Sonia Visit Kharge House: ಗೆಲುವಿನ ಬಳಿಕ ಖರ್ಗೆ ನಿವಾಸಕ್ಕೆ ಬಂದು ಶುಭ ಕೋರಿದ ಸೋನಿಯಾ.. ಕಾಂಗ್ರೆಸ್ ಅಧಿನಾಯಕಿ  ಕೊಟ್ಟ ಸಂದೇಶವೇನು..?

ನವದೆಹಲಿ : Sonia Visit Kharge House ಮಲ್ಲಿಕಾರ್ಜುನ ಖರ್ಗೆ ಪಕ್ಷದ ಅಧ್ಯಕ್ಷರಾದ್ರೂ ಕಾಂಗ್ರೆಸ್ ಪಕ್ಷಕ್ಕೆ ಸೋನಿಯಾ ಗಾಂಧಿಯೇ ಅಧಿನಾಯಕಿ. ಆದ್ರೆ ನಿನ್ನೆ ಫಲಿತಾಂಶದ ಬಳಿಕ ಕೈ ಅಧಿನಾಯಕಿ ಸೋನಿಯಾ ನಡೆದು ಕೊಂಡ ರೀತಿ. ಪಕ್ಷದ ನಾಯಕರಿಗೆ ಹಲವು ಸಂದೇಶವನ್ನ ರವಾನಿಸಿದೆ.

ಮಲ್ಲಿಕಾರ್ಜು ಖರ್ಗೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ ಸೋನಿಯಾ ಗಾಂಧಿ ಅವರ ಸೂಚನೆ ಮೇರೆಗೆ ಅಲ್ಲಿಗೆ ಚುನಾವಣೆಗೂ ಮೊದಲೇ ಖರ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗೋದು ಬಹುತೇಕ ಖಚಿತವಾಗಿತ್ತು. ಬುಧವಾರ ಫಲಿತಾಂಶ ಬಂದಿದ್ದು 7 ಸಾವಿರಕ್ಕೂ ಅಧಿಕ ಮತಗಳಿಸಿ ಖರ್ಗೆ ವಿಜಯ ಸಾಧಿಸಿದ್ದಾರೆ. 23 ವರ್ಷದ ಬಳಿಕ ಗಾಂಧಿ ಕುಟುಂಬೇತರ ವ್ಯಕ್ತಿಯೊಬ್ಬರು ಕಾಂಗ್ರೆಸ್ ಪಕ್ಷದ ಅತ್ಯುನ್ನತ ಹುದ್ದೆಗೇರಿದ್ದಾರೆ. ಆದ್ರೆ ಚುನಾವಣೆ ಫಲಿತಾಂಶದ ಬಳಿಕ ಕುತೂಹಲ ಕಾರಿ ಘಟನೆಯೊಂದು ನಡೆದಿದೆ.  

ಗೆಲುವಿನ ಬಳಿಕ ಸೋನಿಯಾ ಗಾಂಧಿ ಅವರಿಗೆ ಕರೆ ಮಾಡಿದ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ ಮೇಡಂ ಅವರ ಭೇಟಿಗೆ ಅಪಾಯಿಂಟ್ಮೆಂಟ್ ಕೇಳಿದ್ದಾರೆ ಆದ್ರೆ, ಖರ್ಗೆಗೆ ಸೋನಿಯಾ ಭೇಟಿಯ ಅಪಾಯಿಂಟ್ಮೆಂಟ್ ಸಿಕ್ಕಿಲ್ಲ. ಇದಾಗಿ ಅರ್ಧಗಂಟೆ ಕಳೆಯುತ್ತಿದ್ದಂತೆ ಸೋನಿಯಾ ಗಾಂಧಿಯೇ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಪುತ್ರಿ  ಪ್ರಿಯಂಕಾರೊಂದಿಗೆ ಆಗಮಿಸಿದ್ದಾರೆ. ಖರ್ಗೆ ಅವರಿಗೆ ಹೂ ಗುಚ್ಛನೀಡಿ ಶುಭ ಹಾರೈಸಿದ್ದಾರೆ.

ಸೋನಿಯಾ ಖಡಕ್ ಸಂದೇಶ : ಇಷ್ಟು ದಿನ ಪಕ್ಷದಲ್ಲಿ ಏನೇ ನಡೆದರೂ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಅವರ ನಿವಾಸಕ್ಕೆ ಎಲ್ಲರೂ ಹೋಗುತ್ತಿದ್ರು. ಸೋನಿಯಾ ಗಾಂಧಿ ಪಕ್ಷದ ನಾಯಕರ ಮನೆಗೆ ಹೋಗಿದ್ದು ತುಂಬಾ ವಿರಳ. 2015ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಕಲ್ಲಿದ್ದಲು ಹಗರಣದ ವಿಚಾರವಾಗಿ ಸಮನ್ಸ್ ನೀಡಿದ್ದನ್ನ ವಿರೋಧಿಸಿ ಸಿಂಗ್ ಮನೆಗೆ ತೆರಳಿದ್ದ ಸೋನಿಯಾ ಅಲ್ಲಿಂದ ಪಾದಯಾತ್ರೆ ಮಾಡಿದ್ರು. ಅದನ್ನ ಹೊರತು ಪಡಿಸಿ ಸೋನಿಯಾ ಗಾಂಧಿ ಪಕ್ಷದ ಬೇರೆ ನಾಯಕರ ಮನೆಗೆ ಹೋಗಿದ್ದ ಉದಾಹರಣೆ ಇಲ್ಲ. ಆದ್ರೆ ನಿನ್ನೆ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಆದ ಬಳಿಕ ಸೋನಿಯಾ ಗಾಂಧಿ ಅವರೇ ಖರ್ಗೆ ನಿವಾಸಕ್ಕೆ ತೆರಳಿ ಶುಭ ಕೋರಿದ್ದಾರೆ. ಆ ಮೂಲಕ ಖರ್ಗೆ ಅವರೇ ಪಕ್ಷದ ಬಾಸ್, ಎಲ್ಲರೂ ಇನ್ಮುಂದೆ ಅವರಿಗೆ ರಿಪೋರ್ಟ್ ಮಾಡಿಕೊಳ್ಳಬೇಕು ಅನ್ನೋ ಸಂದೇಶ ರವಾನಿಸಿದ್ದಾರೆ. ಅಲ್ಲದೇ, ಖರ್ಗೆ ಅವರನ್ನ ತಾವೇ ಸೂಚಿಸಿದ್ದರೂ ಸಹ ಖರ್ಗೆ ತಮ್ಮ ರಿಮೋರ್ಟ್ ಕಂಟ್ರೋಲ್ ನಂತೆ ನಡೆದುಕೊಳ್ಳುವುದಿಲ್ಲ. ಪಕ್ಷದಲ್ಲಿ ನಿರ್ಧಾರ ಕೈಗೊಳ್ಳಲು ಸ್ವತಂತ್ರರಾಗಿದ್ದಾರೆ ಅನ್ನೋ ಸಂದೇಶವನ್ನೂ ರವಾನಿಸಿದ್ದಾರೆ. ಆಮೂಲಕ ಕಾಂಗ್ರೆಸ್ ಪಕ್ಷದ ಬದಲಾವಣೆ ಪರ್ವಕ್ಕೆ ಮುನ್ನುಡಿ ಬರೆದಿದ್ದಾರೆ. ಸೋನಿಯಾ ಅವರ ನಡೆಯಿಂದ ಖರ್ಗೆ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಾಗಿದ್ದು, ಅಧ್ಯಕ್ಷರಾಗಿ ಅಧಿಕಾರ ನಿಭಾಯಿಸಲು ಖರ್ಗೆಗೆ ಫ್ರೀ ಹ್ಯಾಂಡ್ ಸಿಕ್ಕಂತಾಗಿದೆ.

ಇದನ್ನೂ ಓದಿ: Vaishali Takkar Rahul Navlani : ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ ಪ್ರಕರಣ : ಮಾಜಿ ಗೆಳೆಯ ರಾಹುಲ್ ನವ್ಲಾನಿ ಅರೆಸ್ಟ್

ಇದನ್ನೂ ಓದಿ: India vs Pakistan Rain threat : ಭಾರತ Vs ಪಾಕಿಸ್ತಾನ ಪಂದ್ಯದ ಮೇಲೆ ಮಳೆಯ ಕರಿನೆರಳು, ಭಾನುವಾರ 80% ಮಳೆ ಪಕ್ಕಾ

Sonia Visit Kharge House and wished him well What was the message given by the Congress leader

Comments are closed.