಡಿದಿದ್ದಾರೆ. ಇದೀಗ ಉತ್ತರಾಖಂಡದಲ್ಲಿ 28 ಮಂದಿ ಹಿಮಪಾತದಲ್ಲಿ ಸಿಲುಕಿ ಸಾವು ನೋವುಗಳ ನಡುವೆ ಒದ್ದಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ : Ranveer Singh: ದೀಪಿಕಾ -ರಣವೀರ್​ ದಾಂಪತ್ಯ ವಿರಸದ ವದಂತಿಗೆ ತೆರೆ ಎಳೆದ ದೀಪ್​ವೀರ್​ ದಂಪತಿ

ಉತ್ತರಾಖಂಡ್‌ನಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಿಂತೆ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ತ್ವರಿತ ರಕ್ಷಣಾ ಕಾರ್ಯಚರಣೆಗಾಗಿ ಸೇನಾಪಡೆಯ ಸಹಾಯ ಕೇಳಿರುವುದಾಗಿ , ಕೇಂದ್ರ ಸರ್ಕಾರದಿಂದ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಟ್ವೀಟ್‌ ಮೂಲಕ ಭರವಸೆ ನೀಡಿದ್ದಾರೆ. ಐಎಎಫ್‌ ತಂಡ ಎರಡು ಹೆಲಿಕಾಫ್ಟರ್‌ ಗಳನ್ನು ನಿಯೋಜಿಸಿ ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದಾರೆ.

ಹಿಮ ದುರಂತದಲ್ಲಿ ಮರಣ ಹೊಂದಿದ ಕುಟುಂಬಗಳಿಗೆ ರಾಜನಾಥ್‌ ಸಿಂಗ್‌ ಟ್ವೀಟ್‌ ಮಾಡುವುದರ ಮೂಲಕ ಸಾಂತ್ವನವನ್ನು ತಿಳಿಸಿದ್ದಾರೆ. ಅಮೂಲ್ಯ ಜೀವಗಳನ್ನು ಹಿಮಕುಸಿತದಿಂದ ಕಳೆದುಕೊಂಡಿದ್ದರಿಂದ ತೀವ್ರ ದುಃಖವಾಗುತ್ತಿದೆ ಎಂದು ತಮ್ಮ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

Snow falls in Uttarakhand : An avalanche occurred at the Draupadi Danda-2 mountain peak in Uttarakhand and 28 volunteers belonging to the Nehru Mountaineering Organization are suspected to have been caught in the avalanche.

Comments are closed.