IPL Auction 2022 Updates: ಯಾವ ತಂಡ ಸೇರಿದ್ದಾರೆ ನಿಮ್ಮ ನೆಚ್ಚಿನ ಆಟಗಾರರು?

ಬೆಂಗಳೂರಿನಲ್ಲಿ ಇಂದು 15ನೇ ಆವೃತ್ತಿಯ ಐಪಿಎಲ್ ( IPL 2022 Auction Live Updates) ತಂಡಗಳಿಗಾಗಿ ಆಟಗಾಗಾರರ ಹರಾಜು ಪ್ರಕ್ರಿಯೆ (IPL Auction 2022 Updates) ನಡೆಯುತ್ತಿದೆ. ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ತಂಡಗಳು ಈ ವರ್ಷ ಹೊಸದಾಗಿ ಸೇರ್ಪಡೆಯಾಗಿದೆ. ಹೀಗಾಗಿ ಆಟಗಾರರ ಪೈಕಿ ತೀವ್ರ ಪೈಪೋಟಿ ಇರಲಿದೆ. ತಮ್ಮ ನೆಚ್ಚಿನ ಆಟಗಾರ ಯಾವ ತಂಡ ಸೇರಬಹುದು ಎಂಬುವತ್ತ ಎಲ್ಲರ ಕುತೂಹಲ ನೆಟ್ಟಿದೆ.

ಪಂಜಾಬ್ ತಂಡದಿಂದ ಲಕ್ನೋ ತಂಡಕ್ಕೆ ಸೇರಿದ ದೀಪಕ್ ಹೂಡ
ಕಳೆದ ಆವೃತ್ತಿಯಲ್ಲಿ ಮಾಧ್ಯಮ ಕ್ರಮಾಂಕದ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲೂ, ಉತ್ತಮ ಪ್ರದರ್ಶನ ನೀಡಿದ್ದ ದೀಪಕ್ ಹೂಡರನ್ನು ಈ ಬಾರಿ ಹೊಸ ತಂಡ ಲಕ್ನೋ 5.75 ಕೋಟಿಗೆ ಖರೀದಿಸಿದೆ.

ತವರಿನ ತಂಡದಲ್ಲೇ ಉಳಿದ ಹರ್ಷಲ್

ಅತಿ ಹೆಚ್ಚು ವಿಕೆಟ್ ಉರುಳಿಸಿ ಗೆಲುವಿಗೆ ಸಾಥ್ ನೀಡಿದ್ದ, ಹರ್ಷಲ್ ಪಟೇಲ್ ರನ್ನು ಈ ಬಾರಿಯೂ ಆರ್ಸಿಬಿ ತಂಡ ಖರೀದಿಸಿದೆ. ಇದಕ್ಕಾಗಿ ಬರೋಬ್ಬರಿ 10.75 ಕೋಟಿ ರೂಪಾಯಿ ಕೊಟ್ಟಿದೆ.

ಕೇಕೆಆರ್ ನಲ್ಲಿ ಉಳಿದ ರಾಣಾ

ಕೇಕೆಆರ್ ತಂಡ, 8 ಕೋಟಿ ನೀಡಿ ಆರಂಭಿಕ ಬ್ಯಾಟ್ಸ್ಮನ್ ನಿತೀಶ್ ರಾಣರನ್ನು ತನ್ನಲೇ ಉಳಿಸಿದೆ.

ನಿರಾಸೆಯಲ್ಲಿ ಶಕೀಬ್

ಆಲ್ ರೌಂಡರ್ ಆಗಿರುವ ಬಾಂಗ್ಲಾ ಆಟಗಾರ ಶಕೀಬ್ ಅಲ್ ಹಸನ್ ಕಳೆದ ಬಾರಿ ಕೇಕೆಆರ್ ಪರ ಆಡಿದ್ದರು. ಈ ಬಾರಿ ಯಾವುದೇ ತಂಡ ಅವರನ್ನು ಖರೀದಿಸಿಲ್ಲ.

ಹೊಸ ತಂಡಕ್ಕೆ ಸೇರಿದ ಜೇಸನ್

ಹೈದರಾಬಾದ್ ಪರ ಕಳೆದ ಆವೃತ್ತಿಗಳಲ್ಲಿ ಆಡಿದ ಜೇಸನ್ರನ್ನು, ಈ ಬಾರಿ 8.75 ಕೋಟಿ ನೀಡಿ ಲಕ್ನೋ ತಂಡ ಖರೀದಿಸಿದೆ.

ಮತ್ತೆ ಚೆನ್ನೈ ಪರ ಆಡಲಿರುವ ಬ್ರಾವೋ

ಆಲ್ ರೌಂಡರ್ ಡ್ವೇನ್ ಬ್ರಾವೋ ಅವರನ್ನು ಈ ಬಾರಿಯೂ ಚೆನ್ನೈ ಖರೀದಿಸಿದೆ. ಇದಕ್ಕಾಗಿ 4.4 ಕೋಟಿ ನೀಡಿದೆ.

 ರಾಜಸ್ಥಾನ್ ಟೀಮ್ ಹಾರಿದ ಕನ್ನಡಿಗ ಪಡಿಕ್ಕಲ್

ಕಳೆದ ಆವೃತ್ತಿಯಲ್ಲಿ ಬೆಂಗಳೂರು ಪರ ಅಡಿದ್ದ ಪಡಿಕ್ಕಲ್ ಅವರನ್ನು ಈ ಬಾರಿ ರಾಜಸ್ಥಾನ ರಾಯಲ್ಸ್ 7.75 ಕೋಟಿ ನೀಡಿ ಖರೀದಿಸಿದೆ.

ಸುರೇಶ್ ರೈನಾ ಮೊದಲ ಸುತ್ತಿನಲ್ಲಿ ಅನ್ ಸೋಲ್ಡ್

ಬೇಸ್ ಮೊತ್ತ 2 ಕೋಟಿ ಇರುವ ಸುರೇಶ್ ರೈನಾ ಮೊದಲ ಸುತ್ತಿನಲ್ಲಿ ಹರಾಜಾಗದೆ ಉಳಿದಿದ್ದಾರೆ.

ಲಕ್ನೋ ಪಾಲಾದ ಪಾಂಡೆ

ಮನೀಷ್ ಪಾಂಡೆಯವರನ್ನು ಈ ಬಾರಿ ಲಕ್ನೋ ತಂಡ 4.6 ಕೋಟಿ ಕೊಟ್ಟು ಖರೀದಿಸಿದೆ.

ದುಪ್ಲೆಸಿ  ಬೆಂಗಳೂರಿಗೆ

ಫಫ್ ದುಪಳೆಸಿಯನ್ನು ಭರ್ಜರಿ 7 ಕೋಟಿ ಕೊಟ್ಟು ಆರ್ ಸಿಬಿ ಖರೀದಿಸಿದೆ.

ಇದನ್ನೂ ಓದಿ:

(IPL Auction 2022 Updates Shreyas Iyer most expensive player bought by KKR for Rs 12.25 crore Charu Sharma new auctioneer)

Comments are closed.