Mysore Palace : ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಮುಕ್ತಾಯ:ನಾಳೆ ಅದ್ಧೂರಿ ಜಂಬೂ ಸವಾರಿ

ಮೈಸೂರು : Mysore Palace Jamboo savari : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜಯ ದಶಮಿ ಸಂಭ್ರಮ ಎಲ್ಲೆಲ್ಲೂ ಕಳೆಗಟ್ಟಿದೆ. ಅರಮನೆಯಲ್ಲಿಂದು ಅತ್ಯಂತ ಅದ್ಧೂರಿಯಾಗಿ ಆಯುಧ ಪೂಜೆ ಕಾರ್ಯಕ್ರಮ ನೆರವೇರಿದೆ . ಅರಮನೆ ಸವಾರಿ ತೊಟ್ಟಿಯಲ್ಲಿ ಯದುವೀರ್​​ ಪೂಜೆ ಪುನಸ್ಕಾರ ಕಾರ್ಯಕ್ರಮಗಳನ್ನು ನೆರವೇರಿಸಿದ್ದಾರೆ. ಪಟ್ಟದ ಆನೆ, ಕುದುರೆ, ಹಸು, ಒಂಟೆಗೆ ಯದುವೀರ್​ ಪೂಜೆ ಸಲ್ಲಿಸಿದ್ರು. ಪೂಜೆ ಬಳಿಕ ವಾಣಿ ವಿಲಾಸ ದೇವರ ಮನೆಯಲ್ಲಿ ಚಾಮುಂಡೇಶ್ವರಿಗೆ ಮಹಾ ಮಂಗಳಾರತಿ ಯನ್ನು ನೆರವೇರಿಸಿದ್ದಾರೆ. ಮಂಗಳಾರತಿ ಬಳಿಕ ಯದುವೀರ್ ಇಂದು ಸಂಜೆ ಈ ವರ್ಷದ ಕೊನೆಯ ದರ್ಬಾರ್​ನಲ್ಲಿ ಭಾಗಿಯಾಗಲಿದ್ದಾರೆ.

ಯದುವೀರ್​ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದ ಸಂದರ್ಭದಲ್ಲಿ ಅರಮನೆ ಮೇಲ್ಭಾಗದಲ್ಲಿ ಕುಳಿತು ಪೂಜಾ ಕೈಂಕರ್ಯಗಳನ್ನು ರಾಜವಂಶಸ್ಥೆ ಪ್ರಮೋದಾ ದೇವಿ ವೀಕ್ಷಿಸಿದ್ರು. ಅಜ್ಜಿಗೆ ಯುವರಾಜ ಆದ್ಯವೀರ್​ ಸಾಥ್​ ನೀಡಿದ್ದಾನೆ. ಅರಮನೆಯಲ್ಲಿ ನಾಳೆ ರಾಜವಂಶಸ್ಥರಿಂದ ವಿಜಯದಶಮಿ ವಿಶಿಷ್ಟ ಕಾರ್ಯಕ್ರಮ ನೆರವೇರಲಿದೆ. ನಾಳೆ ಬೆಳಗ್ಗೆ 10:15ಕ್ಕೆ ಸರಿಯಾಗಿ ಅರಮನೆ ಸವಾರಿ ತೊಟ್ಟಿಯಲ್ಲಿ ಮೈ ನವಿರೇಳಿಸುವಂತೆ ಜಟ್ಟಿ ಕಾಳಗ ನಡೆಯಲಿದೆ. ಮೈಸೂರು, ಚಾಮರಾಜನಗರ, ಬೆಂಗಳೂರು, ಚೆನ್ನಪಟ್ಟಣದ ಜೆಟ್ಟಿಗಳ ನಡುವೆ ಸೆಣೆಸಾಟ ನಡೆಯಲಿದೆ. ತಲೆಯಲ್ಲಿ ಸಾಂಕೇತಿಕವಾಗಿ ರಕ್ತ ಚಿಮ್ಮುವ ತನಕ ಜಟ್ಟಿಗಳ ವಜ್ರಮುಷ್ಠಿ ಕಾಳಗ ನಡೆಯಲಿದೆ.

ಕಾಳಗದಲ್ಲಿ ವಿಜೇತರಾಗುವ ಜೆಟ್ಟಿಗೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಪರಂಪರೆಯಂತೆ ಯದುವೀರ್​ ಒಡೆಯರ್​​ ಭಕ್ಷೀಸು ನೀಡಲಿದ್ದಾರೆ. ವಿಜಯದಶಮಿಯ ಕೊನೆಯ ಕಾರ್ಯಕ್ರಮ ಎಂಬಂತೆ ಅರಮನೆಯಿಂದ ವಿಜಯದಶಮಿ ಮೆರವಣಿಗೆ ನಡೆಯಲಿದೆ. ಜಟ್ಟಿ ಕಾಳಗದ ನಂತರ ಅರಮನೆ ಆನೆ ಬಾಗಿಲಿನಿಂದ ಚಿನ್ನದ ಪಲ್ಲಕ್ಕಿಯಲ್ಲಿ ವಿಜಯದಶಮಿ ಮೆರವಣಿಗೆಯಲ್ಲಿ ಯದುವೀರ್​ ಸಾಗಲಿದ್ದಾರೆ.

ಮೆರವಣಿಗೆ ಮೂಲಕ ಭುವನೇಶ್ವರಿ ದೇವಸ್ಥಾನಕ್ಕೆ ಯದುವೀರ್​ ಆಗಮಿಸಲಿದ್ದಾರೆ. ದೇವಸ್ಥಾನದ ಪಕ್ಕದ್ದಲ್ಲೇ ಇರುವ ಬನ್ನಿ ಮರಕ್ಕೆ ಸಾಂಪ್ರದಾಯಿಕ ಪೂಜೆಯನ್ನು ಸಲ್ಲಿಸಲಿದ್ದಾರೆ. ಪೂಜೆ ಬಳಿಕ ಮೆರವಣಿಗೆ ಮೂಲಕವೇ ಅರಮನೆಗೆ ವಾಪಸ್​​ ಆಗಲಿದ್ದಾರೆ. ಅಲ್ಲಿಗೆ ರಾಜ ಮನೆತನದ ಸಾಂಪ್ರದಾಯಿಕ, ಧಾರ್ಮಿಕ ಕಾರ್ಯಕ್ರಮಗಳು ಮುಕ್ತಾಯವಾಗಲಿದೆ. ಇದಾದ ಬಳಿಕ ಯದುವೀರ್​ ಕಂಕಣ ವಿಸರ್ಜನೆ ಮಾಡಲಿದ್ದಾರೆ.ಅಂತಿಮವಾಗಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆಯಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನು ಓದಿ : COVID 19 : ಬೆಂಗಳೂರಲ್ಲಿ ಕೋವಿಡ್‌ ಸೋಂಕು ಬಾರೀ ಇಳಿಕೆ : ಒಂದು ಸಾವು

ಇದನ್ನೂ ಓದಿ : Mitchell Johnson Yusuf Pathan : ಲೆಜೆಂಡ್ಸ್ ಲೀಗ್ ಕ್ರಿಕೆಟ್: ಯೂಸುಫ್ ಪಠಾಣ್ ಮೇಲೆ ಮೈದಾನದಲ್ಲೇ ಹಲ್ಲೆ ನಡೆಸಿದ ಆಸೀಸ್ ವೇಗಿ ಜಾನ್ಸನ್

Ayudha Puja ends at Mysore Palace: Grand Jamboo savari tomorrow

Comments are closed.