ದೇಶದ ಶಾಲೆಗಳಿಗೆ ಏಕರೂಪದ ಸಮವಸ್ತ್ರ ಜಾರಿಯಾಗಲಿ : ಸುಪ್ರೀಂಗೆ ಸಲ್ಲಿಕೆಯಾಯ್ತು ಅರ್ಜಿ

ನವದೆಹಲಿ : ಶಾಲೆ ಅಂಗಳದಲ್ಲಿ ಆರಂಭವಾದ ಹಿಬಾಜ್ ವಿವಾದ ಈ ಧರ್ಮದ ಸ್ವರೂಪ ಪಡೆದುಕೊಂಡು ತಾರಕಕ್ಕೇರಿದೆ. ಹೀಗಾಗಿ ಪ್ರಕರಣದ ಮತ್ತಷ್ಟು ಸೂಕ್ಷ್ಮಗೊಂಡಿದೆ. ಈ ಮಧ್ಯೆ ಹಿಜಾಬ್ ಹಕ್ಕಿಗಾಗಿ ಬಾಲಕಿಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್ ಹಿಜಾಬ್ ಹಕ್ಕಿನ ವಿಚಾರಣೆ ನಡೆಸುತ್ತಿರುವ ಬೆನ್ನಲ್ಲೇ ಮಧ್ಯಂತರ ಆದೇಶವನ್ನು ನೀಡಿದೆ. ಹಿಜಾಬ್ ಮಧ್ಯಂತರ ಆದೇಶದಿಂದ ಅಸಮಧಾನಗೊಂಡಿರುವ ಕೆಲವರು ಸುಪ್ರೀಂ ಕೋರ್ಟ್ ( Supreme Court uniform enforcement) ಮೆಟ್ಟಿಲೇರಿ ಅಲ್ಲೂ ಹಿನ್ನಡೆ ಅನುಭವಿಸಿದ್ದಾರೆ. ಆದರೆ ಈಗ ಮತ್ತೊಂದು ಅರ್ಜಿ ಸುಪ್ರೀಂ ಅಂಗಳಕ್ಕೆ ಸಲ್ಲಿಕೆಯಾಗಿದೆ.

ಸುಪ್ರೀಂ ಕೋರ್ಟ್ ಹಿಜಾಬ್ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿದೆ. ಅಲ್ಲದೇ ಹೈಕೋರ್ಟ್ ನಲ್ಲಿ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಹೀಗಾಗಿ ವಿಚಾರಣೆ ನಡೆಸಲು ನಿರಾಕರಿಸಿದೆ. ಅಲ್ಲದೇ ದೇಶಕ್ಕೆ ಈ ಕಿಚ್ಚನ್ನು, ವಿವಾದವನ್ನು ಹಚ್ಚದಂತೆ ಎಚ್ಚರಿಸಿದೆ. ಹೀಗಿರುವಾಗಲೇ ರಾಜ್ಯದ ಹಿಜಬ್ ವಿವಾದ ಪ್ರಶ್ನಿಸಿ ಮತ್ತೊಂದು ಅರ್ಜಿ ಸುಪ್ರೀಂಗೆ ಸಲ್ಲಿಕೆ ಯಾಗಿದೆ. ರಾಜ್ಯದಲ್ಲಿ ಹಿಜಾಬ್ v/s ಕೇಸರ್ ಶಾಲ್ ವಿವಾದ ಜೋರಾಗಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಹೊಸ ಪಿಐಎಲ್ ದಾಖಲಾಗಿದೆ. ವಕೀಲ ನಿಖಿಲ್ ಉಪಾಧ್ಯಾಯ ರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡಿದ್ದು, ದೇಶದ ಎಲ್ಲ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಏಕರೂಪ ಸಮವಸ್ತ್ರ ಧರಿಸಲು ಸೂಚಿಸುವಂತೆ ಸುಪ್ರೀಂ ಗೆ ಮನವಿ‌ಮಾಡಿದೆ.

ದೇಶದ ಎಲ್ಲ ಸರ್ಕಾರಿ ಶಾಲೆಗಳಿಗೆ ಏಕರೂಪದ ಸಮವಸ್ತ್ರ ಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಲು ನಿಖಿಲ್ ಉಪಾಧ್ಯಾಯ ಮನವಿ ಮಾಡಿದ್ದಾರೆ. ಅಮೇರಿಕಾ, ಫ್ರಾನ್ಸ್, ಸಿಂಗಾಪುರ್, ಬ್ರಿಟನ್, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಏಕರೂಪದ ಸಮವಸ್ತ್ರ ನಿಯಮ ಜಾರಿಯಲ್ಲಿದೆ. ಇದರಿಂದ ಮಕ್ಕಳಲ್ಲಿ ಸಮಾನತೆ ಭಾವನೆ ಮೂಡುತ್ತದೆ. ಹೀಗಾಗಿ ಶಾಲೆಗಳಲ್ಲಿ ಶಾಂತಿ ಮತ್ತು ಸಮಾನತೆಗಾಗಿ ಏಕರೂಪದ ಸಮವಸ್ತ್ರಕ್ಕೆ ಮನವಿ ಮಾಡಿದ್ದಾರೆ. ಆದರೆ ಹಿಜಾಬ್ ವಿಚಾರದಲ್ಲಿ ಯಾವುದೇ ಸಂಗತಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಹೀಗಾಗಿ ಈಗ ನಿಖಿಲ್ ಉಪಾಧ್ಯಾಯ ಮನವಿಯನ್ನು ಸುಪ್ರೀಂ ಕೋರ್ಟ್ ಮನ್ನಿಸಲಿದ್ಯಾ ಅನ್ನೋದು ಸದ್ಯದ ಕುತೂಹಲ.

ಸದ್ಯ ಕರ್ನಾಟಕದಲ್ಲಿ ಹಿಜಾಬ್ ವಿಚಾರಕ್ಕೆ ಕಾಲೇಜುಗಳಲ್ಲಿ ಕಾವೇರಿದ ವಾತಾವರಣವಿದ್ದು ಮುಂಜಾಗ್ರತಾ ಕ್ರಮವಾಗಿ ಬುಧವಾರದ ತನಕ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸ ಲಾಗಿದೆ. ಈ ಮಧ್ಯೆ ಹಲವೆಡೆಯಿಂದ ಹಿಜಾಬ್ ಪ್ರಕರಣ ದಿಂದ ಮಕ್ಕಳ ಮನಸ್ಥಿತಿ ಹಾಳಾಗುತ್ತಿದೆ. ಶಿಕ್ಷಣ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವಾಗುತ್ತಿದೆ. ಹೀಗಾಗಿ ಎಲ್ಲೆಡೆ ಸಮವಸ್ತ್ರ ಕಡ್ಡಾಯಗೊಳ್ಳಬೇಕೆಂಬ ಒತ್ತಡವೂ ವ್ಯಕ್ತವಾಗಿದೆ. ಈ ಹೊತ್ತಿನಲ್ಲಿ ಸುಪ್ರೀಂಗೆ ಸಲ್ಲಿಕೆಯಾಗಿರುವ ಅರ್ಜಿ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ : ಹಿಜಾಬ್ ವಿದ್ಯಾರ್ಥಿನಿಯರ ಹೋರಾಟದ ಹಿಂದಿನ ಶಕ್ತಿ ಯಾರು ? ಬಿ.ಸಿ.ನಾಗೇಶ್ ಕೊಟ್ರು ಎಕ್ಸಕ್ಲೂಸಿವ್ ಡಿಟೇಲ್ಸ್

ಇದನ್ನೂ ಓದಿ : ಸೋಮವಾರದಿಂದ ಪ್ರೌಢಶಾಲೆ ಪುನಾರಂಭ : ಸಿಎಂ ಬಸವರಾಜ್‌ ಬೊಮ್ಮಾಯಿ

( Supreme Court has applied for uniform enforcement to all schools across the country)

Comments are closed.