Suhail Sameer: ಭಾರತ್‌ ಪೇ ಸಿಇಒ ಹುದ್ದೆಯಿಂದ ಕೆಳಗಿಳಿದ ಸುಹೇಲ್‌ ಸಮೀರ್‌

ನವದೆಹಲಿ: (Suhail Sameer) ಭಾರತ್‌ ಪೇ ನ ಮುಖ್ಯ ಕಾರ್ಯನಿರ್ವಾಹಕ ಸುಹೇಲ್‌ ಸಮೀರ್‌ ಅವರು ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದು, ರಾಜಿನಾಮೇ ನೀಡಲು ಹಿಂದಿರುವ ಕಾರಣವನ್ನು ನಿಖರವಾಗಿ ಉಲ್ಲೇಖಿಸಿಲ್ಲ. ಸಂಸ್ಥೆಯ ಮಾಜಿ ಸಂಸ್ಥಾಪಕ ಅಶ್ನೀರ್‌ ಗ್ರೋವರ್‌ ಅವರೊಂದಿಗೆ ಸಮೀರ್‌ ಅವರಿಗೆ ಇದ್ದ ಮನಸ್ಥಾಪವೇ ಕಾರಣ ಎಂದು ಹೇಳಲಾಗುತ್ತಿದೆ. ಸಮೀರ್‌ ಬದಲಾಗಿ ಈಗಿನ ಮುಖ್ಯ ಹಣಕಾಸು ಅದಿಕಾರಿ ನಳಿನ್‌ ನೇಗಿ ಅವರನ್ನು ಸಿಇಒ ಆಗಿ ನೇಮಕ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಆರ್ಥಿಕ ದುರುಪಯೋಗದ ಆರೋಪದ ಮೇಲೆ ಅಶ್ನೀರ್‌ ಗ್ರೋವರ್‌ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಯಿತು. ಇದರ ನಂತರದಲ್ಲಿ ಸುಹೇಲ್‌ ಸಮೀರ್‌ (Suhail Sameer) ಅವರು ಕಂಪನಿಯ ಮೇಲ್ವಿಚಾರಣೆಯನ್ನು ನಡೆಸುತ್ತಿದ್ದರು. ಇತ್ತೀಚಿಗೆ ಈ ಸಂಸ್ಥೆಯು ಉನ್ನತ ಮಟ್ಟದ ಅಧಿಕಾರಿಗಳ ನಿರ್ಗಮನವನ್ನು ಕೂಡ ಕಂಡಿದೆ. ಮುಖ್ಯ ತಂತ್ರಜ್ಞಾನ ಅಧಿಕಾರಿ ವಿಜಯ್ ಅಗರ್ವಾಲ್, ಪೋಸ್ಟ್‌ಪೇ ಮುಖ್ಯಸ್ಥ ನೆಹುಲ್ ಮಲ್ಹೋತ್ರಾ ಮತ್ತು ಸಾಲ ಮತ್ತು ಗ್ರಾಹಕ ಉತ್ಪನ್ನಗಳ ಮುಖ್ಯ ಉತ್ಪನ್ನ ಅಧಿಕಾರಿ ರಜತ್ ಜೈನ್ ಅವರು ಕಳೆದ ತಿಂಗಳಲ್ಲಿ ಕಳೆದ ತಿಂಗಳಲ್ಲಿ ರಾಜಿನಾಮೆ ನೀಡಿದ್ದರು. ಈ ಬೆನ್ನಲ್ಲೇ ಸಮೀರ್‌ ಅವರು ಕೂಡ ತಮ್ಮ ಉನ್ನತ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಆರ್ಥಿಕ ದುರುಪಯೋಗದ ಆರೋಪದ ಮೇಲೆ ಹೊರನಡೆದ ಅಶ್ನೀರ್‌ ಗ್ರೋವರ್‌ ಕಂಪನಿ ಮತ್ತು ತಮ್ಮ ಮಾಜಿ ಸಹೋದ್ಯೋಗಿಗಳ ವಿರುದ್ದವಾಗಿ ಆರೋಪವನ್ನು ಮಾಡುತ್ತಲೇ ಬಂದಿದ್ದರು. ಇತ್ತೀಚೆಗೆ ಸಮೀರ್‌ ಮೇಲೆ ವೈಯಕ್ತಿಕ ದಾಳಿಯನ್ನು ಕೂಡ ನಡೆಸಿದ್ದರು. ಅಲ್ಲದೇ ಭಾರತ್‌ ಪೇ ಅಲ್ಲಿ ನಾಯಕತ್ವ ಬದಲಾವಣೆಯ ಕುರಿತಾಗಿಯೂ ಕೆಲವು ಸಂಭಾಷಣೆಗಳು ಕೇಳಿ ಬಂದಿದ್ದವು. ಈ ಎಲ್ಲಾ ಕಾರಣದಿಂದ ಸಮೀರ್‌ ಅವರು ಭಾರತ್‌ ಪೇ ಸಿಇಒ ಸ್ಥಾನದಿಂದ ಕೆಳಗಿಳಿದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Ration Card Holder : ಪಡಿತರದಾರರಿಗೆ ಗುಡ್‌ನ್ಯೂಸ್ : ಕೇವಲ 500 ರೂ.ಗೆ‌ ಲಭ್ಯವಾಗಲಿದೆ ಗ್ಯಾಸ್ ಸಿಲಿಂಡರ್

ಇದನ್ನೂ ಓದಿ : RBI New Guidelines : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದೀರಾ? ಈ ಕ್ರಮಗಳನ್ನು ಪಾಲಿಸದಿದ್ದರೆ ನಷ್ಟ ತಪ್ಪಿದ್ದಲ್ಲ..!

ಈ ಹಿಂದೆ ಆರ್‌ಪಿ-ಸಂಜೀವ್ ಗೋಯೆಂಕಾ ಗ್ರೂಪ್‌ನಲ್ಲಿ ಎಫ್‌ಎಂಸಿಜಿ ವ್ಯವಹಾರದ ಸಿಇಒ ಆಗಿದ್ದ ಸುಹೇಲ್ ಸಮೀರ್, ಆಗಸ್ಟ್ 2020 ರಲ್ಲಿ ಭಾರತ್‌ಪೇಗೆ ಅಧ್ಯಕ್ಷರಾಗಿ ಸೇರಿದರು. ಆಗಸ್ಟ್ 2021 ರಲ್ಲಿ ಅಧಿಕೃತವಾಗಿ ಸಿಇಒ ಆಗಿ ನೇಮಕಗೊಂಡರು.

Suhail Sameer, the chief executive of Bharat Pay, has stepped down from his post and did not specify the reason behind his resignation.

Comments are closed.